Connect with us


      
ಕರ್ನಾಟಕ

ವಿಲೇವಾರಿಯಾಗದೆ ಬಾಕಿ ಇದ್ದ ಪಡಿತರ ಚೀಟಿ ಮಂಜೂರು ಮಾಡಿದ ಆಹಾರ ಇಲಾಖೆ

Published

on

ಬೆಂಗಳೂರು: ಜನೆವರಿ 07 (ಯು.ಎನ್.ಐ.) ಪಡಿತರ ಚೀಟಿಗೆ ಹೊಸದಾಗಿ ಅರ್ಜಿ ಸಲ್ಲಿಸಿ, ಕಳೆದ ಮೂರ್ನಾಲ್ಕು ವರ್ಷಗಳಿಂದ ವಿಲೇವಾರಿಯಾಗದೆ ಬಾಕಿ ಇದ್ದ ಲಕ್ಷಾಂತರ ಮಂದಿಗೆ ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ಚೀಟಿಗಳನ್ನು ಮಂಜೂರು ಮಾಡಿದೆ.

ಅರ್ಹತೆಯಿಲ್ಲದವರೂ ಎಪಿಎಲ್ ಕಾರ್ಡ್‍ಗಳನ್ನು ಪಡೆದು ಇಲಾಖೆಗೆ ವಂಚಿಸುತ್ತಿದ್ದರು. ಕೆಲವರು ಅನಧಿಕೃತವಾಗಿ ಕಾರ್ಡ್‍ಗಳನ್ನು ಹೊಂದಿದ್ದು, ಪಡಿತರ ಪಡೆದು ಮಾರಿಕೊಳ್ಳುತ್ತಾ, ಅರ್ಹರಿಗೆ ಅನ್ನಕ್ಕೆ ಹೊಡೆತ ನೀಡಿದ್ದರು. ಹೀಗಾಗಿ ಎಪಿಎಲ್ ಕಾರ್ಡ್ ಹಿಂಪಡೆದು, ಬಿಪಿಎಲ್ ಪಟ್ಟಿಗೆ ಸೇರಿಸುವುದು, ಅರ್ಹರಲ್ಲದಿದ್ದರೂ ಯಾರದೋ ಹೆಸರನ್ನು ಪಟ್ಟಿಗೆ ಸೇರಿಸುವುದು ಸೇರಿದಂತೆ ಹಲವು ಅಕ್ರಮಗಳು ನಡೆಯುತ್ತಿದ್ದವು.

ಹೀಗಾಗಿ ಅವುಗಳನ್ನು ತಡೆದು, ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಇಲಾಖೆಯು ಹೊಸದಾಗಿ ಸಲ್ಲಿಸಿದ ಅರ್ಜಿಗಳ ವಿಲೇವಾರಿಯನ್ನು 2017ರಿಂದ ತಡೆಹಿಡಿಯಲಾಗಿತ್ತು. ಆದರೆ 2019-2020ರ ವೇಳೆಗೆ ಕೋವಿಡ್ ಹಿನ್ನೆಲೆಯಲ್ಲಿ ಮತ್ತಷ್ಟು ವಿಳಂಬವಾಯಿತು. ತೀರಾ ಅಗತ್ಯವುಳ್ಳ ಅರ್ಜಿಗಳ ವಿಲೇವಾರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಹೀಗಾಗಿ 2017ರಿಂದ 2021ರವರೆಗೆ ಬಂದ 3.93 ಲಕ್ಷ ಅರ್ಜಿಗಳು ಬಾಕಿ ಉಳಿದಿದ್ದವು. ಇವುಗಳ ಕುರಿತು ಮನೆ ಮನೆಗೆ ಭೇಟಿ ನೀಡಿ ಪರಿಶೀಲಿಸಿ ಅರ್ಹ ಅರ್ಜಿದಾರರಿಗೆ ಬಿಪಿಎಲ್ ಹಾಗೂ ಇತರರಿಗೆ ಎಪಿಎಲ್ ಕಾರ್ಡ್ ನೀಡಲು ಆಹಾರ ಇಲಾಖೆ ಮುಂದಾಗಿದೆ.

