Published
6 months agoon
ಕೊಲಂಬೊ : ಜನೆವರಿ 11 (ಯು.ಎನ್.ಐ.) ಶ್ರೀಲಂಕಾದ ಏಳು ರಾಷ್ಟ್ರೀಯ ತಮಿಳು ಪಕ್ಷಗಳ ನಾಯಕರು ಭಾರತದ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಶ್ರೀಲಂಕಾದಲ್ಲಿರುವ ತಮಿಳರ ಹಕ್ಕುಗಳನ್ನು ಪಡೆಯಲು ಭಾರತ ಸಹಾಯ ಮಾಡಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
1987 ಜುಲೈ 29ರಂದು ಭಾರತ ಹಾಗೂ ಶ್ರೀಲಂಕಾ ಮಧ್ಯೆ ಒಪ್ಪಂದವಾಗಿ ಸಹಿ ಕೂಡ ಹಾಕಲಾಗಿತ್ತು. ಇದರಲ್ಲಿ ಶ್ರೀಲಂಕಾ ಸಂವಿಧಾನದ 13ನೇ ತಿದ್ದುಪಡಿ ಅಡಿ ದೇಶದ ತಮಿಳರಿಗೆ ಎಲ್ಲ ರೀತಿಯ ಹಕ್ಕುಗಳನ್ನು ನೀಡಬೇಕೆಂದು ನಿರ್ಣಯ ಕೈಗೊಳ್ಳಲಾಗಿತ್ತು. ಆದ್ರೆ 35 ವರ್ಷ ಕಳೆದ್ರೂ ಶ್ರೀಲಂಕಾದ ಯಾವುದೇ ಸರ್ಕಾರ ತಮಿಳರ ಹುಕ್ಕುಗಳಿಗೆ ಕಿವಿಗೊಡಲಿಲ್ಲ.
ಶ್ರೀಲಂಕಾದ 7 ರಾಷ್ಟ್ರೀಯ ಪಕ್ಷಗಳಿಂದ ಪತ್ರ
ಶ್ರೀಲಂಕಾದ ಪಕ್ಷಗಳಾದ ಟಿಎನ್ಎ, ಐಟಿಎಕೆ, ಟಿಇಎಲ್ಒ, ಪಿಎಲ್ಒಟಿಇ, ಟಿಎಂಪಿ ಮತ್ತು ಟಿಎನ್ಪಿಯ ರಾಷ್ಟ್ರೀಯ ಅಧ್ಯಕ್ಷರು ಪ್ರಧಾನಿ ಮೋದಿಗೆ ಈ ಪತ್ರ ಬರೆದಿದ್ದಾರೆ. ಈ ಪಕ್ಷಗಳು ಉತ್ತರ ಮತ್ತು ಪೂರ್ವ ಶ್ರೀಲಂಕಾದಲ್ಲಿ ಅಧಿಕ ಪ್ರಭಾವ ಹೊಂದಿದ್ದಾರೆ. ಈ ಪಕ್ಷಗಳ ಬೆಂಬಲಿಗರಲ್ಲಿ ಹೆಚ್ಚಿನವರು ತಮಿಳರು. ಅದಕ್ಕಾಗಿಯೇ ಈ ಪಾರ್ಟಿಗಳನ್ನು ತಮಿಳರ ಪಕ್ಷಗಳು ಎಂದು ಕರೆಯುತ್ತಾರೆ. ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ತಮಿಳರು ಸುಧಾರಣೆಗಳನ್ನು ಬಯಸುತ್ತಿದ್ದಾರೆ. ತಮ್ಮ ಹಕ್ಕುಗಳನ್ನು ಶ್ರೀಲಂಕಾ ಸರ್ಕಾರದಿಂದ ಕೊಡಿಸುವಂತೆ ಹಾಗೂ ಹೇಗೆ ಅನ್ನೋ ಬಗ್ಗೆ ಎಲ್ಲ ಅಂಶಗಳನ್ನು ಅನುಕ್ರಮವಾಗಿ ಪತ್ರದಲ್ಲಿ ಮೋದಿಗೆ ತಿಳಿಸಲಾಗಿದೆ. ಶ್ರೀಲಂಕಾದಲ್ಲಿರುವ ಭಾರತೀಯ ಹೈಕಮಿಷನ್ ಮೂಲಕ ಈ ಪತ್ರವನ್ನು ಪ್ರಧಾನಿ ಮೋದಿಗೆ ಕಳುಹಿಸಲಾಗಿತ್ತು.
ಶ್ರೀಲಂಕಾದಲ್ಲಿ ತಮಿಳರಿಗೆ ಅನ್ಯಾಯ ಆಗಿದ್ದು ಹೇಗೆ?
