Connect with us


      
ದೇಶ

ಗಾಂಧಿ ಕುಟುಂಬ ಟೀಕಿಸಿದ್ದ ‘ಕೈ’ ನಾಯಕರ ವಜಾ

Iranna Anchatageri

Published

on

ಚೆನ್ನೈ: ಏಪ್ರಿಲ್ 04 (ಯು.ಎನ್.ಐ) ‘ಕಾಂಗ್ರೆಸ್ ಉಳಿಸಲು’ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಪಕ್ಕಕ್ಕೆ ಸರಿಯಬೇಕು ಎಂದು ಸಲಹೆ ನೀಡಿದ ಕಾಂಗ್ರೆಸ್ ವಕ್ತಾರರನ್ನು ತಮಿಳುನಾಡಿನಲ್ಲಿ ವಜಾ ಮಾಡಲಾಗಿದೆ.

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಸದಸ್ಯರಾದ ಅಮೇರಿಕಾಯ್ ವಿ ನಾರಾಯಣನ್ ಅವರು ಮಮತಾ ಬ್ಯಾನರ್ಜಿ, ಜಗನ್ ಮೋಹನ್ ರೆಡ್ಡಿ ಮತ್ತು ಕೆ ಚಂದ್ರಶೇಖರ ರಾವ್ ಅವರಂತಹ ಪಕ್ಷದ ಹಿರಿಯರು ಮರಳಬೇಕು ಮತ್ತು ಕಾಂಗ್ರೆಸ್‌ನಲ್ಲಿ ಜನರ ವಿಶ್ವಾಸವನ್ನು ಪುನಃಸ್ಥಾಪಿಸಬೇಕು ಎಂದು ಹೇಳಿದ್ದರು.

“ಭಾರತದ ಜನರ ವಿಶ್ವಾಸವನ್ನು ಗಳಿಸಲು ಈ ಹಿಂದೆ ಕಾಂಗ್ರೆಸ್ ಸಖ್ಯದಲ್ಲಿದ್ದ ದೊಡ್ಡ ಹೆಸರು ಮಾಡಿರುವ ಮಮತಾ ಬ್ಯಾನರ್ಜಿ, ಜಗನ್ ಮೋಹನ್ ರೆಡ್ಡಿ, ಶರದ್ ಪವಾರ್, ಕೆ ಚಂದ್ರಶೇಖರ ರಾವ್ (ಕೆಸಿಆರ್) ಅವರಂತಹ ನಾಯಕರನ್ನು ಕರೆತಂದು ತಮ್ಮ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವಂತೆ ವಿನಂತಿಸಿ ಎಂದು ತಮಿಳುನಾಡು ಕಾಂಗ್ರೆಸ್ ವಕ್ತಾರ ಅಮೇರಿಕಾಯ್ ವಿ ನಾರಾಯಣನ್ ಇತ್ತೀಚಿಗೆ ಸಲಹೆ ನೀಡಿದ್ದರು.

ಮಮತಾ ಬ್ಯಾನರ್ಜಿಯವರಿಗೆ ತೃಣಮೂಲ ಕಾಂಗ್ರೆಸ್ ಗಿಂತ ಕಾಂಗ್ರೆಸ್ ನಲ್ಲಿದ್ದರೆ ಪ್ರಧಾನ ಮಂತ್ರಿಯಾಗಲು ಉತ್ತಮ ಸಾಧ್ಯತೆಗಳಿವೆ ಎಂದರು. “ನಾನು ರಾಹುಲ್ ಗಾಂಧಿಯನ್ನು ಪ್ರೀತಿಸುತ್ತೇನೆ ಆದರೆ ದುರದೃಷ್ಟವಶಾತ್, ಅವರ ಸಾಮರ್ಥ್ಯ ಸಾಬೀತಾಗಿಲ್ಲ. ಸೋನಿಯಾ ಗಾಂಧಿ ಅವರು ಹಲವು ಸಾಧನೆ ಮಾಡಿದ್ದಾರೆ. ಸೋನಿಯಾ ಗಾಂಧಿಯವರು ಮುಂಚೂಣಿಯಲ್ಲಿರಬೇಕು ಮತ್ತು ಅವರ ಮಕ್ಕಳು ಪಕ್ಕಕ್ಕೆ ಸರಿಯಬೇಕು ಎಂದು ನಾರಾಯಣನ್ ಹೇಳಿದರು.

Share