Connect with us


      
ದೇಶ

ಪ್ರಧಾನಿ ಮೋದಿ ತಮಿಳುನಾಡು ಭೇಟಿ ರದ್ದು

UNI Kannada

Published

on

ಚೆನ್ನೈ, ಜ 7(ಯುಎನ್‌ ಐ) ಪ್ರಧಾನಿ ನರೇಂದ್ರ ಮೋದಿ ಅವರ ತಮಿಳುನಾಡು ರಾಜ್ಯ ಪ್ರವಾಸ ಕಾರ್ಯಕ್ರಮ ಮುಂದೂಡಲಾಗಿದೆ. ಇದೇ ತಿಂಗಳ 12ರಂದು ಮಧುರೈ ಸೇರಿದಂತೆ ವಿರುದುನಗರ, ಪುದುಚೇರಿಗೆ ಪ್ರಧಾನಿ ಭೇಟಿ ನೀಡಬೇಕಿತ್ತು ಆದರೆ, ರಾಜ್ಯದಲ್ಲಿ ಕೋವಿಡ್‌ ಲಾಕ್‌ಡೌನ್ ನಿಬಂಧನೆಗಳು ಜಾರಿಯಲ್ಲಿರುವುದರಿಂದ ಸಭೆ, ಸಮಾರಂಭಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ಭೇಟಿಯನ್ನು ರದ್ದುಗೊಳಿಸಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ಪ್ರಕಟಿಸಿದ್ದಾರೆ.

ಕೊರೊನಾ, ಒಮಿಕ್ರಾನ್‌ ರೂಪಾಂತರಿಯ ತೀವ್ರತೆ, ಸಾರ್ವಜನಿಕ ಆರೋಗ್ಯದ ಹಿತ ದೃಷ್ಟಿಯಿಂದ ಪ್ರಧಾನಿ ಮೋದಿ ಕಾರ್ಯಕ್ರಮವನ್ನು ಮುಂದೂಡಿದ್ದೇವೆ ಎಂದು ಅಣ್ಣಾಮಲೈ ಹೇಳಿದ್ದಾರೆ. ಈ ತಿಂಗಳ 12ರಂದು ‘ಮೋದಿ ಪೊಂಗಲ್’ ಹೆಸರಿನಲ್ಲಿ ಮದುರೈನಲ್ಲಿ ಬೃಹತ್‌ ಪೊಂಗಲ್ ಕಾರ್ಯಕ್ರಮ ನಡೆಸಲು ರಾಜ್ಯ ಬಿಜೆಪಿ ಸಜ್ಜುಗೊಂಡಿತ್ತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಕೇಂದ್ರ ಸಚಿವರು, ಬಿಜೆಪಿ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಯೋಜನೆ ರೂಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.

Share