Connect with us


      




ಸಿನೆಮಾ

ಪುಷ್ಪ ಸಿನಿಮಾ ಬಗ್ಗೆ ಸೂಪರ್ ಸ್ಟಾರ್ ಮಹೇಶ್ ಬಾಬು ಟ್ವೀಟ್

UNI Kannada

Published

on

ಹೈದರಬಾದ್; ಜನವರಿ 05, (ಯು.ಎನ್.ಐ.) ಇತ್ತೀಚೆಗಷ್ಟೇ ‘ಪುಷ್ಪ’ ಸಿನಿಮಾದ ಬಗ್ಗೆ ಸೂಪರ್ ಸ್ಟಾರ್ ಮಹೇಶ್ ಬಾಬು ಟ್ವೀಟ್ ಮಾಡಿದ್ದರು. ಐಕಾನ್ ಸ್ಟಾರ್ ಅಲ್ಲು ಅರ್ಜುನ್, ನಿರ್ದೇಶಕ ಸುಕುಮಾರ್ ಜೊತೆಯಾಗಿ ಮೂಡಿ ಬಂದ ಹ್ಯಾಟ್ರಿಕ್ ಚಿತ್ರ ಪುಷ್ಪ: ದಿ ರೈಸ್ ಭಾಗ 1.  ರಶ್ಮಿಕಾ ಮಂದಣ್ಣ ಇದರಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಡಿಸೆಂಬರ್ 17 ರಂದು ಅದ್ಧೂರಿಯಾಗಿ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಹಿಟ್ ಟಾಕ್ ಪಡೆದು ಹೊಸ ದಾಖಲೆಗಳನ್ನು ಬರೆಯುತ್ತಿದೆ.

ಈ ಹಿನ್ನೆಲೆಯಲ್ಲಿ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಸಿನಿಮಾದ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ಅಲ್ಲು ಅರ್ಜುನ್ ‘ಪುಷ್ಪ’ ಅದ್ಭುತ, ಸೆನ್ಸೇಷನಲ್ ಮತ್ತು ಒರಿಜಿನಲ್ ಸುಕುಮಾರ್ ಚಿತ್ರ ರಾ, ರಿಸ್ಟಿಕ್ ಮತ್ತು ಬ್ರೂಟಲಿ ಹಾನೆಸ್ಟ್ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

Share