ಅದರಂತೆ ಇದೀಗ ಬಾಕಿಯಿದ್ದ ಅರ್ಜಿಗಳನ್ನು ಪರಿಶೀಲಿಸಿ ಅರ್ಹತೆಯುಳ್ಳ 1.55 ಲಕ್ಷ ಅರ್ಜಿದಾರರಿಗೆ ಎಪಿಎಲ್ ಕಾರ್ಡ್ ಮತ್ತು 2.76 ಲಕ್ಷ ಅರ್ಜಿದಾರರಿಗೆ ಬಿಪಿಎಲ್ ಕಾರ್ಡ್‍ಗಳನ್ನು ವಿತರಿಸಲು ಕಳೆದ ತಿಂಗಳು ಮಂಜೂರಾತಿ ನೀಡಿದೆ. ಹೀಗಾಗಿ ಕಾರ್ಡ್‍ಗಳ ವಿತರಣೆ ಕಾರ್ಯ ಆರಂಭವಾಗಿದೆ.

ಪಡಿತರ ಚೀಟಿಗಳನ್ನು ಪಡೆಯುವುದೆಲ್ಲಿ?
ತಾಲೂಕು ಕಚೇರಿಗಳಲ್ಲಿರುವ ಆಹಾರ ಇಲಾಖೆ ಶಾಖೆ ಅಥವಾ ಆಯಾ ಕ್ಷೇತ್ರದ ಆಹಾರ ಇಲಾಖೆಯ ಉಪ ಕಚೇರಿಗಳಲ್ಲಿ ಸ್ವೀಕೃತಿ ಪತ್ರದೊಂದಿಗೆ ಹೊಸ ಕಾರ್ಡ್‍ಗಳನ್ನು ಪಡೆಯಬಹುದು.

ಹೊಸ ಕಾರ್ಡ್/ತಿದ್ದುಪಡಿಗೂ ಅವಕಾಶ
ಹೊಸ ಕಾರ್ಡ್‍ಗೆ ಅರ್ಜಿ ಸಲ್ಲಿಸುವುದು ಹಾಗೂ ಕಾರ್ಡ್‍ನಲ್ಲಿ ಮಕ್ಕಳು ಅಥವಾ ಇತರೆ ಸದಸ್ಯರ ಹೆಸರುಗಳನ್ನು ಸೇರ್ಪಡೆ ಮಾಡಲು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಹಾಗೂ ಅರ್ಜಿದಾರರ ಕುಟುಂಬಗಳ ಪರಿಶೀಲನೆ ಹಿನ್ನೆಲೆಯಲ್ಲಿ ಆನ್‍ಲೈನ್ ಪೋರ್ಟಲ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಮನೆಯ ಸದಸ್ಯರ ಹೆಸರು ಸೇರ್ಪಡೆ ಮಾಡುವುದು, ತಿದ್ದುಪಡಿ ಅಥವಾ ಹೊಸ ಕಾರ್ಡ್‍ಗೆ ಅರ್ಜಿ ಸಲ್ಲಿಸಲು ಆನ್‍ಲೈನ್ ಪೋರ್ಟಲ್ ನ ವ್ಯವಸ್ಥೆ ಕಲ್ಪಿಸಲಾಗಿದೆ ಎನ್ನುತ್ತಾರೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಡಾ. ಕೆ. ರಾಮೇಶ್ವರಪ್ಪ.

ಹೊಸ ಕಾರ್ಡ್‍ಗೆ ಬೇಕಾದ ದಾಖಲೆಗಳು
ಹೊಸದಾಗಿ ಬಿಪಿಎಲ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬೇಕೆಂದರೆ ಅರ್ಜಿಯ ಜತೆಗೆ ಆಧಾರ್ ಕಾರ್ಡ್ ಕಡ್ಡಾಯ. ಜತೆಗೆ ಮನೆಯಲ್ಲಿ ಹಿರಿಯ ಮಹಿಳೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಲಗತ್ತಿಸುವುದು ಕಡ್ಡಾಯ. ಕಾರ್ಡ್‍ನಲ್ಲಿ ಹೆಸರು ಸೇರ್ಪಡೆ ಮಾಡಬೇಕೆಂದರೆ ಆಧಾರ್ ನಂಬರ್ ಜತೆಗೆ ಜಾತಿ ಮತ್ತು ಆದಾಯ ಪತ್ರ ಕಡ್ಡಾಯವಾಗಿರಬೇಕು. ಇದರಲ್ಲಿ ಆರು ವರ್ಷದೊಳಗಿನ ಮಕ್ಕಳನ್ನು ಸೇರ್ಪಡೆ ಮಾಡಬೇಕೆಂದರೆ ಮೊಬೈಲ್ ನಂಬರ್ ಜೋಡಣೆಯಾಗಿರುವ ಆಧಾರ್ ಸಂಖ್ಯೆ ಮತ್ತು ಜನನ ಪ್ರಮಾಣ ಪತ್ರ ಕಡ್ಡಾಯ.

