Connect with us


      
ಕರ್ನಾಟಕ

ಸಚಿವಾಲಯದ ಆಪ್ತ ಕಾರ್ಯದರ್ಶಿಗಳ ಸಂಘದ ಅಧ್ಯಕ್ಷರಾಗಿ ಶ್ರೀಧರ್‌ಮೂರ್ತಿ ಎಸ್.ಪಂಡಿತ್

UNI Kannada

Published

on

ಬೆಂಗಳೂರು: ಜನೆವರಿ 07 (ಯು.ಎನ್.ಐ) ಸಚಿವಾಲಯದ ಆಪ್ತ ಕಾರ್ಯದರ್ಶಿಗಳ ಸಂಘದ ಅಧ್ಯಕ್ಷರಾಗಿ ಹಿರಿಯ ಆಪ್ತ ಕಾರ್ಯದರ್ಶಿ ಶ್ರೀಧರ್ ಮೂರ್ತಿ ಎಸ್.ಪಂಡಿತ್ ಆಯ್ಕೆಯಾಗಿದ್ದಾರೆ.

ಸರ್ವಾನುಮತದಿಂದ ಸಂಘದ ವತಿಯಿಂದ ಶುಕ್ರವಾರ ನಡೆದ ಕಾರ್ಯಕಾರಿ ಸಭೆಯಲ್ಲಿ ಶ್ರೀಧರ್‌ಮೂರ್ತಿ ಎಸ್.ಪಂಡಿತ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಪ್ರಸಕ್ತ ಶ್ರೀಧ‌ರ್‌ಮೂರ್ತಿ, ಯೋಜನಾ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಇವರ ಹಿರಿಯ ಆಪ್ತಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಸಂಘದಲ್ಲಿ ಹಿರಿಯ ಶೀಘ್ರಲಿಪಿಗಾರರು, ಪತ್ರಾಂಕಿತ ಆಪ್ತ ಸಹಾಯಕರು, ಗ್ರೇಡ್ -1 ಗ್ರೇಡ್-2‌ ಆಯ್ಕೆ ಶ್ರೇಣಿ ವೃಂದದ ಆಪ್ತಕಾರ್ಯದರ್ಶಿ ಅಧಿಕಾರಿಗಳು ಸದಸ್ಯರಾಗಿದ್ದು ಸಚಿವಾಲಯದಲ್ಲಿ ಇವರ ಹಲವಾರು ಬೇಡಿಕೆಗಳಿನ್ನೂ ಈಡೇರಿಲ್ಲ. ಆಪ್ತಕಾರ್ಯದರ್ಶಿ ಹುದ್ದೆ ಪ್ರಮುಖವಾಗಿದ್ದು, ಹೆಚ್ಚಿನ ಮಹಿಳಾ ನೌಕರರೂ ಸಂಘದಲ್ಲಿದ್ದಾರೆ. ಸಮಸ್ಯೆಗಳ ಬಗ್ಗೆ ಹಂತಹಂತವಾಗಿ ಸರ್ಕಾರದ ಗಮನಕ್ಕೆ ತಂದು ಪರಿಹರಿಸಲು ಶ್ರಮಿಸುವುದಾಗಿ ಶ್ರೀಧರ್‌ಮೂರ್ತಿ ತಿಳಿಸಿದ್ದಾರೆ.

ಶ್ರೀಧರ್‌ಮೂರ್ತಿ, ಈ ಹಿಂದೆ ಆರೋಗ್ಯ,ವೈದ್ಯಕೀಯ ಸೇರಿದಂತೆ ಹಲವು ಇಲಾಖೆಗಳಲ್ಲಿ ಹಾಗೂ ಯಲ್ಲಾಪುರ,ಸೊರಬ,ಕೊಪ್ಪ,ಚಳ್ಳಕೆರೆಯಲ್ಲಿ ತಹಶೀಲ್ದಾರ್‌ರಾಗಿ ಸುಮಾರು 20ವರ್ಷಕ್ಕೂ ಹೆಚ್ಚಿನ‌ ಕಾಲ ಸಚಿವಾಲಯದಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

Share