Connect with us


      
ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್: ಪುರುಷರ ಹೈಜಂಪ್ ನಲ್ಲಿ ಕಂಚು ಗೆದ್ದ ತೇಜಸ್ವಿನ್ ಶಂಕರ್ ಇತಿಹಾಸ ನಿರ್ಮಾಣ

Vanitha Jain

Published

on

ಬರ್ಮಿಂಗ್ ಹ್ಯಾಮ್‌: ಆಗಸ್ಟ್ 04 (ಯು.ಎನ್.ಐ.) ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಅಥ್ಲೀಟ್ ತೇಜಸ್ವಿನ್ ಶಂಕರ್ ಪುರುಷರ ಹೈಜಂಪ್ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ.

ತೇಜಸ್ವಿನ್ ಶಂಕರ್ ಹೈಜಂಪ್ ವಿಭಾಗದಲ್ಲಿ 2.22 ಮೀ ಜಿಗಿದು ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಮೊದಲ ಪದಕ ತಂದುಕೊಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಮೊದಲ ಹಂತದಲ್ಲಿ 2.10 ಮೀಟರ್ ಜಿಗಿತದೊಂದಿಗೆ ಉತ್ತಮ ಆರಂಭ ಕಂಡ ಅವರಿಗೆ ಎದುರಾಳಿ ಬಹಾಮಾಸ್‌ನ ಡೊನಾಲ್ಡ್ ಥಾಮಸ್ ಮತ್ತು ಇಂಗ್ಲೆಂಡ್‌ನ ಜೋಯಲ್ ಕ್ಲಾರ್ಕ್-ಖಾನ್ ಕೂಡ 2.22 ಮೀಟರ್‌ ಜಿಗಿದು ಸ್ಪರ್ಧೆಯೊಡ್ಡಿದರು.

ಆದರೆ ಭಾರತದ ತೇಜಸ್ವಿನ್ ಶಂಕರ್ ಕೆಲವು ತಪ್ಪುಗಳ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಈ ಮೂಲಕ ಭಾರತದ ಪದಕಗಳ ಸಂಖ್ಯೆ 18ಕ್ಕೆ ಏರಿದೆ.

ಗಣ್ಯರ ಶುಭಾಶಯ:

ಕಾಮನ್‌ವೆಲ್ತ್ ಗೇಮ್ಸ್ ಫಾರ್ ಇಂಡಿಯಾದಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ. ತೇಜಸ್ವಿನ್ ಶಂಕರ್ ಅವರು ಬರ್ಮಿಂಗ್ಹ್ಯಾಮ್ 2022 ರಲ್ಲಿ ಹೈಜಂಪ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದ ಮೊದಲಿಗರಾಗಿದ್ದಾರೆ.

ಹೈಜಂಪ್ ವಿಭಾಗದಲ್ಲಿ ಪದಕ ಗೆಲ್ಲುವುದು ಬಹಳ ಅಪರೂಪ ಆದರೆ ತೇಜಸ್ವಿನ್ ಶಂಕರ್ ಬರ್ಮಿಂಗ್ಹ್ಯಾಮ್ 2022 ನಲ್ಲಿ 2.22 ಮೀಟರ್‌ಗಳಷ್ಟು ಜಿಗಿತದೊಂದಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಎಹೈಜಂಪ್ ವಿಭಾಗದಲ್ಲಿ ಪದಕವನ್ನು ಗೆದ್ದ ಮೊದಲ ಭಾರತೀಯರಾಗಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್2022 ರಲ್ಲಿ ಟೀಮ್ ಇಂಡಿಯಾಕ್ಕೆ ಹೈ ಜಂಪ್‌ನಲ್ಲಿ ಬಂದ ಮೊದಲ ಪದಕ ಇಡೀ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದೆ, ತೇಜಸ್ವಿನ್ ಶಂಕರ್ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಪುರುಷರ ಹೈಜಂಪ್‌ನಲ್ಲಿ ಕಂಚಿನ ಪದಕವನ್ನು ಪಡೆದರು

Continue Reading
Click to comment

Leave a Reply

Your email address will not be published.

Share