ಬೆಂಗಳೂರು ಒನ್ ಅಥವಾ ಸೈಬರ್ ಸೆಂಟರ್‍ಗಳಲ್ಲಿ ಹೊಸ ಕಾರ್ಡ್ ಮತ್ತು ಸೆರ್ಪಡೆ ಮಾಡಬಹುದು. ಇಲ್ಲವೇ ಆಹಾರ ಇಲಾಖೆಯ ವೆಬ್‍ಸೈಟ್: https://ahara.kar.nic.in/lpg/ ನಲ್ಲಿ ಸ್ವಯಂ ಆಗಿ ಕೂಡ ಅರ್ಜಿಗಳನ್ನು ಸಲ್ಲಿಸಬಹುದು. ಎಪಿಎಲ್ (ಆದ್ಯತೇತರ ಕುಟುಂಬದ ಪಡಿತರ ಚೀಟಿ) ಕಾರ್ಡ್ ಪಡೆಯುವವರು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ, ಹಾಗೆಯೇ ಕಾರ್ಡ್ ಪಡೆಯಬಹದು.

***
ಇದೀಗ ಬಾಕಿಯಿದ್ದ ಅರ್ಜಿಗಳನ್ನು ಪರಿಶೀಲಿಸಿ ಅರ್ಹತೆಯುಳ್ಳ 1.55 ಲಕ್ಷ ಅರ್ಜಿದಾರರಿಗೆ ಎಪಿಎಲ್ ಕಾರ್ಡ್ ಮತ್ತು 2.76 ಲಕ್ಷ ಅರ್ಜಿದಾರರಿಗೆ ಬಿಪಿಎಲ್ ಕಾರ್ಡ್‍ಗಳನ್ನು ವಿತರಿಸಲು ಕಳೆದ ತಿಂಗಳು ಮಂಜೂರಾತಿ ನೀಡಿದೆ. ಹೀಗಾಗಿ ಅರ್ಜಿ ಸಲ್ಲಿಸಿ ಕಾರ್ಡ್‍ಗಾಗಿ ಕಾಯುತ್ತಿರುವವವರಿಗೆ ಅವರ ಅರ್ಹತೆ ಆಧಾರದಲ್ಲಿ ಎಪಿಎಲ್/ಬಿಪಿಎಲ್ ಕಾರ್ಡ್‍ಗಳನ್ನು ವಿತರಿಸಲಾಗುತ್ತಿದೆ.
-ಡಾ. ಶಮ್ಲಾ ಇಕ್ಬಾಲ್, ಆಯುಕ್ತರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ

ಕರ್ನಾಟಕ

ಉ.ಪ್ರ.‌ಚುನಾವಣೆ ನಂತರ ರಾಜ್ಯದಲ್ಲಿ‌ಮಹತ್ವದ ಬದಲಾವಣೆ: ಸಿ.ಎಂ ಇಬ್ರಾಹಿಮ್

Published

on

ಬೆಂಗಳೂರು: ಜನೆವರಿ 27 (ಯು.ಎನ್.ಐ.)‌ ನಾನು ಹೇಳಿದಂತೆ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ಘಟಿಸುತ್ತಾ ಬಂದಿವೆ.‌ ಉತ್ತರ ಪ್ರದೇಶ ಚುನಾವಣಾ ಬಳಿಕ ಸಾರ್ವತ್ರಿಕ ಚುನಾವಣೆ, ಇಲ್ಲವೇ ರಾಷ್ಟ್ರ ಪತಿ ಆಡಳಿತ ಬರಬಹುದು. ನಾನು ಕೊಡುವ

ಡೋಸ್ ಎಷ್ಟರ ಮಟ್ಟಿಗೆ ವರ್ಕ್ ಆಗುತ್ತೆ ನೋಡೋಣ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ.‌ಇಬ್ರಾಹಿಂ ಮಾರ್ಮಿಕವಾಗಿ ಹೇಳಿದರು.

