Connect with us


      




ದೇಶ

ವಿಶಾಖಪಟ್ಟಣ ದೋಚುವುದು ನಿಲ್ಲಿಸಿ: ನಾರಾ ಲೋಕೇಶ್

UNI Kannada

Published

on

Nara Lokesh

ಅಮರಾವತಿ: ಡಿಸೆಂಬರ್ 16, (ಯು.ಎನ್.ಐ.) ತಲೆಯಲ್ಲಿ ವಿಷಯವಿಲ್ಲದ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ರಾಜ್ಯಕ್ಕೆ ಮೂರು ರಾಜಧಾನಿ ಎಂದು ಸಮಯ ವ್ಯರ್ಥಮಾಡಿಕೊಂಡು ತಿರುಗುತ್ತಿದ್ದರೇ ರಾಜ್ಯದ ಬೃಹತ್ ಕಂಪನಿಗಳೆಲ್ಲ ಪಕ್ಕದ ರಾಜ್ಯಗಳತ್ತ ಸಾಲುಗಟ್ಟಿ ಹೊರಟಿದೆ ಎಂದು ತೆಲುಗು ದೇಶಂ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಆಪಾದಿಸಿದರು.

ತೆಲುಗು ದೇಶಂ ಪಾರ್ಟಿ ಅಧಿಕಾರವಧಿಯಲ್ಲಿ ಆರ್ಥಿಕ ರಾಜಧಾನಿಯಾಗಿ, ಐಟಿ ಹಬ್ ಆಗಿ ಬೆಳೆದಿದ್ದ ವಿಶಾಖಪಟ್ಟಣಂ ಈಗ ಕಳೆಗುಂದಿದೆ. 15 ವರ್ಷಗಳಿಂದ ಸಾವಿರಾರು ಯುವಕರಿಗೆ ಉದ್ದಯೋಗಾವಕಾಶವನ್ನು ನೀಡಿದ್ದ ಹೆಚ್ ಎಸ್ ಬಿ ಸಿ ಈಗ ಮುಚ್ಚಲ್ಪಟ್ಟಿರುವುದು ನೊವಿನಸಂಗತಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ ಸರ್ಕಾರದ ವ್ಯತಿರಿಕ್ತ ನಿರ್ಣಯಗಳು, ಬೆದರಿಕೆಗೆ ಭಯಪಟ್ಟ ಕಾರ್ಪೋರೇಟ್ ಕಂಪೆನಿಗಳು ಪಕ್ಕದ ರಾಜ್ಯದತ್ತ ಮುಖಮಾಡಿದೆ. ಈಗ ವಿಶಾಕಪಟ್ಟಣದಲ್ಲಿರುವ ಹೆಚ್ಎಸ್ ಬಿ ಸಿ ಮುಚ್ಚಲ್ಪಟ್ಟಿರುವುದು ರಾಜ್ಯ ಸರ್ಕಾರದ  ಅಸಮರ್ಥತೆಯನ್ನ  ಎತ್ತಿ ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂರು ರಾಜಧಾನಿ ಹೆಸರಿನಲ್ಲಿ ಮಾಡಿದ ಮೋಸ ಸಾಕು, ಇನ್ನಾದರು ವಿಶಾಖಪಟ್ಟಣವನ್ನು ದೋಚ್ಚುವುದನ್ನ ನಿಲ್ಲಿಸಿ ಅಭಿವೃದ್ದಿ ಕೆಲಸಗಳತ್ತ ಗಮನಹರಿಸಬೇಕೆಂದು ಹಿತವಚನ ಮಾಡಿದರು. ಇನ್ನುಳಿದ ಬಹುರಾಷ್ಟ್ರೀಯ ಕಂಪೆನಿಗಳನ್ನಾದರು ಬೇರೆ ರಾಜ್ಯಗಳತ್ತ ಹೋಗುವುದನ್ನ ತಡೆಯಿರಿ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

Share