Connect with us


      




ದೇಶ

ಆಕ್ಸಿಡೆಂಟ್ ನಂತರ ಪ್ರೇಕ್ಷಕರ ಮುಂದೆ ಬಂದ ಸಾಯಿ ಧರಂತೇಜ್

UNI Kannada

Published

on

ಹೈದರಬಾದ್ : ಜನವರಿ 02 (ಯು.ಎನ್.ಐ.) ಮೆಗಾಸ್ಟಾರ್ ಚಿರಂಜೀವಿ ಅಳಿಯ ಸಾಯಿ ಧರಮ್ ತೇಜ್ ಇತ್ತೀಚೆಗೆ ಹೆಚ್ಚಾಗಿ ಹೊರಗಡೆ ಬರುತ್ತಿದ್ದಾರೆ. ಆಕ್ಸಿಡೆಂಟ್  ನಂತರ ಸುಮಾರು 45 ದಿನಗಳು ಹೊರಜಗತ್ತಿನಿಂದ ದೂರ ಉಳಿದಿದ್ದರು. ಮೊನ್ನೆ ಮೊನ್ನೆಯಷ್ಟೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತೆಗೆದ ಫೋಟೋಗಳ ಮೂಲಕ ಪ್ರೇಕ್ಷಕರಿಗೆ ದರ್ಶನ ನೀಡಿದ್ದರು. ಅದರಲ್ಲಿ ನೋಡಲು ತುಂಬಾ ಸಣ್ಣಗಾಗಿರುವ ಹಾಗೆ ಕಂಡಿದ್ದರು.

ಇತ್ತೀಚೆಗೆ ಸಾಯಿಧರಂ ತೇಜ್ ಮನೆಗೆ ಕೇಂದ್ರ ಮಂತ್ರಿ ಕಿಷನ್ ರೆಡ್ಡಿ ಭೇಟಿ ನೀಡಿ ಪ್ರತ್ಯೇಕವಾಗಿ ಅಭಿನಂದನೆಗಳನ್ನ ತಿಳಿಸಿದ್ದರು. ಈ ಫೋಟೋಗಳನ್ನು ತೇಜ್, ತಮ್ಮ ಸೋಷಿಯಲ್ ಮೀಡಿಯ ಖಾತೆಯಲ್ಲಿ ಹಂಚಿಕೊಂಡಿದ್ದರು. ಸದ್ಯ ಈ ಫೋಟೊಗಳು ವೈರಲ್ ಆಗುತ್ತಿವೆ ಇದನ್ನು ಕಂಡ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

ಸೆಪ್ಟೆಂಬರ್  10 ರಂದು ಕೇಬಲ್ ಬ್ರಿಡ್ಜ್ ಸಮಿಪದಲ್ಲಿ ಸಾಯಿ ಧರಂ ತೇಜ್ ಬೈಕ್ ಸ್ಕಿಡ್ ಆಗಿ ಅಪಘಾತಕ್ಕೊಳಗಾಗಿದ್ದರು . 45 ದಿನಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು. ಇದೀಗ ಮುಂದಿನ ತಿಂಗಳಿನಿಂದ ತೇಜ್ ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಕ್ಕೆ ಸಿದ್ದರಾಗುತ್ತಿದ್ದಾರೆ.

Share