Published
6 months agoon
By
Vanitha Jainಕಾಬೂಲ್: ಜನೆವರಿ 06 (ಯು.ಎನ್.ಐ) ನಾಲ್ಕು ತಿಂಗಳ ಹಿಂದೆಯಷ್ಟೇ ಅಫ್ಘಾನಿಸ್ತಾನದಲ್ಲಿ ಸರ್ಕಾರವನ್ನು ರಚಿಸಿದ ತಾಲಿಬಾನ್ ಉಗ್ರಗಾಮಿ ಗುಂದು ಸೇನೆಯನ್ನು ವಿಸ್ತರಿಸಲು ನಿರ್ಧರಿಸಿದೆ.
ಪ್ರತಿಸ್ಪರ್ಧಿ ಇಸ್ಲಾಮಿಕ್ ಸ್ಟೇಟ್ನಿಂದ ಬರುವ ಭದ್ರತಾ ಬೆದರಿಕೆಯನ್ನು ತಡೆಯುವುದಕ್ಕಾಗಿ ತಾಲಿಬಾನ್ ಅಧಿಕೃತವಾಗಿ ಆತ್ಮಹತ್ಯಾ ಬಾಂಬರ್ಗಳನ್ನು ಸೇನೆಯಲ್ಲಿ ನೇಮಿಸಿಕೊಳ್ಳಲು ನಿರ್ಧರಿಸಿದೆ.
ಕಳೆದ ವರ್ಷ ಅಧಿಕಾರಕ್ಕೆ ಬರುವ ಮೊದಲು, ತಾಲಿಬಾನ್ 20 ವರ್ಷಗಳ ಯುದ್ಧದಲ್ಲಿ ಯುಎಸ್ ಮತ್ತು ಅಫ್ಘಾನ್ ಪಡೆಗಳ ಮೇಲೆ ದಾಳಿ ಮಾಡಲು ಮತ್ತು ಸೋಲಿಸಲು ಆತ್ಮಹತ್ಯಾ ಬಾಂಬರ್ಗಳನ್ನು ಪ್ರಮುಖ ಅಸ್ತ್ರವಾಗಿ ಬಳಸಿತು. ಈಗ ಗುಂಪು ಒಂದೇ ಘಟಕದ ಅಡಿಯಲ್ಲಿ ಕಾರ್ಯನಿರ್ವಹಿಸಲು ಮತ್ತು ಅಫ್ಘಾನಿಸ್ತಾನವನ್ನು ರಕ್ಷಿಸಲು ದೇಶಾದ್ಯಂತ ಆತ್ಮಹತ್ಯಾ ಬಾಂಬರ್ಗಳ ಚದುರಿದ ಸ್ಕ್ವಾಡ್ಗಳನ್ನು ಸುಧಾರಿಸಲು ಮತ್ತು ಸಂಘಟಿಸಲು ಬಯಸಿದೆ ಎಂದು ತಾಲಿಬಾನ್ನ ಉಪ ವಕ್ತಾರ ಬಿಲಾಲ್ ಕರಿಮಿ ಹೇಳಿದ್ದಾರೆ.
ಆಗಸ್ಟಿನಲ್ಲಿ ಯುಎಸ್ ಸರ್ಕಾರವು ಅಫ್ಘಾನಿಸ್ತಾನದಿಂದ ತಮ್ಮ ಸೇನೆಯನ್ನು ಹಿಂತೆಗೆದುಕೊಂಡ ನಂತರ ತಾಲಿಬಾನ್ ತನ್ನ ಅಧಿಕಾರವನ್ನು ಬಲಪಡಿಸಿಕೊಳ್ಳಲು ಕನಿಷ್ಠ ಐದು ಪ್ರಮುಖ ದಾಳಿಗಳನ್ನು ನಡೆಸಿದ್ದು, ಅವುಗಳಲ್ಲಿ ಹಲವು ದಾಳಿಗಳನ್ನು ಆತ್ಮಹತ್ಯಾ ಬಾಂಬರ್ಗಳು ನಡೆಸಿದ್ದರು.
ಉಗ್ರಗಾಮಿ ಗುಂಪು ರಾಷ್ಟ್ರವ್ಯಾಪಿ ಮತ್ತು ಗಡಿಯಲ್ಲಿ ಆತ್ಮಹತ್ಯಾ ಬಾಂಬರ್ಗಳು ಕಾರ್ಯತಂತ್ರದ ಅವಿಭಾಜ್ಯ ಅಂಗವಾಗುವುದರೊಂದಿಗೆ ರಕ್ಷಣೆಯನ್ನು ಹೆಚ್ಚಿಸಲು ಬಲವಾದ ಮತ್ತು ಸಂಘಟಿತ ಸೈನ್ಯವನ್ನು ನಿರ್ಮಿಸುತ್ತಿದೆ. ಹಾಗಾಗಿ ಸುಮಾರು 1,50,000 ಯೋಧರನ್ನು ಸೇನೆಗೆ ಸೇರಲು ಆಹ್ವಾನಿಸಲಾಗುವುದು ಎಂದು ತಾಲಿಬಾನ್ನ ಮುಖ್ಯಸ್ಥ ಕ್ವಾರಿ ಫಸಿಹುದ್ದೀನ್ ಹೇಳಿದ್ದರು.
46 ವಲಸಿಗರ ಮೃತದೇಹ ಪತ್ತೆ; ಮಾನವ ಕಳ್ಳಸಾಗಣಿಕೆ ಶಂಕೆ
ಸ್ಕೂಟರ್ ನಲ್ಲಿ ಹೋಗ್ತಿದ್ದಾಗ ತಲೆ ಮೇಲೆ ಬಿದ್ದ ತೆಂಗಿನಕಾಯಿ; ಹೆಲ್ಮೆಟ್ ನಿಂದ ಉಳಿದ ಜೀವ
ಶ್ರೀಲಂಕಾ ಬಿಕ್ಕಟ್ಟು: ಶಾಲಾ ಕಾಲೇಜುಗಳು ಬಂದ್, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ
ದಕ್ಷಿಣ ಆಫ್ರಿಕಾದ ನೈಟ್ಕ್ಲಬ್ನಲ್ಲಿ 17 ಮಂದಿ ಶವವಾಗಿ ಪತ್ತೆ!
ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜರ್ಮನಿಗೆ ಆಗಮಿಸಿದ ಪ್ರಧಾನಿ ಮೋದಿ
ಶ್ರೀಲಂಕಾಕ್ಕೆ ನೆರವು ನೀಡಲು ರಷ್ಯಾ ಸಿದ್ಧ: ಸಿರಿಸೇನಾ