ಈ ಹಿಂದೆ ಭಾರತ ಮತ್ತು ಶ್ರೀಲಂಕಾ ನಡುವೆ 1987ರಲ್ಲಿ ಆದ ಒಪ್ಪಂದದ ಪ್ರಕಾರ, ಶ್ರೀಲಂಕಾ ಸಂವಿಧಾನದ 13ನೇ ತಿದ್ದುಪಡಿಯ ಅಡಿಯಲ್ಲಿ, ರಾಜ್ಯ ಪರಿಷತ್ ಗಳನ್ನು ನಿರ್ಮಾಣ ಮಾಡಬೇಕು. ಅದರಲ್ಲಿ ತಮಿಳರ ಜನಸಂಖ್ಯೆ ಆಧಾರದ ಮೇಲೆ ಅವರು ಆಯ್ಕೆ ಆಗಿ ತಮ್ಮ ಸಮುದಾಯವನ್ನು ಪ್ರತಿನಿಧಿಸುವಂತಾಗಬೇಕು ಎಂದು ತಿಳಿಸಿದೆ. ಆದರೆ, ಈ ಒಪ್ಪಂದ ಇನ್ನೂ ಜಾರಿಯಾದ ಕಾರಣ ತಮಿಳರು ಅಧಿಕಾರ ಮತ್ತು ವ್ಯವಸ್ಥೆಯಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಇದು ಶ್ರೀಲಂಕಾ ತಮಿಳರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯಪ್ರವೇಶಿಸಬೇಕು ಹಾಗೂ ನ್ಯಾಯ ಒದಗಿಸಿಕೊಡಬೇಕು ಎಂದು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಶ್ರೀಲಂಕಾದಲ್ಲಿ ಬಹುಸಂಖ್ಯಾತ ಸಿಂಹಳೀಯರು ಸುಮಾರು 74.9%ರಷ್ಟು ಜನ ಬೌದ್ಧಧರ್ಮವನ್ನು ಅನುಸರಿಸುತ್ತಾರೆ. ತಮಿಳರ ಜನಸಂಖ್ಯೆ ಸುಮಾರು 15% ರಷ್ಟು ಹಾಗೂ ಮುಸ್ಲಿಮರು 9.7% ರಷ್ಟಿದ್ದಾರೆ. ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಮುಸ್ಲಿಂ ಹಕ್ಕುಗಳ ಬಗ್ಗೆಯೂ ಪ್ರಸ್ತಾಪ ಮಾಡಲಾಗಿದೆ. ತಮಿಳರು ಹಾಗೂ ಮುಸ್ಲಿಂ ಜನರಿಗೆ ಅವರ ಹಕ್ಕುಗಳು ಸಿಗುವಂತಾಗಬೇಕು. ಈಗಾಗಲೇ ಭಾರತ ಸರ್ಕಾರ ಈ ಬಗ್ಗೆ ಧ್ವನಿ ಎತ್ತಿದೆ. ಇದಕ್ಕಾಗಿ ಧನ್ಯವಾದ ತಿಳಿಸುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವೀರೇಂದ್ರ ಹೆಗ್ಗಡೆ ಸೇರಿ ನಾಲ್ವರು ರಾಜ್ಯಸಭೆಗೆ ನಾಮನಿರ್ದೇಶನ: ಪ್ರಧಾನಿ ಅಭಿನಂದನೆ
“ತಂತ್ರಜ್ಞಾನದ ಸರಿಯಾದ ಬಳಕೆ ಇಡೀ ಮಾನವಕುಲಕ್ಕೆ ಕ್ರಾಂತಿಕಾರಿ” : ಮೋದಿ
ಪ್ರಧಾನಿ ಮೋದಿ ಭದ್ರತಾ ಲೋಪ; ಮೋದಿ ಹೆಲಿಕಾಪ್ಟರ್ ಬಳಿ ಕಪ್ಪು ಬಲೂನ್ ಹಾರಾಟ
ಸ್ವಾತಂತ್ರ್ಯ ಹೋರಾಟಗಾರ ಪಸಲ ಕೃಷ್ಣ ಮೂರ್ತಿ ಪುತ್ರಿಯ ಆಶೀರ್ವಾದ ಪಡೆದ ಪ್ರಧಾನಿ ಮೋದಿ
“ತುರ್ತು ಪರಿಸ್ಥಿತಿಯನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ”: ಮೋದಿ
ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜರ್ಮನಿಗೆ ಆಗಮಿಸಿದ ಪ್ರಧಾನಿ ಮೋದಿ