Connect with us


      




ದೇಶ

ಯೋಗಿಗೆ ಟಿಕೆಟ್ ನೀಡುವ ಹಿಂದಿದೆ ಬಹುದೊಡ್ಡ ಲೆಕ್ಕಾಚಾರ

UNI Kannada

Published

on

YOGI AADITYANATH WITH AMITSHAH
ಯೋಗಿ ಆದಿತ್ಯನಾಥರನ್ನು ಲಕ್ನೋದ ಗದ್ದುಗೆಯಲ್ಲಿ ಕೂರಿಸುವಲ್ಲಿ ಈ ಸ್ಥಾನಗಳು ಪ್ರಮುಖ ಕೊಡುಗೆಯನ್ನು ಹೊಂದಿವೆ. ಹೀಗಿರುವಾಗ ಮುಂಬರುವ ಚುನಾವಣೆಯಲ್ಲೂ ಬಿಜೆಪಿ ಮತ್ತು ಯೋಗಿ ಆದಿತ್ಯನಾಥ್ ಈ ಎಲ್ಲ ಸ್ಥಾನಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ತೀವ್ರ ಪ್ರಯತ್ನ ನಡೆಸಲಿದ್ದಾರೆ.

ಲಖನೌ : ಜನವರಿ 16 (ಯು.ಎನ್.ಐ.) ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಎರಡು ಹಂತಗಳಿಗೆ ಯುಪಿಯಲ್ಲಿ ಬಿಜೆಪಿ ತನ್ನ 107 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಹೆಚ್ಚು ಗಮನ ಸೆಳೆದಿದ್ದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಬಿಜೆಪಿ ಗೋರಖ್‌ಪುರ ಸದರ್‌ನಿಂದ ಟಿಕೆಟ್ ನೀಡಿದ್ದು. ಯೋಗಿಗೆ ಕಮಲ ಪಾಳಯ ಗೋರಖ್‌ಪುರದಿಂದ ಸುಮ್ಮಸುಮ್ಮನೆ ಅಖೈರುಗೊಳಿಸಿಲ್ಲ. ಇದರ ಹಿಂದೆ ದೊಡ್ಡ ಕಾರಣ ಲೆಕ್ಕಾಚಾರ ಅಡಗಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.
ಗೋರಖ್‌ಪುರ ವಿಧಾನಸಭಾ ಕ್ಷೇತ್ರವನ್ನು ಕಳೆದ 33 ವರ್ಷಗಳಿಂದ ಬಿಜೆಪಿ ವಶಪಡಿಸಿಕೊಂಡಿದೆ. ಯೋಗಿ ಆದಿತ್ಯನಾಥ್ ಅವರೇ 1998 ರಿಂದ 2017 ರವರೆಗೆ ಗೋರಖ್‌ಪುರ ಲೋಕಸಭಾ ಕ್ಷೇತ್ರದಿಂದ ನಿರಂತರವಾಗಿ ಗೆಲುವು ಸಾಧಿಸುತ್ತಿದ್ದಾರೆ. ಗೋರಖ್‌ಪುರ ಪ್ರದೇಶದ ಪ್ರತಿ ವಿಧಾನಸಭಾ ಸ್ಥಾನದಲ್ಲೂ ಸಿಎಂ ಯೋಗಿ ಉತ್ತಮ ಹಿಡಿತ ಹೊಂದಿದ್ದಾರೆ ಎಂದು ಪರಿಗಣಿಸಲಾಗಿದೆ. ಹೀಗಿರುವಾಗ ಇಲ್ಲಿಂದ ಗೆಲುವು ಸಾಧಿಸುವುದು ಅವರಿಗೆ ತುಂಬಾ ಸುಲಭ ಎನ್ನಲಾಗುತ್ತಿದೆ.

ಯೋಗಿಯ ಭದ್ರಕೋಟೆ ಗೋರಖ್‌ಪುರ್:

ಗೋರಖ್‌ಪುರ ಸದಾರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಯೋಗಿ ಆದಿತ್ಯನಾಥ್, ಗೋರಖ್‌ಪುರ-ಬಸ್ತಿ ವಿಭಾಗದ 41 ಸ್ಥಾನಗಳ ಮೇಲೆ ನೇರ ಕಣ್ಣಿಡಲು ಸಾಧ್ಯವಾಗುತ್ತದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಈ 41 ಸ್ಥಾನಗಳಲ್ಲಿ ಹೆಚ್ಚಿನವು ಬಿಜೆಪಿ ಪಾಲಾಗಿದೆ. ಯೋಗಿ ಆದಿತ್ಯನಾಥರನ್ನು ಲಕ್ನೋದ ಗದ್ದುಗೆಯಲ್ಲಿ ಕೂರಿಸುವಲ್ಲಿ ಈ ಸ್ಥಾನಗಳು ಪ್ರಮುಖ ಕೊಡುಗೆಯನ್ನು ಹೊಂದಿವೆ. ಹೀಗಿರುವಾಗ ಮುಂಬರುವ ಚುನಾವಣೆಯಲ್ಲೂ ಬಿಜೆಪಿ ಮತ್ತು ಯೋಗಿ ಆದಿತ್ಯನಾಥ್ ಈ ಎಲ್ಲ ಸ್ಥಾನಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ತೀವ್ರ ಪ್ರಯತ್ನ ನಡೆಸಲಿದ್ದಾರೆ.