ಅವರಿಂದು ಸುದ್ದಿಗಾರರ ಜೊತೆ ಮಾತನಾಡಿ,  ಸಾಮಾಜಿಕ ನ್ಯಾಯ ಕೇಳಿದ್ರೆ ಈಗ ಮಾಡಿದ್ದಾರೆ. ಬೆಳೆ ಕೊಯ್ಲು‌ ಮಾಡಿ ನಮ್ಮನ್ನ ಹೊರ ಹಾಕಿದ್ದಾರೆ ಎಂದು ಆಕ್ತೋಶ ವ್ಯಕ್ತಪಡಿಸಿದ ಅವರು ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರದಿಂದಲೂ ನನಗೆ ರಾಜಕೀಯ ಆಹ್ವಾನ ಬಂದಿದೆ ಅಖಿಲೇಶ್, ಮಮತಾ ಬ್ಯಾನರ್ಜಿ ಅಥವಾ ದೇವೇಗೌಡ ಇವರಲ್ಲಿ ಯಾರ ಜೊತೆ ರಾಜಕೀಯವಾಗಿ ಗುರುತಿಸಿಕೊಳ್ಳಬೇಕು ಯೋಚನೆ ಮಾಡ್ತೀನಿ. 3 ವರ್ಷದ ವಿಧಾನ ಪರಿಷತ್ ಸ್ಥಾನಕ್ಕೂ ಶೀಘ್ರ ರಾಜೀನಾಮೆ ನೀಡುವ ಬಗ್ಗೆಯೂ ವಿಚಾರ ಮಾಡ್ತೀನಿ ಎಂದರು.

ಹೆಚ್.ಡಿ. ಕುಮಾರಸ್ವಾಮಿಯಿಂದ ಮುಂಜಾನೆ ಕರೆ ಬಂದಿತ್ತು. ಕಾಂಗ್ರೆಸ್ ನವರು ಕಾಲ್ ಮಾಡಿದ್ರು, ನಾ ಅವರ ಬಗ್ಗೆ ಹೇಳಿದ್ರೆ
120 ಇಂದ 80 ಬಂತು 80 ರಿಂದ ಎಷ್ಟು ಬರಲಿದೆ ನೋಡಿ‌ ಎಂದು ಆಕ್ರೋಶ ವ್ಯಕ್ತಡಿಸಿದ ಇಬ್ರಾಹಿಂ ನನಗೆ ಸ್ಥಾನ ತಪ್ಪಿದರ ಬಗ್ಗೆ ಸಿದ್ದರಾಮಯ್ಯ ಉತ್ತರ ಕೊಡಬೇಕು. ಎಂದರು

ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಅದು ಕೇಶವ ಕೃಪಾ, ನಾನು ಬಸವ ಕೃಪ ಹೇಗೆ ಒಂದಾಗಲು ಸಾಧ್ಯ ಎಂದರು.

ಜಮೀರ್ ಜೊತೆಗಿನ ಮಾತುಕತೆ ಹೇಳಲ್ಲ. ಅವರು ಕಾಂಗ್ರೆಸ್ ನಲ್ಲಿ ಇದಾರೆ. ಕಾಂಗ್ರೆಸ್ ನ ಎಲ್ಲಾ ಮುಸ್ಲಿಂ ನಾಯಕರು ನನ್ನ ಜೊತೆ ಅನ್ಯೋನ್ಯವಾಗಿದ್ದಾರೆ ಎಂದರು.

ಯಡಿಯೂರಪ್ಪ ಜೊತೆ ಒಂದಾಗುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಿ.ಎಂ. ಇಬ್ರಾಹಿಂ ಕಾದು ನೋಡಿ, ಕಾಲಾಯ ತಷ್ಯೇಯೇ ನಮಃ ಎಂದು ಹೇಳಿದರು.

