Connect with us


      




ಗ್ಯಾಜೆಟ್‌

ನಿಮ್ಮ ಫೋನ್‌ನ ಇಂಟರ್ನೆಟ್ ವೇಗ ಕಡಿಮೆಯಾಗಿದೆಯಾ? ಈ ತಂತ್ರ ಟ್ರೈ ಮಾಡಿ!

Iranna Anchatageri

Published

on

ಬೆಂಗಳೂರು: ಜೂನ್ 11 (ಯು.ಎನ್.ಐ.) ಸ್ಮಾರ್ಟ್‌ಫೋನ್‌ಗಳು ಬಂದ ನಂತರ ಇಂಟರ್ನೆಟ್ ನಮ್ಮ ದೈನಂದಿನ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಫೋನ್ ಅನ್ನು ಚಾರ್ಜ್ ಮಾಡುವುದು ಹೇಗೆ ಅಗತ್ಯವೋ, ಅದೇ ರೀತಿಯಲ್ಲಿ ಇಂಟರ್ನೆಟ್ ಕೂಡ ಜನರ ಅವಶ್ಯಕತೆಯಾಗಿದೆ. ಇಂತಹ ಸಂದರ್ಭದಲ್ಲಿ ನಿಧಾನಗತಿಯ ಇಂಟರ್ನೆಟ್‌ನಿಂದಾಗಿ ನಿಮಗೆ ಕೋಪ ಬರುವ ಸಾಧ್ಯತೆಯೂ ಇದೆ.

ನಿಧಾನಗತಿಯ ಇಂಟರ್ನೆಟ್‌ನಂತಹ ಸಮಸ್ಯೆಯಿಂದ ನೀವು ಸಹ ತೊಂದರೆಗೊಳಗಾಗಿದ್ದರೆ ಕೆಲವು ತಂತ್ರಗಳನ್ನು ಅನುಸರಿಸುವ ಮೂಲಕ ನಿಮ್ಮ ಇಂಟರ್ನೆಟ್ ವೇಗವನ್ನು ಸುಧಾರಿಸಬಹುದು. 2G ಮತ್ತು 3G ನಂತರ 4G ನೆಟ್‌ವರ್ಕ್‌ನಲ್ಲಿ ಜನರು ಮೊದಲಿಗಿಂತ ಉತ್ತಮ ಇಂಟರ್ನೆಟ್ ವೇಗ ಪಡೆಯುತ್ತಿದ್ದಾರೆ. ನೀವು 4G ನಲ್ಲಿ 100Mbps ವೇಗದಲ್ಲೆ ಇಂಟರ್ ನೆಟ್ ಬ್ರೌಸ್ ಮಾಡಬಹುದು. ನಿಮ್ಮ ಫೋನ್‌ನಲ್ಲಿ ಇಂಟರ್ನೆಟ್ ನಿಧಾನವಾಗಿದ್ದರೆ, ನೀವು ಸೆಟ್ಟಿಂಗ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಅದರ ವಿವರಗಳು ಈ ಕೆಳಗಿನಂತಿವೆ.

ಕ್ಯಾಚೆ ತೆರವುಗೊಳಿಸಿ:
ನಿಮ್ಮ ಫೋನ್‌ನಲ್ಲೆ ಕ್ಯಾಚೆ ಸಂಗ್ರಹವಾಗ್ತಾ ಇರುತ್ತದೆ. ಇದರಿಂದ ಫೋನ್ ಸಹ ಸ್ಲೋ ಆಗುವುದರ ಜೊತೆಗೆ ಇಂಟರ್ನೆಟ್ ವೇಗವೂ ನಿಧಾನವಾಗಲಾರಂಭಿಸುತ್ತದೆ. ದೀರ್ಘಕಾಲದವರೆಗೆ ಇದನ್ನು ತೆರವುಗೊಳಿಸದಿದ್ದರೆ, ಇಂಟರ್ನೆಟ್ ವೇಗವು ನಿಧಾನವಾಗಿಸುತ್ತದೆ. ಇದನ್ನು ಕಾಲಕಾಲಕ್ಕೆ ತೆರವುಗೊಳಿಸುತ್ತಿರಬೇಕು. ಇದಕ್ಕೆ ಹಲವು ಆ್ಯಪ್ ಗಳು ಲಭ್ಯ ಇವೆ. ಅದರ ಪ್ರಯೋಜನ ಪಡೆಯಬಹುದು.

ಆ್ಯಪ್ ಕ್ಲೋಸ್ ಮಾಡಿ:
ಇಂದಿನ ಸ್ಮಾರ್ಟ್‌ಫೋನ್‌ಗಳಿಂದ ಮಲ್ಟಿ ಟಾಸ್ಕಿಂಗ್ ಅನ್ನು ಸುಲಭವಾಗಿ ಮಾಡಬಹುದು. ಆದರೆ ಇದು ಇಂಟರ್ನೆಟ್ ವೇಗದ ಮೇಲೆ ಪರಿಣಾಮ ಬೀರುತ್ತದೆ. ಇಂಟರ್ನೆಟ್ ನಿಧಾನವಾಗಿದ್ದರೆ, ನೀವು ಬಳಸದ ಅಪ್ಲಿಕೇಶನ್‌ಗಳನ್ನು ಕ್ಲೋಸ್ ಮಾಡಿ. ಏಕೆಂದರೆ ಬ್ಯಾಕ್‌ಗ್ರೌಂಡ್‌ನಲ್ಲಿ ರನ್ ಆಗುವ ಈ ಆ್ಯಪ್‌ಗಳು ನಿಮ್ಮ ಇಂಟರ್ನೆಟ್ ವೇಗವನ್ನು ನಿಧಾನಗೊಳಿಸಬಹುದು.

