Connect with us


      
ದೇಶ

ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್‍ಗೆ ಥಾಣೆಯಲ್ಲಿ ವಾಸಿಸಲು ಅನುಮತಿ

Vanitha Jain

Published

on

ಥಾಣೆ: ಜನೆವರಿ 07 (ಯು.ಎನ್.ಐ.) ಎಲ್ಗಾರ್ ಪರಿಷದ್ ಪ್ರಕರಣ ಆರೋಪ ಎದುರಿಸುತ್ತಿರುವ ವಕೀಲೆ ಮತ್ತು ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಅವರಿಗೆ ಥಾಣೆಯಲ್ಲಿ ವಾಸಿಸಲು ವಿಚಾರಣಾ ನ್ಯಾಯಾಲಯ ಅನುಮತಿ ನೀಡಲಾಗಿದೆ.

ಭಾರದ್ವಾಜ್ ಅವರ ಸ್ನೇಹಿತ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದ ನಂತರ ವಿಶೇಷ ನ್ಯಾಯಾಧೀಶ ದಿನೇಶ್ ಇ ಕೊತಲಿಕರ್ ಅವರು ಗುರುವಾರ ಮುಂಬೈ ಬದಲಿಗೆ ಥಾಣೆಯಲ್ಲಿ ಉಳಿಯಲು ಅನುಮತಿ ಕೋರಿ ಆಕೆಯ ಮನವಿಯನ್ನು ಪುರಸ್ಕರಿಸಿದರು.

ಮುಂಬೈನಲ್ಲಿ ವಸತಿ ದುಬಾರಿಯಾಗಿರುವುದರಿಂದ ಥಾಣೆಯಲ್ಲಿರುವ ಸ್ನೇಹಿತನ ನಿವಾಸಕ್ಕೆ ತೆರಳಲು ಭಾರದ್ವಾಜ್ ಅನುಮತಿ ಕೋರಿದ್ದರು.

ವಿಚಾರಣಾ ನ್ಯಾಯಾಲಯವು ಭಾರದ್ವಾಜ್‍ಗೆ ವಿಧಿಸಿದ ಜೈಲು ಷರತ್ತುಗಳ ಪ್ರಕಾರ ಮುಂಬೈ ನಗರ ನ್ಯಾಯಾಲಯದ ವ್ಯಾಪ್ತಿಯೊಳಗೆ ವಾಸಿಸಬೇಕೇ ವಿನಃ ಹೊರಗೆ ವಾಸಿಸುವಂತಿಲ್ಲ.

ಜಾಮೀನು ಷರತ್ತುಗಳ ಭಾಗವಾಗಿ ಥಾಣೆಯ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗುವಂತೆ ನ್ಯಾಯಾಲಯ ಆಕೆಗೆ ಸೂಚಿಸಿದೆ. ವಿಳಾಸವನ್ನು ಪರಿಶೀಲಿಸಲು ತನಿಖಾ ಸಂಸ್ಥೆ ಎನ್‍ಐಎಗೆ ಸ್ವಾತಂತ್ರ್ಯವಿದೆ ಎಂದು ಅದು ಹೇಳಿದೆ.

Share