Continue Reading

ಕರ್ನಾಟಕ

ಸಿಎಂ ಭೇಟಿ ಮಾಡಿದ ಚಿಕ್ಕಮಗಳೂರು ಶಾಸಕರ ನಿಯೋಗ

Published

on

ಬೆಂಗಳೂರು: ಜನೆವರಿ 27 (ಯು.ಎನ್.ಐ.) ಶಾಸಕ ಹಾಗೂ ಬಿಜೆಪಿ ಪ್ರಧಾನ ಕಾರ್ಯಯದರ್ಶಿ ಸಿ ಟಿ ರವಿ ನೇತೃತ್ವದಲ್ಲಿ ಚಿಕ್ಕಮಗಳೂರು ಜಿಲ್ಲೆ ಶಾಸಕರು ಮುಖ್ಯಮಂತ್ರಿ‌ ಬಸವರಾಜ ಎಸ್ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದರು. ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ನಿಯೋಗದ ಅಹವಾಲುಗಳನ್ನು ಮುಖ್ಯಮಂತ್ರಿ ಆಲಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ, ಮತ್ತು ಭದ್ರಾ ಉಪಕಣವೆಯ 2 ಮತ್ತು 3 ನೇ ಹಂತದ ಯೋಜನೆಗೆ ಹಣ ಬಿಡುಗಡೆ ಹಾಗೂ ಜಿಲ್ಲೆಯ ಜಲಧಾರೆ ಯೋಜನೆಗೆ ಬಜೆಟ್ ಹಣ ನೀಡುವಂತೆ ನಿಯೋಗ ಮನವಿ ಮಾಡಿದೆ. ನಿಯೋಗದಲ್ಲಿ ಉಪ ಸಭಾಪತಿ ಪ್ರಾಣೇಶ್, ಶಾಸಕ ಸುರೇಶ್, ಬೆಳ್ಳಿ ಪ್ರಕಾಶ್, ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್‌ ಸಹ ಇದ್ದರು.

ಸಿಎಂ ಭೇಟಿ ಬಳಿಕ ಜೀವರಾಜ್ ಅವರು ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿದರು. ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ನಮ್ಮ ಜಿಲ್ಲೆಯಲ್ಲಿ ನನಗಿಂತಲೂ ಹಿರಿಯರಿದ್ದಾರೆ, ಮೂಡಿಗೆರೆ ಎಂ ಪಿ ಕುಮಾರಸ್ವಾಮಿ ಇದಾರೆ, ತರೀಕೆರೆ ಸುರೇಶ್ ಇದಾರೆ, ಅವರಿಗೆ ಕೊಡಲಿ. ಸಿ ಟಿ ರವಿ ಮಾರ್ಗದರ್ಶನದಲ್ಲಿ ಮುಂದೆ‌ ಹೋಗ್ತೀವಿ.
ಸಂಪುಟ ವಿಸ್ತರಣೆ ಸಮಯದಲ್ಲಿ ನಮ್ಮ ಜಿಲ್ಲೆಗೆ ಅವಕಾಶ ಸಿಕ್ಕರೆ ಸಿಗಬಹುದು.. ಸಿಗದೇನೂ ಇರಬಹುದು. ಯಾರಿಗೆ ಕೊಟ್ಟರು ಸಂತೋಷ ಕೊಟ್ಟಿಲ್ಲ ಅಂದ್ರೂ ಸಂತೋಷ ಎಂದರು.

ಬಿಜೆಪಿ ಶಾಸಕರು ಕಾಂಗ್ರೆಸ್ನವರ ಸಂಪರ್ಕದಲ್ಲಿರುವ ವಿಚಾರವಾಗಿ ಮಾತನಾಡಿ, ನಮ್ಮ ಪಕ್ಷದಿಂದ ಯಾರು ಹೋಗೋದಿಲ್ಲ. ಚುನಾವಣಾ ಹತ್ತಿರ ಬಂದಾಗ ಏನ್ ಆಗುತ್ತೆ ಅನ್ನೋದು ದೇವರೊಬ್ಬರಿಗೆ ಮಾತ್ರ ಗೊತ್ತು.‌ ಒಮ್ಮೆ ಪಕ್ಷಕ್ಕೆ ಸೇರ್ಪಡೆಯಾದರೆ ಅಲ್ಲಿ ವಲಸಿಗ ಮೂಲ ಅನ್ನೋದು ಬರೋದಿಲ್ಲ.‌ ಈಶ್ವರಪ್ಪ ಉಸ್ತುವಾರಿಯಾಗಿ ಬಂದಿರೋದನ್ನ ನಾವು ಸ್ವಾಗತ ಮಾಡ್ತೀವಿ ಎಂದು ಹೇಳಿದರು.

ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಮಾತನಾಡಿ.‌ ಸಿ.ಟಿ ರವಿ ನೇತೃತ್ವದಲ್ಲಿ ನಮ್ಮ ಪಕ್ಷದ ಚಿಕ್ಕಮಗಳೂರು ಶಾಸಕರೆಲ್ಲ ಸಿಎಂ ಭೇಟಿ ಮಾಡಿದ್ವಿ. ಚಿಕ್ಕಮಗಳೂರು ಜಿಲ್ಲೆ ಸಮಸ್ಯೆ ಬಗ್ಗೆ ಚರ್ಚೆಗೆ ತೆರಳಿದ್ವಿ. ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಮತ್ತು ಮೂಡಿಗೆರೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ಭದ್ರಾ ಉಪಕಣಿವೆಯ ಕಾಮಗಾರಿ, ಜಿಲ್ಲೆಯ ಜಲಧಾರೆಯ ಯೋಜನೆ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ಮನವಿ ಸಲ್ಲಿಸಿ ಬಂದಿದ್ದೇವೆ ಎಂದು ವಿವರಿಸಿದರು.

Continue Reading

ಕರ್ನಾಟಕ

ಸಿಎಂ‌ ಇಬ್ರಾಹಿಂ ಬಂದರೆ ಸ್ವಾಗತ: ಎಚ್‌‌‌ಡಿಕೆ

Published

on

ಬೆಂಗಳೂರು:ಜನೆವರಿ 27 (ಯು.ಎನ್.ಐ.) ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸಿಎಂ‌ ಇಬ್ರಾಹಿಂ‌ ಅವರು ಜಾತ್ಯತೀತ ಜನತಾ ದಳಕ್ಕೆ ಬಂದರೆ ಸ್ವಾಗತಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.‌ಕುಮಾರಸ್ವಾಮಿ ಹೇಳಿದ್ದಾರೆ.

ಅವರಿಂದು ಸುದ್ದಿಗಾರರ ಜೊತೆ ಮಾತನಾಡಿ, ಇಬ್ರಾಹಿಂ ಅವರು ಹಿರಿಯ ರಾಜಕಾರಣಿ.‌ ನಮ್ಮ ಪಕ್ಷ ಹಾಗೂ ದೇವೇಗೌಡರ ಏಳು ಬೀಳುವಿನಲ್ಲೊಯೂ ಜೊತೆಯಾದವರು. ವಿರೋಧ ಪಕ್ಷದ ನಾಯಕರ ಸ್ಥಾನಕ್ಕೆ ಅವರ ಹೆಸರು ಕೇಳಿ‌ ಬಂದಿತ್ತು. ಆ ಸ್ಥಾನ ದೊರೆತರೆ ನಾಯಕರ ಉಪಯೋಗ ಮಾಡಿಕೊಳ್ಳಿ. ನಿಮ್ಮನ್ನು ದುರುಪಯೋಗ ಪಡಿಸಿಕೊಳ್ಳಲ್ಲ ಎಂದಿದ್ದೆ ಎಂದು ವಿವರಿಸಿದರು.

ಅವರಿಗೆ ಇನ್ನೂ ದೇವೇಗೌಡರು ಹಾಗೂ ನಮ್ಮ ಪಕ್ಷದ ಬಗ್ಗೆ ವ್ಯಾಮೋಹ ಇದೆ.‌ ಅವರು ಬಂದರೆ ಸ್ವಾಗತ. ನಾವು ಕದ್ದು ಮುಚ್ಚಿ ಯಾವುದನ್ನೂ ಮಾಡಿಲ್ಲ. ಇಂದೂ ಕೂಡ ನಾನು ಕರೆ ಮಾಡಿ ಮಾತಾಡಿದ್ದೀನಿ. ಅವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ. ಜನತಾ ಪರಿವಾರದ ನಾಯಕರು ಸೆಟ್ಟಲ್ ಆಗಿದ್ದಾರೆ. ಅವರನ್ನು ವಾಪಸ್ ತರುವ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದರು.

ಯವ ನಾಯಕತ್ವ ತರುವ ನಿಟ್ಟಿನಲ್ಲಿ ಚಿಂತಿಸಲಾಗುತ್ತಿದೆ. ಹೊಸ ನಾಯಕರ ನೇಮಕಾತಿ‌ ಮಾಡಲಾಗುತ್ತಿದೆ. ಹೊಸ ನಾಯಕರ ಸೃಷ್ಟಿ ಮೊದಲಿನಿಂದಲೂ ನಡೆಯುತ್ತಿದೆ. ಜೆಡಿಎಸ್ ಮೊದಲಿನಿಂದಲೂ ಗುರು ಮನೆ ಇದ್ದಂತೆ. ಹಲವರು ನಾಯಕರಾಗಿ‌ ಬೆಳೆದು ಹೋಗಿದ್ದಾರೆ ಎಂದು ಪ್ರತಿಪಾದಿಸಿದರು.

