Connect with us


      
ಸಾಮಾನ್ಯ

ದೇವಸ್ಥಾನದಲ್ಲಿ ಜೋರಾಗಿ ಗಂಟೆ ಹೊಡೆದರೇ ಕೇಸ್ ಬೀಳುತ್ತೆ ಹುಷಾರ್

Kumara Raitha

Published

on

ಬೆಂಗಳೂರು: ಫೆಬ್ರವರಿ 15 (ಯು.ಎನ್.ಐ.) ನಿಗದಿತ ಶಬ್ದಕ್ಕಿಂತ ಅತೀ ಹೆಚ್ಚು ಶಬ್ದ ಹೊರಡಿಸುವ ಗಂಟೆಗಳ ಬಳಕಗೆ ಸಂಬಂಧಿಸಿ ಬೆಂಗಳೂರು ಪೊಲೀಸರು ನೋಟೀಸ್ ಜಾರಿ ಮಾಡಿದ್ದಾರೆ.

ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಡೆಸಿಬಲ್ ಶಬ್ದಕ್ಕಿಂತ ಹೆಚ್ಚಿನ ಶಬ್ದವನ್ನು  ಪೊಲೀಸ್ ಠಾಣೆಯಿಂದ ದೊಡ್ಡ ಗಣಪತಿ ದೇವಸ್ಥಾನ ಸಮೂಹಕ್ಕೆ ನೋಟೀಸ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಶಬ್ದದ ಗಂಟೆ ಹೊಡೆಯದಂತೆ ಬಸವನಗುಡಿಯ ದೊಡ್ಡ ಗಣಪತಿ ಸಮೂಹ ದೇವಸ್ಥಾನಗಳ ಕಾರ್ಯನಿರ್ವಹಣಾಧಿಕಾರಿ ಸೂಚನೆ ನೀಡಿದ್ದಾರೆ.
ಸೂಚನೆಯ ಹೊರತಾಗಿಯೂ ಹೆಚ್ಚಿನ ಶಬ್ದ ಬರುವಂತೆ ಗಂಟೆ ಹೊಡೆದಲ್ಲಿ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಢಮರುಗ, ಧ್ವನಿ ವರ್ಧಕ ಯಂತ್ರಗಳಿಂದ ಧ್ವನಿ ಹೊರಡಿಸಬಾರದು ಹೆಚ್ಚಿನ ಶಬ್ದ ಕೇಳಿಬಂದಲ್ಲಿ Noise Pollution (regulation and control rules amended 2000 farmed under the Environment Pollution act 1986 ಅಡಿಯಲ್ಲಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ.
ದೊಡ್ಡಗಣೇಶ ಸಮೂಹ ದೇವಸ್ಥಾನಗಳೆಂದರೆ ದೊಡ್ಡ ಗಣೇಶ ದೇವಸ್ಥಾನ,, ಮಿಂಟೋ ಆಂಜನೇಯ ಸ್ವಾಮಿ ದೇವಸ್ಥಾನ, ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನ, ದೊಡ್ಡ ಬಸವಣ್ಣ ದೇವಸ್ಥಾನ, ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಹಾಗೂ ಇನ್ನಿತರ ದೇವಸ್ಥಾನಗಳು ಸಮೂಹದಡಿ ಇವೆ

Share