Connect with us


      




ನ್ಯಾಯಾಲಯ

ತಾಜ್‌ಮಹಲ್‌ ಕೊಠಡಿ ಸಮೀಕ್ಷೆ; ಅರ್ಜಿ ತಿರಸ್ಕರಿಸಿದ ಕೋರ್ಟ್‌

Kumara Raitha

Published

on

ಅಲಹಾಬಾದ್:‌ ಮೇ ೧೨ (ಯು.ಎನ್.‌ಐ.) ತಾಜ್‌ಮಹಲ್‌ ಇತಿಹಾಸ, ಅಲ್ಲಿನ ಕೊಠಡಿಗಳಲ್ಲಿ ಏನಿದೆ ಎಂದು ಅರಿಯಲು ಆದೇಶ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಬಿಜೆಪಿ ನಾಯಕ ರಜನೀಶ್ ಸಿಂಗ್ ಅವರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ತಾಜ್ ಮಹಲ್‌ನ ಇತಿಹಾಸದ ಬಗ್ಗೆ ಸತ್ಯಶೋಧನೆಯ ತನಿಖೆಯನ್ನು ಕೋರಲಾಗಿತ್ತು. ಸತ್ಯ ಅದು ಏನೇ ಇರಲಿ ತಿಳಿಯಲು ಅಲ್ಲಿ ಬೀಗ ಹಾಕಿರುವ ೨೨  ಕೋಣೆಗಳ ಬಾಗಿಲುಗಳನ್ನು ತೆರೆಯುವಂತೆ ಆದೇಶ ನೀಡಬೇಕೆಂದು  ಕೋರಿದ್ದರು. ಇದನ್ನು ಅಲಹಾಬಾದ್‌ ನ್ಯಾಯಾಲಯ ವಜಾಗೊಳಿಸಿದೆ.

ಮೊಘಲರ ಆಡಳಿತ ಕಾಲಘಟ್ಟದ ಈ ವಾಸ್ತುಶಿಲ್ಪ ಭಾರತೀಯ ಪುರಾತತ್ವ ಇಲಾಖೆಯ ವಶದಲ್ಲಿದೆ. ಇದರ ಸಂರಕ್ಷಣೆಯನ್ನು ಅದು ಮಾಡುತ್ತಿದೆ. ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ಹೆಂಡತಿ ಮುಮ್ತಾಜ್ ಸಲುವಾಗಿ  ಸಮಾಧಿಯಾಗಿ ತಾಜ್‌ಮಹಲನ್ನು ನಿರ್ಮಿಸಿದ್ದಾನೆ.  ಅಮೃತಶಿಲೆಯ ಸ್ಮಾರಕದ ಈ ಸಂಕೀರ್ಣ 1632 ರಲ್ಲಿ ಪ್ರಾರಂಭವಾಯಿತು ಮತ್ತು ಅಂತಿಮವಾಗಿ 1653 ರಲ್ಲಿ ಪೂರ್ಣಗೊಳ್ಳಲು 22 ವರ್ಷಗಳನ್ನು ದೀರ್ಘ ಕಾಲಾವಧಿ ತೆಗೆದುಕೊಂಡಿದೆ.

ವಿಶ್ವವಿಖ್ಯಾತ  ತಾಜ್‌ ಮಹಲನ್ನು  1982 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಹೆಸರಿಸಲಾಯಿತು

Share