Continue Reading
Advertisement
ದೇಶ27 mins ago

ಅಧಿಕೃತವಾಗಿ ಟಾಟಾ ಸಮೂಹಕ್ಕೆ ಏರ್ ಇಂಡಿಯಾ ಕಂಪೆನಿ ಹಸ್ತಾಂತರ

ನವದೆಹಲಿ: ಜನೆವರಿ 27  (ಯು.ಎನ್.ಐ.) ಕೇಂದ್ರ ಸರ್ಕಾರವು ಗುರುವಾರ ಅಧಿಕೃತವಾಗಿ ಏರ್ ಇಂಡಿಯಾವನ್ನು ಟಾಟಾ ಸಮೂಹಕ್ಕೆ ಹಸ್ತಾಂತರಿಸಿದೆ. 69 ವರ್ಷಗಳ ಬಳಿಕ ಪುನಃ ಟಾಟಾ ಮಡಿಲಿಗೆ ಏರ್...

ಕರ್ನಾಟಕ51 mins ago

ಉ.ಪ್ರ.‌ಚುನಾವಣೆ ನಂತರ ರಾಜ್ಯದಲ್ಲಿ‌ಮಹತ್ವದ ಬದಲಾವಣೆ: ಸಿ.ಎಂ ಇಬ್ರಾಹಿಮ್

ಬೆಂಗಳೂರು: ಜನೆವರಿ 27 (ಯು.ಎನ್.ಐ.)‌ ನಾನು ಹೇಳಿದಂತೆ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ಘಟಿಸುತ್ತಾ ಬಂದಿವೆ.‌ ಉತ್ತರ ಪ್ರದೇಶ ಚುನಾವಣಾ ಬಳಿಕ ಸಾರ್ವತ್ರಿಕ ಚುನಾವಣೆ, ಇಲ್ಲವೇ ರಾಷ್ಟ್ರ ಪತಿ...

ದೇಶ1 hour ago

ವೈಯಕ್ತಿಕ ದ್ವೇಷ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ದುಷ್ಟರು

ನವದೆಹಲಿ: ಜನೆವರಿ 27 (ಯು.ಎನ್.ಐ.) ವೈಯಕ್ತಿಕ ದ್ವೇಷದ ಕಾರಣ ಮಹಿಳೆಯನ್ನು ಅಪಹರಿಸಿ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ದುಷ್ಟರು ಚಪ್ಪಲಿ ಹಾರ ಹಾಕಿ, ಮುಖಕ್ಕೆ ಕಪ್ಪು...

ಕರ್ನಾಟಕ2 hours ago

ಸಿಎಂ ಭೇಟಿ ಮಾಡಿದ ಚಿಕ್ಕಮಗಳೂರು ಶಾಸಕರ ನಿಯೋಗ

ಬೆಂಗಳೂರು: ಜನೆವರಿ 27 (ಯು.ಎನ್.ಐ.) ಶಾಸಕ ಹಾಗೂ ಬಿಜೆಪಿ ಪ್ರಧಾನ ಕಾರ್ಯಯದರ್ಶಿ ಸಿ ಟಿ ರವಿ ನೇತೃತ್ವದಲ್ಲಿ ಚಿಕ್ಕಮಗಳೂರು ಜಿಲ್ಲೆ ಶಾಸಕರು ಮುಖ್ಯಮಂತ್ರಿ‌ ಬಸವರಾಜ ಎಸ್ ಬೊಮ್ಮಾಯಿ...

ಕರ್ನಾಟಕ2 hours ago

ಸಿಎಂ‌ ಇಬ್ರಾಹಿಂ ಬಂದರೆ ಸ್ವಾಗತ: ಎಚ್‌‌‌ಡಿಕೆ

ಬೆಂಗಳೂರು:ಜನೆವರಿ 27 (ಯು.ಎನ್.ಐ.) ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸಿಎಂ‌ ಇಬ್ರಾಹಿಂ‌ ಅವರು ಜಾತ್ಯತೀತ ಜನತಾ ದಳಕ್ಕೆ ಬಂದರೆ ಸ್ವಾಗತಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.‌ಕುಮಾರಸ್ವಾಮಿ ಹೇಳಿದ್ದಾರೆ....

