Published
5 months agoon
By
UNI Kannadaಹೈದರಾಬಾದ್, ಡಿಸೆಂಬರ್ 11 (ಯು.ಎನ್.ಐ) ದಸರಾ ಹಬ್ಬದ ಹೊತ್ತಿಗೆ ಸಚಿವಾಲಯವನ್ನು ಪ್ರಜೆಗಳಿಗೆ ಅರ್ಪಿಸುವ ಉದ್ದೇಶದಿಂದ ಸಚಿವಾಲಯ ನಿರ್ಮಾಣ ಕಾರ್ಯವನ್ನು ಚುರುುಕಗೊಳಿಸಲಾಗಿದೆ.
ಈಗಾಗಲೇ ಕಾಂಕ್ರೀಟ್ ಕೆಲಸಗಳು ಶೇಖಡ 80%ರಷ್ಟು ಮುಗಿದಿದೆ. ಇನ್ನುಳಿದ 20 ರಷ್ಟು ಕೆಲಸ ಬಾಕಿಯಿದ್ದು ಇನ್ನೊಂದು ತಿಂಗಳೊಳಗೆ ಸಂಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಕಾಂಕ್ರೀಟ್ ಕೆಲಸದ ಜೊತೆಗೆ ಎಲೆಕ್ಟ್ರಿಕ್, ಫ್ಲೋರಿಂಗ್, ಟೈಲ್ಸ್ ಇನ್ನಿತರ ಕೆಲಸಗಳನ್ನು ಕೂಡ ತಿಂಗಳೊಳಗೆ ಮುಗಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ನಲ್ಲಿ ಸಚಿವಾಲಯ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. ಒಂದು ವರ್ಷದೊಳಗೆ ಪೂರ್ತಿಗೊಳಿಸಬೇಕೆಂದು ಒಪ್ಪಂದ ಮಾಡಿಕೊಂಡ್ಡಿದ್ದ ನಿರ್ಮಾಣ ಸಂಸ್ಥೆ, ಕೊರೋನ ಎರಡನೇ ಅಲೆಯಿಂದಾಗಿ ಕೆಲಸ ಕುಂಠಿತ ಗೊಂಡಿತ್ತು. ನಂತರ ವೈರಸ್ ಆರ್ಭಟ ಕಡಿಮೆಯಾಗುವುದರೊಂದಿಗೆ ನಿರ್ಮಾಣ ಕಾರ್ಯ ಮತ್ತೆ ವೇಗವಾಗಿ ಸಾಗತೊಡಗಿದೆ. ಪ್ರತಿದಿನ ಸುಮಾರು 2000 ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ.
ಮೊನ್ನೆಯಷ್ಟೆ ಖುದ್ದು ಭೇಟಿ ನೀಡಿ ನಿರ್ಮಾಣ ಕೆಲಸವನ್ನು ಪರಿಶೀಲಿಸಿದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಗ್ರಾನೈಟ್, ಟೈಲ್ಸ್ ಡಿಸೈನ್ ಗಳನ್ನ ಸೂಚಿಸಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಹಿರಂಗ ಕ್ಷಮೆಯಾಚಿಸುವಂತೆ ದೆಹಲಿ ಪೊಲೀಸರಿಗೆ ನೋಟಿಸ್ ಕಳುಹಿಸಿದ ಎಎಪಿ ಶಾಸಕ
ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಇಳಿಸಿದ ಮಹಾರಾಷ್ಟ್ರ ಸರ್ಕಾರ
ಅಜಯ್ ದೇವಗನ್ ರಂತೆ ಸ್ಟಂಟ್ ಪ್ರದರ್ಶನ; ಖಾಕಿ ಅತಿಥಿಯಾದ ಯುವಕ
ಬೆಚ್ಚಿಬೀಳಿಸುವ ಪ್ಲಾನ್!; ಮನೆಯನ್ನೇ ಗ್ಯಾಸ್ ಚೇಂಬರ್ ಮಾಡಿಕೊಂಡು ಮೂವರ ಆತ್ಮಹತ್ಯೆ!
ಥಾಮಸ್ ಕಪ್ ವಿಜೇತ ಲಕ್ಷ್ಯಸೇನ್ ಬಳಿ ‘ಆ ಸ್ವೀಟ್’ ತರಲು ಹೇಳಿದ್ದರಂತೆ ಪ್ರಧಾನಿ ಮೋದಿ
ರಾಂಬನ್-ಬನಿಹಾಲ್ ಸುರಂಗ ಕುಸಿತ: ತನಿಖೆಗೆ ಕೇಂದ್ರದಿಂದ ಸಮಿತಿ ರಚನೆ