Connect with us


      
ದೇಶ

ವೈಸಿಪಿ ಕಾರ್ಯಕರ್ತರಿಂದ ಪ್ರಾಣಾಪಾಯವಿದೆ ಎಂದ ಚಂದ್ರಬಾಬು ನಾಯ್ಡು

UNI Kannada

Published

on

ಹೈದರಬಾದ್ : ಜನೆವರಿ 08 (ಯು.ಎನ್.ಐ.) ತೆಲುಗು ದೇಶಂ ನಾಯಕ ಚಂದ್ರಬಾಬು ನಾಯ್ಡು ಆಂಧ್ರಪ್ರದೇಶ ಡಿಜಿಪಿ ಗೌತಮ್ ಸವಾಂಗ್ ಅವರಿಗೆ ಟಿಡಿಪಿ ನಾಯಕ ದಾಸ್ ರಿಗೆ ಆಡಳಿತ ಪಕ್ಷದ ನಾಯಕರಿಂದ ಕೊಲೆ ಬೆದರಿಕೆ ಇದೆ ಎಂದು ಪತ್ರ ಬರೆದಿದ್ದಾರೆ.

ಗುಂಟೂರು ಜಿಲ್ಲೆಯ ತಾಡಿಕೊಂಡ ವಿಧಾನಸಭಾ ಕ್ಷೇತ್ರದ ಉದ್ದಂಡರಾಯುನಿಪಾಲೆಂ ಗ್ರಾಮದ ಪುಲಿ ದಾಸ್ ಅಲಿಯಾಸ್ ಚಿನ್ನ, ಆಡಳಿತ ಪಕ್ಷದ ಸದಸ್ಯರಿಂದ ಪ್ರಾಣಾಪಾಯದಲ್ಲಿದೆ ಎಂದು ಚಂದ್ರಬಾಬು ಪತ್ರದಲ್ಲಿ ತಿಳಿಸಿದ್ದಾರೆ.

ಪುಲಿ ದಾಸ್ ಟಿಡಿಪಿಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ ಮತ್ತು ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ನಡೆಯುತ್ತಿದೆ ಎಂದು ಪ್ರತಿಭಟನೆ ನಡೆಸುತ್ತಿದ್ದರು ಮತ್ತು ಮರಿಯಾ ದಾಸ್ ರಾಜಕೀಯ ಕಾರ್ಯದಲ್ಲಿ ಚುರುಕಾಗಿ ಕೆಲಸಮಾಡುತ್ತಿದ್ದಾರೆಂದು ಸಂಸದ ನಂದಿಗಂ ಸುರೇಶ್ ದಾಸ್ ವಿರುದ್ದ ಜಿದ್ದು ಬೆಳೆಸಿಕೊಂಡಿದ್ದರು. ನಂದಿಗಾಂ ಸುರೇಶ್ ಅವರು ಮರಿಯಾ ದಾಸ್ ವಿರುದ್ಧ ಸುಮಾರು 30 ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಚಂದ್ರ ಬಾಬು ನಾಯ್ಡು ಆರೋಪಿಸಿದ್ದಾರೆ.

ಸೆಪ್ಟೆಂಬರ್ 18, 2021 ರಂದು ಸುರೇಶ್ ಅವರ ಅನುಯಾಯಿಗಳು ಉದ್ದಂಡರಾಯುನಿಪಾಲೆಂ ಗ್ರಾಮದ ಮಧ್ಯದಲ್ಲಿ ಮಾರಕಾಸ್ತ್ರಗಳಿಂದ ಮಾರಿಯಾ ದಾಸ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದರು ಎಂದು ಚಂದ್ರಬಾಬು ಪತ್ರದಲ್ಲಿ ಬಹಿರಂಗಪಡಿಸಿದ್ದಾರೆ.
ದಾಸ್ ನನ್ನು ಕೊಲ್ಲುವ ಉದ್ದೇಶದಿಂದ ಪ್ರತಿದಿನ ಆತನ ಚಲನವಲನಗಳನ್ನು ಗಮನಿಸುತ್ತ ಆತನ ಮನೆಯ ಮೇಲೆ ನಿಗಾ ಇಡುತ್ತಿದ್ದಾರೆ ಎಂದು ಬಾಬು ಡಿಜಿಪಿಗೆ ಪತ್ರದಲ್ಲಿ ತಿಳಿಸಿದ್ದಾರೆ. ದಾಳಿಯ ಬಗ್ಗೆ ಕೂಲಂಕಷ್ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ದಾಸ್‍ಗೆ ಯಾವುದೇ ಹಾನಿಯಾಗದಂತೆ ಸೂಕ್ತ ಪೆÇಲೀಸ್ ರಕ್ಷಣೆ ನೀಡಬೇಕು ಎಂದು ಬಾಬು ಆಗ್ರಹಿಸಿದ್ದಾರೆ.

Share