Connect with us


      




ಸಿನೆಮಾ

ತೆಲುಗು ಚಿತ್ರರಂಗದ ದಿಗ್ಗಜರು; ಕಾಡುತ್ತಿರುವ ಕೊರೋನ

UNI Kannada

Published

on

ಹೈದರಬಾದ್: ಜನೆವರಿ 07(ಯು.ಎನ್.ಐ.) 2022 ಹೊಸ ವರ್ಷ ತೆಲುಗು ಚಿತ್ರ ರಂಗಕ್ಕೆ ಆರಂಭದಲ್ಲೇ ಶಾಕ್ ನೀಡುತ್ತಿದೆ. ಕೊರೊನಾ ಪ್ರಪಂಚಾದ್ಯಂತ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಈಗ ತೆಲುಗು ಚಿತ್ರರಂಗದ ದಿಗ್ಗಜರನ್ನ ಬಿಟ್ಟು ಬಿಡದಂತೆ ಆಕ್ರಮಿಸುತ್ತಿದೆ.

ನೆನ್ನೆಯಷ್ಟೆ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬುಗೆ ಕೊವಿಡ್ ಪಾಸಿಟೀವ್ ಆಗಿತ್ತು. ಈ ಹಿನ್ನೆಲೆಯಲ್ಲಿ ಅವರು ಟ್ಟಿಟರ್ ನಲ್ಲಿ ಪೋಸ್ಟ್ ಒಂದನ್ನ ಹಾಕಿ ನನಗೆ ಕೊರೋನ ಪಾಸಿಟೀವ್ ಆಗಿದ್ದೂ ನಾನು ಹೋಂ ಐಸೋಲೇಷನ್ ನಲ್ಲಿದ್ದೇನೆ. ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿರುವವರು ಮಂಜಾಗೃತ ಕ್ರಮವಾಗಿ ಕೂಡಲೇ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದರು.

ಇದೀಗ ಹೊಸದಾಗಿ ದಕ್ಷಿಣ ಭಾರತದ ಖ್ಯಾತ ನಟಿ ಮೀನ. ಹೊಸ ವರ್ಷಕ್ಕೆ ನಮ್ಮ ಮನೆಗೆ ಹೊಸ ಅತಿಥಿ ಬಂದಿದ್ದೂ ನಮ್ಮ ಇಡೀ ಕುಟುಂಬವನ್ನ ಇಷ್ಟ ಪಟ್ಟು ಆತಿಥ್ಯ ಪಡೆಯಲು ಬಂದಿದೆ . ಆದರೆ ನಾವು ಇದನ್ನ ತುಂಬಾ ದಿನ ನಮ್ಮ ಮನೆಯಲ್ಲಿ ಇರಿಸಿಕೊಳ್ಳುವುದಿಲ್ಲ ಬೇಗ ವಾಪಾಸ್ ಕಳಿಸುತ್ತೇವೆ. ಮತ್ತು ನೀವು ಕೊರೊನಾ ವಿಷಯದಲ್ಲಿ ತುಂಬ ಜವಾಬ್ದಾರಿಯುತವಾಗಿರಿ ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ಇನ್ನೂ ಟಾಲಿವುಡ್ ಮತ್ತೊಬ್ಬ ನಟ ನಿತಿನ್ ಕೂಡ ತಮ್ಮ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಒಂದನ್ನ ಹಾಕಿ ತನ್ನ ಪತ್ನಿಗೆ ಕೊರೊನಾ ಪಾಸಿಟೀವ್ ಆಗಿದ್ದು ಇಂದು ಆಕೆಯ ಜನ್ಮದಿನ. ಜೀವನದಲ್ಲಿ ಇದೇ ಮೊದಲಬಾರಿಗೆ ನೆಗೆಟೀವ್ ವರಿಯಾಗಲಿ ಎಂದು ಕೋರಿಕೊಳ್ಳುತ್ತಿದ್ದೇನೆ ಎಂದು. ಟ್ವೀಟ್ ಮಾಡಿದ್ದಾರೆ.

Share