ಇನ್ನೊಂದು ಬ್ರೌಸರ್ ಬಳಸಿ:
ಕೆಲವೊಮ್ಮೆ ಇಂಟರ್ನೆಟ್ ನಿಧಾನವಾಗಲು ಕಾರಣ ನಿಮ್ಮ ವೆಬ್ ಬ್ರೌಸರ್ ಕಾರಣವಾಗಿರುತ್ತವೆ. ಈ ಸಂದರ್ಭದಲ್ಲಿ, ನೀವು ಇತರ ಬ್ರೌಸರ್ ಗಳನ್ನು ಪ್ರಯತ್ನಿಸಬೇಕು. ನಿಮ್ಮ ಫೋನ್ ನಲ್ಲಿ ಬ್ರೌಸರ್ ಮತ್ತು ಅಪ್ಲಿಕೇಶನ್‌ಗಳ ಲೈಟ್ ಆವೃತ್ತಿಯನ್ನು ಸಹ ಬಳಸುವ ಅವಕಾಶ ಇದೆ. ಇವುಗಳಲ್ಲಿ ನಿಧಾನವಾದ ಡೇಟಾದಲ್ಲಿಯೂ ನೀವು ಸುಲಭವಾಗಿ ವೆಬ್ ಸರ್ಫಿಂಗ್ ಮಾಡಲು ಸಾಧ್ಯವಾಗುತ್ತದೆ.

ನೆಟ್ವರ್ಕ್ ಸೆಟ್ಟಿಂಗ್ ಬದಲಾಯಿಸಿ:
ನಿಧಾನಗತಿಯ ಇಂಟರ್ನೆಟ್‌ ಗೆ ನಿಮ್ಮ ಫೋನ್ ನಲ್ಲಿನ ಸಮಸ್ಯೆಗಳೇ ಕಾರಣ ಆಗಿರುತ್ತವೆ. ಡೀಫಾಲ್ಟ್ ಸೆಟ್ಟಿಂಗ್‌ನಿಂದಾಗಿ ನಿಮ್ಮ ಇಂಟರ್ನೆಟ್ ವೇಗವೂ ಕಡಿಮೆಯಾಗುತ್ತದೆ. ಇದಕ್ಕಾಗಿ ನೀವು ನೆಟ್ವರ್ಕ್ ಸೆಟ್ಟಿಂಗ್ ಗಳನ್ನು ಮರು ಹೊಂದಿಸಬೇಕಾಗುತ್ತದೆ. ಮೊದಲಿಗೆ ನೀವು ಸೆಟ್ಟಿಂಗ್>>ಮೊಬೈಲ್ ನೆಟ್‌ವರ್ಕ್>> ನೆಟ್‌ವರ್ಕ್ ಆಪರೇಟರ್>>ಸ್ವಯಂಚಾಲಿತ ಆಯ್ಕೆ>>ಆಫ್ ಮಾಡಬೇಕು. (Setting>>Mobile Network>> Network Operator >> Select Automatic >> Turn Off) ಇದರ ನಂತರ ನೀವು ನೆಟ್ವರ್ಕ್ ಕಂಪನಿಗಳು ಒದಗಿಸುವ ಮ್ಯಾನ್ಯುವಲ್ ಆಯ್ಕೆ ಮಾಡಿಕೊಳ್ಳಬೇಕು.

4G ಅಥವಾ LTE ನೆಟ್ವರ್ಕ್ ಅನ್ನು ಹೇಗೆ ಆಯ್ಕೆ ಮಾಡುವುದು?:
ಮೊದಲು ನೀವು ಸೆಟ್ಟಿಂಗ್‌ ಆಪ್ಷನ್ ಗೆ ಹೋಗಬೇಕು. ಇಲ್ಲಿ ಕನೆಕ್ಷನ್ ಅನ್ನೋ ಆಪ್ಷನ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ SIM ಕಾರ್ಡ್ ಮ್ಯಾನೇಜರ್‌ಗೆ ಹೋಗಬೇಕು. ಆಗ ಮೊಬೈಲ್ ಡೇಟಾ ಅಥವಾ ಮೊಬೈಲ್ ನೆಟ್‌ವರ್ಕ್ ಆಯ್ಕೆ ಕಾಣಿಸಿಕೊಳ್ಳುತ್ತದೆ.  ಇಲ್ಲಿ  LTE/3G/2G (ಆಟೋ ಕನೆಕ್ಟ್) ಮೇಲೆ ಕ್ಲಿಕ್ ಮಾಡಿ ಆಯ್ಕೆ ಮಾಡಿಕೊಳ್ಳಬೇಕು.

Share