ಗೋರಖ್‌ಪುರ ಯೋಗಿಯ ಭದ್ರಕೋಟೆ
ಉತ್ತರ ಪ್ರದೇಶದಲ್ಲಿ ನಡೆದ ಕಳೆದ ಎರಡು ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಗಮನಿಸಿದರೆ, ಗೋರಖ್‌ಪುರ ಸದರ್‌ನಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಶೇಕಡಾ 50 ರಷ್ಟು ಬಿಜೆಪಿ ಖಾತೆಗೆ ಹೋಗಿದೆ. 2017ರಲ್ಲೂ ಬಿಜೆಪಿಯ ರಾಧಾ ಮೋಹನ್ ದಾಸ್ ಅಗರ್ವಾಲ್ 1,22,221 ಮತಗಳನ್ನು ಅಂದರೆ 55.85% ಮತಗಳನ್ನು ಪಡೆದಿದ್ದರು. ಅದೇ ಸಮಯದಲ್ಲಿ, 2012 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು 49.19% ಮತಗಳನ್ನು ಪಡೆದಿದ್ದರು.

ಗೋರಖ್‌ಪುರ ಸದರ್ ಸ್ಥಾನದ ಜಾತಿ ಸಮೀಕರಣ:

ಗೋರಖ್‌ಪುರ ಸದರ್ ಕ್ಷೇತ್ರದಲ್ಲಿ ಪ್ರಸ್ತುತ 4,53,662 ನೋಂದಾಯಿತ ಮತದಾರರಿದ್ದು, ಅದರಲ್ಲಿ 2,43,013 ಪುರುಷರು ಮತ್ತು 2,10,574 ಮಹಿಳೆಯರು. ಈ ಕ್ಷೇತ್ರದಲ್ಲಿ ಸುಮಾರು 60 ಸಾವಿರ ಬ್ರಾಹ್ಮಣರಿದ್ದರೆ, 45 ಸಾವಿರಕ್ಕೂ ಹೆಚ್ಚು ಕಾಯಸ್ಥ ಮತದಾರರಿದ್ದಾರೆ. ಇದಲ್ಲದೇ 15 ಸಾವಿರ ಕ್ಷತ್ರಿಯ ಹಾಗೂ ಸುಮಾರು 30 ಸಾವಿರ ಮುಸ್ಲಿಂ ಮತದಾರರಿದ್ದಾರೆ. ಇದಲ್ಲದೆ, ವೈಶ್ಯರು, ಯಾದವರು, ನಿಷಾದರು ಮತ್ತು ದಲಿತ ವರ್ಗಗಳೂ ಉತ್ತಮ ಸಂಖ್ಯೆಯಲ್ಲಿವೆ. ಆದರೆ, ಗೋರಖ್‌ಪುರದ ರಾಜಕೀಯ ಇತಿಹಾಸವನ್ನು ಅವಲೋಕಿಸಿದರೆ, ಇಲ್ಲಿ ಸಿಎಂ ಯೋಗಿ ಅವರ ತಂತ್ರಗಾರಿಕೆಯ ಮುಂದೆ ಈ ಜಾತಿ ಸಮೀಕರಣಗಳೆಲ್ಲವೂ ಕುಸಿದು ಬಿದ್ದಿದ್ದು, ಚುನಾವಣೆಯಲ್ಲಿ ಗಣಿತದ ಕೈ ಹಿಡಿದಿರುವ ಅಭ್ಯರ್ಥಿಯೇ ಗೆಲ್ಲುತ್ತಿದ್ದಾರೆ.

ಈ ಎಲ್ಲಾ ಲೆಕ್ಕಾಚಾರಗಳಿಂದ ಅಳೆದು ತೂಗಿ ಬಿಜೆಪಿ ಯೋಗಿಗೆ ಮತ್ತೆ ಗೋರಖ್‌ಪುರ್‌ ಕ್ಷೇತ್ರದಿಂದ ಕಣಕ್ಕಿಳಿಸಿದ್ದು ಯೋಗಿಯೇ ಮತ್ತೆ ಕ್ಷೇತ್ರದಲ್ಲಿ ಕೇಸರಿ ಬಾವುಟ ಹಾರಿಸುವ ನಿರೀಕ್ಷೆ ಕಮಲ ಪಾಳಯದ್ದಾಗಿದೆ.

Share