Connect with us


      




ದೇಶ

ತೆಲಂಗಾಣದಲ್ಲಿ ಇಂದು ನಾಳೆ ಅಧಿಕ ಮಳೆ ಸಾಧ್ಯತೆ

UNI Kannada

Published

on

ತೆಲಂಗಾಣ : ಜನೆವರಿ 09 (ಯು.ಎನ್.ಐ.) ಮುಂದಿನ ನಾಲ್ಕು ದಿನಗಳ ಕಾಲ ತೆಲಂಗಾಣದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾರತದ ಆಗ್ನೇಯ ಮತ್ತು ದಕ್ಷಿಣ ಭಾಗಗಳಿಂದ ತೆಲಂಗಾಣಕ್ಕೆ ಬಲವಾದ ಗಾಳಿ ಬೀಸುತ್ತಿದೆ. ಇದರಿಂದಾಗಿ ಇಂದು ಮತ್ತು ನಾಳೆ ರಾಜ್ಯದಲ್ಲಿ ಅಲ್ಲಲ್ಲಿ ಆಲಿಕಲ್ಲು ಮಳೆಯಾಗುವ ಸಂಭವವಿದೆ. ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.

ಭಾನುವಾರ ಮತ್ತು ಸೋಮವಾರ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಆದಿಲಾಬಾದ್, ಕೊಮಾರಂಭೀಮ್, ಆಸಿಫಾಬಾದ್, ಮಂಚಿರ್ಯಾ, ಜಗಿತ್ತಾಲ ಮತ್ತು ನಿರ್ಮಲ್ ಜಿಲ್ಲೆಗಳಲ್ಲಿ ಜನವರಿ 10 ಮತ್ತು 11 ರಂದು ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮತ್ತೊಂದೆಡೆ, ತೆಲಂಗಾಣದಲ್ಲಿ ಕಳೆದ ಕೆಲವು ದಿನಗಳಿಂದ ಚಳಿಯ ವಾತಾವರಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ತಾಪಮಾನ ಸಾಮಾನ್ಯಕ್ಕಿಂತ ಎರಡರಿಂದ ಆರು ಡಿಗ್ರಿ ಹೆಚ್ಚಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Share