Connect with us


      
ದೇಶ

ತಮಿಳುನಾಡಿನಲ್ಲಿ ನೈಟ್ ಕರ್ಫ್ಯೂ, ವಾರಾಂತ್ಯ ಲಾಕ್‍ಡೌನ್ ಜಾರಿ

Vanitha Jain

Published

on

ಚೆನ್ನೈ: ಜನೆವರಿ 05(ಯು.ಎನ್.ಐ.)ತಮಿಳುನಾಡಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಮುಖ್ಯಮಂತ್ರಿ ಸ್ಟ್ಯಾಲಿನ್ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯ ಲಾಕ್‍ಡೌನ್ ಜಾರಿಗೊಳಿಸಿದ್ದಾರೆ.

ಉನ್ನತ ಮಟ್ಟದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಪ್ರಕಟಿಸಿದ ಮುಖ್ಯಮಂತ್ರಿ, ಕೋವಿಡ್ ಹರಡುವುದನ್ನು ಮತ್ತು ವಿಶೇಷವಾಗಿ ವೇಗವಾಗಿ ಹರಡುತ್ತಿರುವ ಒಮೈಕ್ರಾನ್ ಸೋಂಕುಗಳನ್ನು ತಡೆಗಟ್ಟಲು ಈ ಹೊಸ ನಿರ್ಬಂಧಗಳ ಅಗತ್ಯವಿದೆ ಎಂದು ಹೇಳಿದ್ದು, ಜನವರಿ 6 ರಿಂದ ರಾತ್ರಿ 10 ರಿಂದ ಬೆಳಿಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ ಮುಂದುವರೆಯಲಿದೆ. ಇನ್ನು ಜನವರಿ 9ಕ್ಕೆ ಸಂಪೂರ್ಣ ದಿನ ಲಾಕ್‍ಡೌನ್ ಮಾಡಲಾಗುವುದು. ಅಗತ್ಯ ವಸ್ತುಗಳ ಖರೀದಿ ಮಾತ್ರ ಅವಕಾಶವಿರಲಿದೆ ಎಂದು ಸ್ಟ್ಯಾಲಿನ್ ಹೇಳಿದ್ದಾರೆ.

ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಧಾರ್ಮಿಕ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ ಎಂದು ಘೋಷಿಸಿದ್ದಾರೆ. ಇನ್ನು 1ನೇ ತರಗತಿಯಿಂದ 9 ತರಗತಿಯವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, 10, 11 12ನೇ ತರಗತಿಗಳಿಗೆ ಮಾತ್ರ ಅವಕಾಶವಿದೆ ಎಂದು ಹೇಳಿದ್ದಾರೆ.

ಪೊಂಗಲ್ ಹಬ್ಬದ ನಿಮಿತ್ತ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಆಯೋಜಿಸಿದ್ದ ಎಲ್ಲಾ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಎಲ್ಲಾ ಪ್ರದರ್ಶನಗಳು ಸಹ ಮುಂದೂಡಲ್ಪಟ್ಟಿವೆ.

ಇನ್ನು ಭಾನುವಾರ ವಾರಾಂತ್ಯದ ಲಾಕ್‍ಡೌನ್ ವೇಳೆ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 7 ರಿಂದ 10ರವರೆಗೆ ಅವಕಾಶ ನೀಡಲಾಗಿದೆ.  ಗೋವಾದಲ್ಲಿಯೂ ಸಹ 8 ರಿಂ 12ನೇ ತರಗತಿಯ ಶಾಲಾ ಕಾಲೇಜುಗಳನ್ನು ಜನವರಿ 26ರವರೆಗೆ ಮುಚ್ಚಲು ಆದೇಶಿಸಲಾಗಿದೆ. ಹಿಮಾಚಲ ಪ್ರದೇಶದಲ್ಲಿಯೂ ನೈಟ್ ಕಫ್ರ್ಯೂ ಜಾರಿಗೊಳಿಸಲಾಗಿದೆ.

Share