Connect with us


      




ಕ್ರೀಡೆ

Ind Vs Sa 3ನೇ ಟೆಸ್ಟ್‌; ಟೀಮ್‌ ಇಂಡಿಯಾಗೆ ದಕ್ಷಿಣ ಅಫ್ರಿಕಾ ಪರೋಕ್ಷ ಎಚ್ಚರಿಕೆ

UNI Kannada

Published

on

ಕೇಪ್‌ ಟೌನ್‌, ಜ 10(ಯುಎನ್‌ ಐ) ದಕ್ಷಿಣ ಅಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಬೇಕೆಂದು ಟೀಮ್ ಇಂಡಿಯಾ ಬಯಸಿದರೆ … ಭಾರತ ವಿರುದ್ಧ ತವರು ನೆಲದಲ್ಲಿ ಜೈತ್ರಯಾತ್ರೆ ಸಂಬಂಧಿಸಿದ ದಾಖಲೆ ಉಳಿಸಿಕೊಳ್ಳಲು ಪ್ರೋಟೀಸ್ ತಂಡ ನಿರ್ಧರಿಸಿದೆ ಈ ಕ್ರಮದಲ್ಲಿ ಜನವರಿ 11 ರಂದು ಕೇಪ್ ಟೌನ್ ನಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯ ಉಭಯ ತಂಡಗಳಿಗೂ ನಿರ್ಣಾಯಕವಾಗಿದೆ.

ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೂರನೇ ಟೆಸ್ಟ್‌ಗೆ ಲಭ್ಯವಾಗುವುದು ಖಚಿತ ಎಂದು ಕಂಡುಬರುತ್ತಿದೆ. ಭಾರತಕ್ಕೆ ಅದೃಷ್ಟದ ಮೈದಾನವೆಂದು ಭಾವಿಸಿರುವ ವಾಂಡರರ್ಸ್ ನಲ್ಲಿ ಜಯಗಳಿಸುವ ಮೂಲಕ ದಕ್ಷಿಣ ಆಫ್ರಿಕಾ ನಾಯಕ ಡೀನ್ ಎಲ್ಗರ್ ಕೇಪ್ ಟೌನ್‌ನಲ್ಲಿನ ‘ಯುದ್ಧ’ಕ್ಕೆ ತಮ್ಮ ತಯಾರಿ ದ್ವಿಗುಣಗೊಳಿಸುತ್ತಿದ್ದಾರೆ . ಆದರೆ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ, ಡೀನ್ ಎಲ್ಗರ್ ತಂಡವನ್ನು ಇನ್ನಿಂಗ್ಸ್ ಗೆಲುವಿನೊಂದಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಅಷ್ಟು ಮಾತ್ರವಲ್ಲದೆ ದಕ್ಷಿಣ ಅಫ್ರಿಕಾ ಬೌಲರ್‌ಗಳು ಕೂಡ ಪೂರ್ಣ ಫಾರ್ಮ್‌ಗೆ ಬಂದಿದ್ದಾರೆ. ಈ ಕ್ರಮದಲ್ಲಿ ಮೂರನೇ ಟೆಸ್ಟ್ ಗೆ ಮುನ್ನ ಎಲ್ಗರ್‌ ಮಾತನಾಡಿ ಮೂರನೇ ಟೆಸ್ಟ್‌ ನಮಗೆ ಅತ್ಯಂತ ಮಹತ್ವದ್ದಾಗಿದೆ . ಜೋಹಾನ್ಸ್ ಬರ್ಗ್ ನಲ್ಲಿ ಆಡಿದಂತೆಯೇ ಕೇಪ್ ಟೌನ್ ನಲ್ಲಿಯೂ ಆಡಿದರೆ ಜಯ ಖಂಡಿತವಾಗಿಯೂ ನಮ್ಮದೇ. ವಾಸ್ತವವಾಗಿ, ಕೇಪ್ ಟೌನ್‌ನಲ್ಲಿ, “ಪೇಸ್” ನಮ್ಮ ಆತ್ಮೀಯ ಸ್ನೇಹಿತ ಎಂದು ಹೇಳುವ ಪಿಚ್ ಹೇಗಿರಲಿದೆ ಎಂಬುದರ ಸುಳಿವು ನೀಡಿದ್ದಾರೆ. ಹಣಾಹಣಿ ಖಂಡಿತವಾಗಿ ನಡೆಯಲಿದೆ. ನಮ್ಮ ಬೌಲರ್‌ ಗಳ ಎದುರಿಸುವುದು ಅಷ್ಟು ಸುಲಭದ ಮಾತಲ್ಲ ಎಂದು ಹೇಳುವ ಮೂಲಕ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

Share