Connect with us


      
ಸಿನೆಮಾ

ಡಂಕಿ ಚಿತ್ರದಲ್ಲಿ ಶಾರುಖ್ ಖಾನ್ ಗೆ ಜೊತೆಯಾಗಲಿರುವ ತಾಪ್ಸಿ ಪನ್ನು

Lakshmi Vijaya

Published

on

ಮುಂಬೈ: ಏಪ್ರಿಲ್ 21 (ಯು.ಎನ್.ಐ.) ಬಹುಭಾಷಾ ನಟಿ  ತಾಪ್ಸಿ ಪನ್ನು ಮೊದಲ ಬಾರಿಗೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಜೊತೆ ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ. ರಾಜ್‌ಕುಮಾರ್ ಹಿರಾನಿಯ ಮುಂದಿನ ಪ್ರಾಜೆಕ್ಟ್ ಡಂಕಿಯಲ್ಲಿ ಶಾರುಖ್ ಖಾನ್ ಜೊತೆ ತಾಪ್ಸೀ ಪನ್ನು ನಟಿಸಲಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಖುಷಿ ಹಂಚಿಕೊಂಡಿದ್ದಾರೆ.

ಶಾರುಖ್ ಖಾನ್ ಮತ್ತು ತಾಪ್ಸಿ ಪನ್ನು ಮೊದಲ ಬಾರಿಗೆ ಡಂಕಿ ಚಿತ್ರದಲ್ಲಿ ನಟಿಸಲಿದ್ದಾರೆ. ಆದಾಗ್ಯೂ, ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಪ್ರೊಡಕ್ಷನ್ ಹೌಸ್ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ನಿರ್ಮಾಣದ  2019 ರ ಚಲನಚಿತ್ರ ಬದ್ಲಾದಲ್ಲಿ ತಾಪ್ಸಿ,  ಅಮಿತಾಭ್ ಬಚ್ಚನ್ ಜೊತೆ ನಟಿಸಿದ್ದಾರೆ.

ರಾಜ್ ಕುಮಾರ್ ಹಿರಾನಿ ಅವರ ನಿರ್ದೇಶನದಲ್ಲಿ ಇದೇ ಮೊದಲ ಬಾರಿಗೆ ಶಾರುಖ್ ಖಾನ್ ನಟಿಸುತ್ತಿದ್ದು, ಇತ್ತೀಚಿಗಷ್ಟೇ  ಈ ವಿಚಾರವನ್ನು ಶಾರುಖ್ ಖಾನ್ ವಿಡಿಯೋವನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದರು.

ಶಾರುಖ್ ಖಾನ್ ಅವರ ಪೋಸ್ಟ್ ಪರಿಶೀಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.  https://www.instagram.com/p/Cch39UggjOQ/?utm_source=ig_embed&ig_rid=362e071a-488e-4b07-913a-116a391857f8

22ನೇ ಡಿಸೆಂಬರ್ 2023 ರಂದು ಚಿತ್ರಮಂದಿರಗಳಲ್ಲಿ ಡಂಕಿ ಚಿತ್ರವನ್ನ ನೀವು ನೋಡಬಹುದು.

Share