Connect with us


      
ದೇಶ

ಚಿತ್ರಮಂದಿರದಲ್ಲಿ ಬೆಂಕಿ ಅವಘಡ: ಬೇಸರ ವ್ಯಕ್ತಪಡಿಸಿದ ನಟ ನಾನಿ

UNI Kannada

Published

on

ಹೈದರಬಾದ್:ಜನವರಿ 04, (ಯು.ಎನ್.ಐ.) ಹೈದರಬಾದ್ನಲ್ಲಿರುವ ದೊಡ್ಡ ಚಿತ್ರಮಂದಿಗಳಲ್ಲಿ ಒಂದಾದ ಕೆಬಿಹೆಚ್ ಕಾಲೊನಿಯಲ್ಲಿರುವ ಶಿವಪಾರ್ವತಿ ಚಿತ್ರಮಂದಿರ ಕೂಡ ಒಂದು. ಅತ್ಯಂತ ಪ್ರಾಮುಖ್ಯತೆ ಇರುವ ಚಿತ್ರಮಂದಿರ ಇದಾಗಿದ್ದು  ಸೋಮವಾರ ಬೆಳಗ್ಗೆ ಅಗ್ನಿ ಅವಘಡಕ್ಕೀಡಾಗಿತ್ತು. ಶಾರ್ಟ್ ಸರ್ಕಿಟ್ ನಿಂದ ಚಿತ್ರಮಂದಿರ ಬೆಂಕಿಗಾಹುತಿಯಾಗಿದೆ. ಇದರಿಂದಾಗಿ ಚಿತ್ರ ಮಂದಿರದಲ್ಲಿದ್ದ ಪೀಠೋಪಕರಣಗಳ ಜೊತೆಗೆ ಸಿನಿಮಾ ಪರದೇ ಕೂಡ ಪೂರ್ತಿ ಸುಟ್ಟು ಕರಕಲಾಗಿದೆ.

ಈ  ವಿಷಯ ತಿಳಿದ ನ್ಯಾಚುರಲ್ ಸ್ಟಾರ್ ನಾನಿ ಭಾವೋದ್ವೇಗಕ್ಕೊಳಗಾಗಿದ್ದಾರೆ. ಚಿತ್ರಮಂದಿರದೊಂದಿಗೆ ತಮಗಿದ್ದ ಅನುಭಂದದ ಬಗ್ಗೆ ನೆನಪುಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

‘ಶಿವಪಾರ್ವತಿ ಚಿತ್ರಮಂದಿರದಲ್ಲಿ ಅಗ್ನಿ ಅವಘಡ ಸಂಭವಿಸಿರುವುದು ತುಂಬಾ ನೋವಿನ ಸಂಗತಿ’ ಈ ಚಿತ್ರಮಂದಿರದಲ್ಲಿ ಟಕ್ಕರಿದೊಂಗ ಸಿನಿಮಾ ಮೊದಲ ಷೋ ನೋಡಿರುವುದು ನನಗಿನ್ನೂ ನೆನಪಿನಲ್ಲಿದೆ . ಆ ಸಿನಿಮಾ ಮಂದಿರಕ್ಕೆ ಸ್ನೇಹಿತರೊಂದಿಗೆ ತೆರಳಿದ್ದೂ, ಹೀಗೆ ಎಷ್ಟೋ ಸಿನಿಮಾಗಳನ್ನು ನೋಡಿದ ಈ ಚಿತ್ರಮಂದಿರದ ಬಗ್ಗೆ ನನ್ನ ನೆನಪುಗಳು ತುಂಬಾ ಇದೆ. ಆದರೀಗ ಹೀಗೆ ಬೆಂಕಿಗಾಹುತಿಯಾಗಿರುವ ವಿಷಯ ಕೇಳಿ ತುಂಬಾ ನೋವಾಗುತ್ತಿದೆ . ಅದೃಷ್ಟವಶಾತ್ ಯಾರಿಗೂ ಗಾಯಗಳಾಗದಿರುವುದು ಸಮಾಧಾನ ಎಂದು ಟ್ವೀಟ್ ಮಾಡಿದ್ದಾರೆ.

Share