Published
6 months agoon
By
UNI Kannadaಕೊಲಂಬೊ, ಜ 8(ಯುಎನ್ ಐ) ಶ್ರೀಲಂಕಾದ ಸ್ಟಾರ್ ಕ್ರಿಕೆಟಿಗರಾದ ಕುಶಾಲ್ ಮೆಂಡಿಸ್, ನಿರೋಶನ್ ಡಿಕ್ವೆಲ್ಲಾ, ದನುಷ್ಕಾ ಗುಣತಿಲಕ ಅವರ ಮೇಲಿನ ಒಂದು ವರ್ಷದ ನಿಷೇಧವನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ರದ್ದುಪಡಿಸಿದೆ. ಈ ವಿಷಯವನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಪತ್ರಿಕಾಗೋಷ್ಠಿಯಲ್ಲಿ ಖಚಿತಪಡಿಸಿದೆ. ಈ ಮೂವರು ಆಟಗಾರರು ದೇಶೀಯ ಕ್ರಿಕೆಟ್ ಕ್ರಿಕೆಟ್ ನೊಂದಿಗೆ ರಾಷ್ಟ್ರೀಯ ತಂಡದ ಆಯ್ಕೆಗೆ ಲಭ್ಯರಿರುತ್ತಾರೆ ಎಂದು ಮಂಡಳಿ ತಿಳಿಸಿದೆ. ಆದರೆ ಕಳೆದ ವರ್ಷ ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಶ್ರೀಲಂಕಾ ಆಟಗಾರರು ಡಿಕ್ವೆಲ್ಲಾ, ಗುಣತಿಲಕ ಹಾಗೂ ಮೆಂಡಿಸ್ ಬಯೋ ಬಬಲ್ ಉಲ್ಲಂಘಿಸಿ ಹೊರಗೆ ಕಾಣಿಸಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದ ಶ್ರೀಲಂಕಾ ಕ್ರಿಕೆಟ್ ಶಿಸ್ತು ಸಮಿತಿ ಮೂವರು ಆಟಗಾರರಮೇಲೆ ಒಂದು ವರ್ಷ ನಿಷೇಧ ವಿಧಿಸಿತ್ತು. “ಮೂವರು ಆಟಗಾರರ ಕೋರಿಕೆಯ ಮೇರೆಗೆ, ಮಂಡಳಿ ಅವರಿಗೆ ವಿಧಿಸಿದ್ದ ನಿಷೇಧವನ್ನು ರದ್ದುಪಡಿಸಲು ನಿರ್ಧರಿಸಿದೆ. ಅಮಾನತು ಸಮಯದಲ್ಲಿ, ಮೂವರು ಆಟಗಾರರಿಗೆ ಒಬ್ಬ ವೈದ್ಯರೊಂದಿಗೆ ಕೌನ್ಸಿಲಿಂಗ್ ನೀಡಲಾಯಿತು. ವೈದ್ಯರು ಸಲ್ಲಿಸಿದ ವರದಿಯನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚೊಚ್ಚಲ ರಣಜಿ ಟ್ರೋಫಿ ಮುಡಿಗೇರಿಸಿಕೊಂಡ ಮಧ್ಯಪ್ರದೇಶ; ಆರ್ ಸಿಬಿ .. ಆರ್ ಸಿಬಿ ಎಂಬ ಕೂಗು
ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ ಕೋವಿಡ್ ಸೋಂಕು!
ಕ್ರಿಕೆಟ್: ಐರ್ಲೆಂಡ್, ಇಂಗ್ಲೆಂಡ್ ವಿರುದ್ಧದ ಪಂದ್ಯಗಳು ಸೋನಿಯಲ್ಲಿ ಪ್ರಸಾರ
ಕ್ರಿಕೆಟಿಗ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪಾದರ್ಪಣೆ ಮಾಡಿ 15 ವರ್ಷ! ಖುಷಿಯಲ್ಲಿ ಆರ್ ಎಸ್
ವಿಶ್ವ ಈಜು ಚಾಂಪಿಯನ್ಶಿಪ್: ಕೈ ಮುರಿದುಕೊಂಡ ಆಸ್ಟ್ರೇಲಿಯಾದ ಈಜುಗಾರ್ತಿ!
ತಂಡಕ್ಕೆ ಆಯ್ಕೆಯಾಗಲಿಲ್ಲವೆಂದು ಪಾಕ್ ಕ್ರಿಕೆಟಿಗ ಆತ್ಮಹತ್ಯೆ ಯತ್ನ