ದೇಶ3 hours ago

ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ ಅಂತ್ಯ; ಶಾಲಾ-ಕಾಲೇಜುಗಳು ಬಂದ್

ಹೊಸದಿಲ್ಲಿ: ಜನೆವರಿ 27 (ಯು.ಎನ್.ಐ.) ರಾಷ್ಟ್ರ ರಾಜಧಾನಿ ಜನರಿಗೆ ದೆಹಲಿ ಸರ್ಕಾರ ಗುಡ್ ನ್ಯೂಸ್ ನೀಡಿದೆ. ದೆಹಲಿಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿರುವ  ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ಅನ್ನು...

ಕ್ರೀಡೆ3 hours ago

ಟೀಂ ಇಂಡಿಯಾ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಟ್ವಿಟರ್ ಖಾತೆ ಹ್ಯಾಕ್

ಮುಂಬೈ: ಜನೆವರಿ ೨೭ (ಯು.ಎನ್.ಐ.) ಇತ್ತೀಚೆಗೆ ಬಿಟ್‌ಕಾಯಿನ್ ಸ್ಕ್ಯಾಮರ್ ಗಳು ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದು, ಈಗಾಗಲೇ ಸಾಕಷ್ಟು ಮಂದಿಯ ಟ್ವಿಟರ್ ಖಾತೆ ಇದೇ ವಿಚಾರಕ್ಕೆ ಹ್ಯಾಕ್...

ಸಿನೆಮಾ4 hours ago

ನಾಗಚೈತನ್ಯ, ಸಮಂತಾ ವಿಚ್ಛೇದನಕ್ಕೆ ನಟ ನಾಗಾರ್ಜುನ ಕೊಟ್ಟ ಕಾರಣ ಏನು?

ಹೈದರಾಬಾದ್: ಜನೆವರಿ 27 (ಯು.ಎನ್.ಐ.) ಟಾಲಿವುಡ್ ಸ್ಟಾರ್ ಗಳಾದ ನಾಗಚೈತನ್ಯ ಮತ್ತು ಸಮಂತಾ ರುತ್ ಪ್ರಭು 2021ರಲ್ಲಿ ವಿಚ್ಛೇದನ ಘೋಷಿಸಿದರು. ಅಂದಿನಿಂದ ಇಮದಿನವರೆಗೆ ಅವರ ನಡುವಿನ ಪ್ರತ್ಯೇಕತೆಗೆ...

ದೇಶ4 hours ago

ಅನ್ಯ ಜಾತಿ ಹುಡುಗಿ ಮದುವೆಯಾದ ಮಗ: ತಾಯಿ ಮೇಲೆ ಹಲ್ಲೆ

ಚೆನ್ನೈ: ಜನೆವರಿ 27 (ಯು.ಎನ್.ಐ.) ಅನ್ಯ ಜಾತಿಯ ಹುಡುಗಿಯನ್ನು ಮಗ ವಿವಾಹವಾದ ಕಾರಣ ತಾಯಿಯನ್ನು ದೀಪದ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ತಮಿಳುನಾಡಿನ ವಿರುದುನಗರ ಜಿಲ್ಲೆಯ ತಿರುಚುಲಿ...

ಸಿನೆಮಾ4 hours ago

‘ದೇವರು ನನ್ನ ಬ್ರಾ ಸೈಜ್ ತೆಗೆದುಕೊಳ್ಳುತ್ತಿದ್ದಾರೆ’ – ನಟಿ ಶ್ವೇತಾ ತಿವಾರಿ

ಭೋಪಾಲ್: ಜನೆವರಿ 27 (ಯು.ಎನ್.ಐ.) ಕಿರುತೆರೆ ಹಾಗೂ ಹಿಂದಿ ಫಿಲಂ ನಟಿ ಶ್ವೇತಾ ತಿವಾರಿ ದೇವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಫ್ಯಾಶನ್ ಸಂಬಂಧಿತ ವೆಬ್ ಸರಣಿಯ...

ಟ್ರೆಂಡಿಂಗ್

Share