Connect with us


      
ಸಿನೆಮಾ

ಆಚಾರ್ಯ ಸಿನಿಮಾ ಬಿಡುಗಡೆ ಮುಂದೂಡಿದ ಚಿತ್ರತಂಡ; ಅಭಿಮಾನಿಗಳು ನಿರಾಸೆ

UNI Kannada

Published

on

ಹೈದರಬಾದ್ : ಜನೆವರಿ 15 (ಯು.ಎನ್.ಐ.) ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಆಚಾರ್ಯ’ ಸಿನಿಮಾ ಬಿಡುಗಡೆಯನ್ನ ಮುಂದೂಡಲಾಗಿದೆ. ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರವನ್ನು ಸ್ಟಾರ್ ನಿರ್ದೇಶಕ ಕೊರಟಾಲ ಶಿವ ನಿರ್ದೇಶಿಸಿದ್ದಾರೆ. ಪೂಜಾ ಹೆಗ್ಡೆ ಮತ್ತು ಕಾಜಲ್ ನಾಯಕಿಯರು. ಫೆಬ್ರವರಿ 4 ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಆಚಾರ್ಯ ಚಿತ್ರತಂಡ ಈ ಹಿಂದೆಯೇ ಘೋಷಿಸಿತ್ತು. ಆದರೆ, ಕೊರೊನಾ ಅಬ್ಬರದಿಂದಾಗಿ ಚಿತ್ರದ ಬಿಡುಗಡೆಯನ್ನು ಮುಂದೂಡುತ್ತಿರುವುದಾಗಿ ಚಿತ್ರತಂಡ ಬಹಿರಂಗಪಡಿಸಿದೆ. ಹೊಸ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

ಕೊರೊನಾದಿಂದಾಗಿ ಆರ್‌ಆರ್‌ಆರ್ ಮತ್ತು ರಾಧೇಶ್ಯಾಮ್‌ನಂತಹ ದೊಡ್ಡ ಚಲನಚಿತ್ರಗಳ ಬಿಡುಗಡೆಯನ್ನು ಮುಂದೂಡಿದ್ದರಿಂದ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಇದೀಗ ಈ ಪಟ್ಟಿಗೆ ಚಿರಂಜೀವಿ ‘ಆಚಾರ್ಯ’ ಸಿನಿಮಾ ಕೂಡ ಸೇರಿಕೊಂಡಿದೆ. ಇದರಿಂದ ಮೆಗಾ ಅಭಿಮಾನಿಗಳು ತೀವ್ರ ನಿರಾಸೆಗೊಂಡಿದ್ದಾರೆ.

ಮತ್ತೊಂದೆಡೆ ಚಿತ್ರಮಂದಿರಗಳಲ್ಲಿ  ದೊಡ್ಡ ಸಿನಿಮಾಗಳು ಬಿಡುಗಡೆಯಾಗದಿರುವ ಹಿನ್ನೆಲೆ ಥಿಯೇಟರ್‌ಗಳಲ್ಲಿ ಹಬ್ಬದ ಸಡಗರ ಮರೆಯಾಗಿದೆ. ನಾಗಾರ್ಜುನ ಅಭಿನಯದ ಬಂಗಾರರಾಜು ಸಿನಿಮಾ ನಿನ್ನೆ ಬಿಡುಗಡೆಯಾಗಿದ್ದು, ಚಿತ್ರಮಂದಿರಗಳಲ್ಲಿ ಸದ್ದು ಮಾಡುತ್ತಿದೆ.

Share