Published
2 months agoon
ವಾರಣಾಸಿ: ಮೇ ೧೬ (ಯು.ಎನ್. ಐ.) ಜ್ಞಾನವಾಪಿ ಮಸೀದಿ ಸಂಕೀರ್ಣದ ವೀಡಿಯೋ ಸಹಿತ ಮೂರನೇ ದಿನದ ಸಮೀಕ್ಷೆಯು ಇಂದು ಬೆಳಗ್ಗೆಯಿಂದಲೇ ಆರಂಭವಾಗಿದ್ದು, ಮಸೀದಿ ಸಂಕೀರ್ಣದೊಳಗಿನ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಸಮೀಕ್ಷಾ ಸಮಿತಿ ತಂಡದ ಸದಸ್ಯ ವಕೀಲ ಸುಭಾಷ್ ನಂದನ್ ಚತುರ್ವೇದಿ ಹೇಳಿದ್ದಾರೆ
“ಸಮೀಕ್ಷಾ ಸಮಿತಿ ಇಂದು ತನ್ನ ಕಾರ್ಯವನ್ನು ಪೂರ್ಣಗೊಳಿಸಿದೆ, ಅದು ಎಲ್ಲಾ ಸ್ಥಳಗಳನ್ನು ವಿವರವಾಗಿ ಚಿತ್ರೀಕರಿಸಿದೆ. ಮೂರು ಗುಮ್ಮಟಗಳು, ಭೂಗತ ನೆಲಮಾಳಿಗೆಗಳು, ಕೊಳ ಎಲ್ಲವನ್ನೂ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ನಾಳೆ ನ್ಯಾಯಾಲಯಕ್ಕೆ ವಕೀಲ ಕಮಿಷನರ್ ತಮ್ಮ ವರದಿಯನ್ನು ಸಲ್ಲಿಸಲಿದ್ದಾರೆ. ಇಂದು ಮೂವರು ಆಯೋಗದ ಸದಸ್ಯರು, ವರದಿಯನ್ನು ಸಮಯಕ್ಕೆ ಪೂರ್ಣಗೊಳಿಸದಿದ್ದರೆ, ನಾವು ನ್ಯಾಯಾಲಯವನ್ನು ಹೆಚ್ಚು ಸಮಯ ಕೇಳುತ್ತೇವೆ, ”ಎಂದು ಸರ್ಕಾರಿ ವಕೀಲ ಮಹೇಂದ್ರ ಪ್ರಸಾದ್ ಪಾಂಡೆ ತಿಳಿಸಿದರು, ಇಡೀ ಪ್ರಕ್ರಿಯೆಯು ಶಾಂತಿಯುತವಾಗಿದೆ ಎಂದು ಹೇಳಿದರು. ಭಾನುವಾರದವರೆಗೆ ಶೇ 65ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ.
ಲಿವ್-ಇನ್ ಸಂಬಂಧದಲ್ಲಿ ಜನಿಸಿದ ಮಗು ಆಸ್ತಿಗೆ ಅರ್ಹ- ಸುಪ್ರೀಂಕೋರ್ಟ್
ಜ್ಞಾನವಾಪಿ ಮಸೀದಿ; ಮೂರನೇ ದಿನಕ್ಕೆ ಸರ್ವೇ
ಜ್ಞಾನವಾಪಿ ಮಸೀದಿ; ಮುಂದುವರಿದ ಸಮೀಕ್ಷೆ ಕಾರ್ಯ
ಜ್ಞಾನವಾಪಿ ಶೃಂಗಾರ್ ಗೌರಿ ಸಂಕೀರ್ಣ ಸಮೀಕ್ಷೆ ತಡೆಗೆ ಸುಪ್ರೀಂ ನಿರಾಕರಣೆ
ತಾಜ್ಮಹಲ್ ಕೊಠಡಿ ಸಮೀಕ್ಷೆ; ಅರ್ಜಿ ತಿರಸ್ಕರಿಸಿದ ಕೋರ್ಟ್
ಜ್ಞಾನವಾಪಿ ಮಸೀದಿ ; ಮೇ ೧೭ರೊಳಗೆ ಸಮೀಕ್ಷೆ ಪೂರ್ಣಗೊಳಿಸಿ: ನ್ಯಾಯಾಲಯ