Connect with us


      
ಕರ್ನಾಟಕ

ಏಷ್ಯಾದಲ್ಲೆ ಮೊದಲ ಬಾರಿಗೆ ಸಹಕಾರ ಸಂಘ ಹುಟ್ಟಿದ್ದು ನಮ್ಮ ಕರ್ನಾಟಕದಲ್ಲಿ : ಸಿಎಂ ಬೊಮ್ಮಾಯಿ

UNI Kannada

Published

on

ಬೆಂಗಳೂರು: ಮಾರ್ಚ್ 20 (ಯು.ಎನ್.ಐ.) ಏಷ್ಯಾ ಖಂಡದಲ್ಲೇ ‌ಮೊದಲ ಬಾರಿಗೆ ಸಹಕಾರಿ ಸಂಘ ಹುಟ್ಟಿದ್ದು ಕರ್ನಾಟಕದಲ್ಲಿ ಹಿರಿಯರ ಸೇವೆಯಿಂದ ಸಹಕಾರಿ ಸಂಘಗಳು ಬೆಳೆದಿದೆ ಎಂದು ಹೇಳಿದ ಸಿಎಂ ಬೊಮ್ಮಾಯಿ

ಕೆಂಗೇರಿ ಉಪನಗರದ ಗಣೇಶ ಮೈದಾನ ಇಲ್ಲಿ ಆಯೋಜಿಸಿದ್ದ “ಸಹಕಾರ ರತ್” ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಹಕಾರ ಎಂಬುವುದು ಬದುಕಿನ ಒಂದು ಭಾಗ ಮನುಷ್ಯ ಸಂಘ ಜೀವಿ, ಒಬ್ಬಂಟಿಗನಾಗಿ ಬದುಕಲು ಆಗುವುದಿಲ್ಲ ಸಹಕಾರ ಇಲ್ಲದಿದ್ದರೆ ಸಮಾಜ ಹಾಗೂ ಬದುಕು ಇರುವುದಿಲ್ಲ ಇದನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೆ ಪ್ರಗತಿ ಅಸಾಧ್ಯ, ಏಷ್ಯಾ ಖಂಡದಲ್ಲೇ ‌ಮೊದಲ ಬಾರಿಗೆ ಸಹಕಾರಿ ಸಂಘ ಹುಟ್ಟಿದ್ದು ಕರ್ನಾಟಕದಲ್ಲಿ ಹಿರಿಯರ ಸೇವೆಯಿಂದ ಸಹಕಾರಿ ಸಂಘಗಳು ಬೆಳೆದಿದೆ ಎಂದು ಸಿಎಂ ಹೇಳಿದರು.

ಇದೇ ಸಂದರ್ಭದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಗಣನೀಯ ಸೇವೆಸಲ್ಲಿಸಿದ 60 ಸಾಧಕರಿಗೆ ಧನ್ಯವಾದವನ್ನ ತಿಳಿಸಿ ಸನ್ಮಾನ ಮಾಡಿದರು.

ಸಹಕಾರಿ ರಂಗದಲ್ಲಿ ಗುಜರಾತ್ ಹಾಗೂ ಮಹಾರಾಷ್ಟ್ರ ಮುಂದಿದೆ, ಸಹಕಾರಿ ಸಂಘದಲ್ಲಿ ನಮ್ಮ‌ ರಾಜ್ಯ ದೇಶದಲ್ಲೇ‌ ಮೊದಲ ಸ್ಥಾನದಲ್ಲಿ ಬರಬೇಕು. ಅಮೀತ್ ಶಾ ಕೂಡ ಸಹಕಾರಿ ರಂಗದಿಂದ ಬಂದವರು ಮೊದಲಿಗೆ ಅವರು ಅಹಮದಾಬಾದ್ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯನಿವರ್ವಹಿಸಿದ್ದರು, ಈಗ ದೇಶದ ಗೃಹ ಮಂತ್ರಿ ಆಗಿದ್ದಾರೆ ಎಂದರು.

ಜೀವನ್ಕ್ಕೆ ದುಡ್ಡೇ ದೊಡ್ಡಪ್ಪ ಅಲ್ಲ, ದುಡಿಮೆಯೇ ದೊಡ್ಡಪ್ಪ ಅಂತ ನಂಬಿದ್ದೇನೆ. ರಾಜ್ಯದಲ್ಲಿ ಸಹಕಾರಿ ಸಂಘ ಬಹಳ ದೊಡ್ಡದಾಗಿದೆ, ದುಡಿಯುವ ವರ್ಗವು ಹಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಅದರಲ್ಲೂ ಮಹಿಳೆಯರು ಮೊದಲು ಭಾಗವಹಿಸಬೇಕು, ಸಾಕಷ್ಟು ಮಹಿಳೆಯರ ಸಂಘಗಳು ಇದೆ,  ಮುಂದಿನ ದಿನಗಳಲ್ಲಿ ವಿವಿಧ ಉದ್ದೇಶ ಸಹಕಾರಿ ‌ಮಹಿಳಾ ಸಂಘ ಪ್ರತಿ ತಾಲೂಕಿನಲ್ಲಿ ಪ್ರಾರಂಭ ಮಾಡುತ್ತೇವೆ ಮತ್ತು ಸರ್ಕಾರದ ಕಡೆಯಿಂದ ಬಂಡವಾಳ ಹಾಕುತ್ತೇವೆ ಇದರೊಂದಿಗೆ ಮಹಿಳೆಯರು ಕೂಡ ಸರ್ಕಾರದ ಸಹಾಯದಿಂದ ಮೇಲೆ ಬರಬೇಕು ಇದರಿಂದ ರಾಜ್ಯ ಕೂಡ ಅಭಿವೃದ್ಧಿ ಆಗುತ್ತದೆ ಎಂದು ಅವರು ತಿಳಿಸಿದರು.

Share