Connect with us


      
ವಿದೇಶ

ಶ್ರೀಲಂಕಾ ಬಿಕ್ಕಟ್ಟು: ಶಾಲಾ ಕಾಲೇಜುಗಳು ಬಂದ್, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ

Vanitha Jain

Published

on

ಕೊಲಂಬೊ: ಜೂನ್ 27 (ಯು.ಎನ್.ಐ.) ಶ್ರೀಲಂಕಾ ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದ್ದು, ಪೆಟ್ರೋಲ್ ಬಳಕೆ ಕಡಿಮೆ ಮಾಡುವ ಸಲುವಾಗಿ ಶಾಲಾ ಕಾಲೇಜುಗಳು ಮುಚ್ಚಲು ಆದೇಶ ನೀಡಿರುವುದರ ಜೊತೆಗೆ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಆಯ್ಕೆ ನೀಡಿದ್ದಾರೆ.

ಇಂಧನಕ್ಕೆ ಸರತಿ ಸಾಲು ಶುರುವಾದ ಹಿನ್ನೆಲೆ ಶ್ರೀಲಂಕಾ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಮುಂದಿನ ಸೂಚನೆ ಬರುವವರೆಗೆ ಮನೆಯಿಂದ ಕೆಲಸ ಮಾಡಲು ಸರ್ಕಾರವು ಉದ್ಯೋಗಿಗಳಿಗೆ ಹೇಳಿದೆ,

ಆದರೆ ವಾಣಿಜ್ಯ ರಾಜಧಾನಿ ಕೊಲಂಬೊ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಾಲೆಗಳನ್ನು ಒಂದು ವಾರದವರೆಗೆ ಮುಚ್ಚಲಾಗಿದೆ.

Share