Published
6 months agoon
ಬೆಂಗಳೂರು : ಜನೆವರಿ 06 (ಯು.ಎನ್.ಐ.) ಆಯುಷ್ ಇಲಾಖೆಯಲ್ಲಿ ಖಾಲಿಯಿರುವ 80 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಕ್ಯಾಬಿನೆಟ್ ಮೀಟಿಂಗ್ ಬಳಿಕ ಈ ಮಾಹಿತಿ ನೀಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಕರ್ನಾಟಕ ಆಯುಷ್ ಶುಶ್ರೂಷಕರ ಸಂಘದಲ್ಲಿ ಖಾಲಿಯಿರುವ 177 ಹುದ್ದೆಗಳ ಪೈಕಿ 80 ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅನುಮತಿ ನೀಡಲಾಗಿದೆ. ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವವರಿಗೆ ಪ್ರತಿ ವರ್ಷದ ಸೇವೆಗೆ ಶೇಕಡಾ 2 ಅಂಕಗಳಿಂದ 20 ಅಂಕಗಳವರಗೆ ಕೊಡಬೇಕೆಂದು ತೀರ್ಮಾನಿಸಲಾಗಿದೆ. ಮತ್ತು ಒಂದು ವರ್ಷ ಸೇವೆ ಮಾಡಿದವರಿಗ ಗರಿಷ್ಠ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಕೆಪಿಎಸ್ ಸಿ ಕೈಗೊಳ್ಳುತ್ತಿರುವ ನೇಮಕಾತಿಗೂ ಇದಕ್ಕೂ ಸಂಬಂಧವಿಲ್ಲ. ಕೆಪಿಎಸ್ ಸಿ ಹೊರತುಪಡಿಸಿ ಇದು ಸರ್ಕಾರವೇ ಮಾಡಿಕೊಳ್ಳುತ್ತಿರುವ ನೇರ ನೇಮಕಾತಿ ಎಂದು ಸಚಿವರು ತಿಳಿಸಿದರು.
ಇಂಧನ ಇಲಾಖೆ: 1385 ಅಭ್ಯರ್ಥಿಗಳಿಗೆ ಏಕಕಾಲಕ್ಕೆ ನೇಮಕ ಆದೇಶ
ಮೈಶುಗರ್ ಕಾರ್ಖಾನೆ ಆಗಸ್ಟ್ನಲ್ಲಿ ಪುನಾರಂಭ!
ರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮು ಅವರಿಗೆ ಜೆಡಿಎಸ್ ಬೆಂಬಲ
‘ಪ್ರತಿ ಹತ್ಯೆಯಲ್ಲೂ ಬಿಜೆಪಿ ಹೆಣದ ರಾಜಕೀಯ’ – ದಿನೇಶ್ ಗುಂಡೂರಾವ್
ರಾಜಸ್ಥಾನ ಹತ್ಯೆ: ಕಾಂಗ್ರೆಸ್ ಸರಕಾರ ವಜಾಗೊಳಿಸಲು ಕಟೀಲ್ ಆಗ್ರಹ
ರಾಜಸ್ಥಾನದಲ್ಲಿ ಟೈಲರ್ ಶಿರಚ್ಛೇದ: ಹತ್ಯೆ ಖಂಡಿಸಿದ ಎಚ್ಡಿಕೆ