Connect with us


      




ಸಿನೆಮಾ

ನಟಿ ಕತ್ರಿನಾ ಕೈಫ್ ಗೆ ಜೀವ ಬೆದರಿಕೆ ಹಾಕಿದವ 2 ದಿನ ಪೊಲೀಸ್ ಕಸ್ಟಡಿಗೆ

Vanitha Jain

Published

on

ಮುಂಬೈ: ಜುಲೈ 26 (ಯು.ಎನ್.ಐ.) ನಟಿ ಕತ್ರಿನಾ ಕೈಫ್ ಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಬಂಧಿತರಾಗಿರುವ ನಟ ಮನ್ವಿಂದರ್ ಸಿಂಗ್ ಅವರನ್ನು ಮುಂಬೈ ನ್ಯಾಯಾಲಯ ಮಂಗಳವಾರ ಜುಲೈ 28 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಮನ್ವಿಂದರ್ ಸಿಂಗ್ ಅವರು ಕತ್ರಿನಾ ಕೈಫ್ ಅವರ ದೊಡ್ಡ ಅಭಿಮಾನಿ ಎಂದು ಹೇಳಲಾಗುತ್ತಿದೆ. ಆತ ಕತ್ರಿನಾ ಅವರನ್ನು ಮದುವೆಯಾಗಲು ಬಯಸಿದ್ದರು ಮತ್ತು ಕತ್ರಿನಾ ಅವರೊಂದಿಗಿರುವಂತೆ ಎಡಿಟ್ ಮಾಡಿದ ವೀಡಿಯೊಗಳು ಮತ್ತು ಚಿತ್ರಗಳನ್ನು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುತ್ತಿದ್ದರು. ಕಳೆದ ಕೆಲವು ತಿಂಗಳಿಂದ ಆಕೆಯನ್ನು ಹಿಂಬಾಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಬಳಿಕ ಆತ ಕೈಫ್ ಮತ್ತು ಆಕೆಯ ಪತಿ ವಿಕ್ಕಿ ಕೌಶಲ್ ಗೆ ಜೀವ ಬೆದರಿಕೆ ಹಾಕಲು ಆರಂಭಿಸಿದರು. ಸೋಮವಾರ, ಸಿಂಗ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ ವಿಕ್ಕಿ ಕೌಶಲ್ ಅವರು, ತನಗೆ ಮತ್ತು ಅವರ ಪತ್ನಿಗೆ ಇನ್ ಸ್ಟಾಗ್ರಾಮ್ ನಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ.

ದೂರಿನ ಆಧಾರದ ಮೇಲೆ, ಸಾಂತಾಕ್ರೂಜ್ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506-II (ಕ್ರಿಮಿನಲ್ ಬೆದರಿಕೆ) ಮತ್ತು 354-ಡಿ (ಹಿಂಬಾಲಿಸುವಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಪೊಲೀಸರು ಅದೇ ದಿನ ಮಲಾಡ್‌ನಿಂದ ಸಿಂಗ್ ಅವರನ್ನು ಬಂಧಿಸಿ ಇಂದು ಮುಂಜಾನೆ ಬಾಂದ್ರಾದ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

Share