Connect with us


      
ಸಾಮಾನ್ಯ

ಆರೋಗ್ಯದ ಕಾಳಜಿ ವಹಿಸಿದ ಹಿತೈಷಿಗಳಿಗೆ ಧನ್ಯವಾದ ಅರ್ಪಿಸಿದ ಶಿಖರ್ ಧವನ್

Vanitha Jain

Published

on

ಅಹಮದಾಬಾದ್: ಫೆಬ್ರವರಿ 03 (ಯು.ಎನ್.ಐ.) ಕೋವಿಡ್-೧೯ ಗೆ ತುತ್ತಾಗಿದ್ದ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಕಾಳಜಿ ತೋರಿದ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.

ನಿಮ್ಮ ಹಾರೈಕೆಗೆ ಎಲ್ಲರಿಗೂ ನನ್ನ ಧನ್ಯವಾದಗಳು. ನಾನು ಚೆನ್ನಾಗಿಯೇ ಇದ್ದೇನೆ ಮತ್ತು ನನ್ನ ಆರೋಗ್ಯದ ಕಾಳಜಿ ವಹಿಸಿದ ಪ್ರತಿಯೊಬ್ಬರಿಗೂ ಪ್ರೀತಿಯಿಂದ ವಿನಮ್ರನಾಗಿದ್ದೇನೆ ಎಂದು ಶಿಖರ್ ಧವನ್ ಟ್ವೀಟ್ ಮಾಡಿದ್ದಾರೆ.

ಮೂರು ಏಕದಿನ ಸರಣಿ ನಿಮಿತ್ತ ಅಹಮದಾಬಾದ್‌ಗೆ ಆಗಮಿಸಿದ ಭಾರತದ ಏಳು ಸದಸ್ಯರಲ್ಲಿ ಶಿಖರ್ ಧವನ್ ರವರಲ್ಲಿಯೂ ಕೋವಿಡ್ ಕಾಣಿಸಿಕೊಂಡಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿತ್ತು. ಭಾರತ, ವೆಸ್ಟ್ ಇಂಡೀಸ್ ಏಕದಿನ ಸರಣಿ ಫೆಬ್ರವರಿ 6 ರಿಂದ ಪ್ರಾರಂಭವಾಗುತ್ತದೆ.

ಧವನ್, ರುತುರಾಜ್ ಗಾಯಕ್ವಾಡ್ ಮತ್ತು ಶ್ರೇಯಸ್ ಅಯ್ಯರ್, ನವದೀಪ್ ಸೈನಿ ಮತ್ತು ಇತರ 3 ಸಹಾಯಕ ಸಿಬ್ಬಂದಿಗಳೊಂದಿಗೆ ವೈರಸ್‌ಗೆ ತುತ್ತಾದ ತಂಡದ 3 ಆಟಗಾರರಲ್ಲಿ ಶಿಖರ್ ಧವನ್ ಕೂಡ ಒಬ್ಬರು. ಅವರೆಲ್ಲರೂ ಪ್ರತ್ಯೇಕವಾಗಿದ್ದು, ಬಿಸಿಸಿಐ ವೈದ್ಯಕೀಯ ತಂಡದಿಂದ ನಿಗಾ ಇರಿಸಲಾಗಿದೆ.

ರೋಹಿತ್ ಶರ್ಮಾ ನೇತೃತ್ವದ ಏಕದಿನ ತಂಡಕ್ಕೆ ಮಯಾಂಕ್ ಅಗರ್ವಾಲ್ ಅವರನ್ನು ಬಿಸಿಸಿಐ ಬುಧವಾರ ಸೇರ್ಪಡೆ ಮಾಡಿದೆ. ಧವನ್ ಮತ್ತು ಗಾಯಕ್ವಾಡ್ ಇಬ್ಬರೂ ಕನಿಷ್ಠ ಮೊದಲ ಎರಡು ಪಂದ್ಯಗಳಿಗೆ ಲಭ್ಯವಿರುವುದಿಲ್ಲ, ಮಯಾಂಕ್ ಅವರು ರೋಹಿತ್ ಅವರೊಂದಿಗೆ ಓಪನಿಂಗ್ ಬ್ಯಾಟಿಂಗ್ ಗೆ ಸಿದ್ಧರಾಗಿದ್ದಾರೆ.

Share