Connect with us


      




ಕರ್ನಾಟಕ

ಇವರೇ, ನಿಮ್ಮ ಜಿಲ್ಲೆ ಉಸ್ತುವಾರಿ ಸಚಿವರು!

Vanitha Jain

Published

on

ಬೆಂಗಳೂರು: ಜನೆವರಿ 24 (ಯು.ಎನ್.ಐ.) ರಾಜ್ಯ ಸರ್ಕಾರ ರಾಜ್ಯದ ಎಲ್ಲ ಜಿಲ್ಲೆಗಳಿಗೆ ನೂತನ ಕೋವಿಡ್ ಉಸ್ತುವಾರಿ ಸಚಿವರು ಹಾಗೂ  ಜಿಲ್ಲೆ ಉಸ್ತುವಾರಿ ಸಚಿವರನ್ನು ನೇಮಿಸಿ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ನಗರದ ಜವಾಬ್ದಾರಿ ಹೊತ್ತಿದ್ದರೆ, ಡಾ. ಕೆ ಸುಧಾಕರ್ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ನೀಡಿದ್ದಾರೆ. ಒಂದೆಡೆ ಸಚಿವ ಸಂಪುಟದ ವಿಸ್ತರಣೆಯ ಮಾತು ಕೇಳಿ ಬರುತ್ತಿದ್ದರೆ, ಇದೀಗ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆಯಾಗಿದೆ

ಯಾವ ಯಾವ ಸಚಿವರು, ಯಾವ ಜಿಲ್ಲೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂಬ ವಿವರ ಇಂತಿದೆ.

ಗೋವಿಂದ ಕಾರಜೋಳ ಬೆಳಗಾವಿ, ಕೆ.ಎಸ್ ಈಶ್ವರಪ್ಪ- ಚಿಕ್ಕಮಗಳೂರು, ಶ್ರೀರಾಮುಲು- ಬಳ್ಳಾರಿ, ವಿ. ಸೋಮಣ್ಣ – ಚಾಮರಾಜನಗರ, ಉಮೇಶ್ ಕತ್ತಿ- ವಿಜಯಪುರ, ಎಸ್. ಅಂಗಾರ- ಉಡುಪಿ, ಆರಗ ಜ್ಞಾನೇಂದ್ರ- ತುಮಕೂರು, ಡಾ. ಅಶ್ವಥ್ ನಾರಾಯಣ- ರಾಮನಗರ, ಸಿ.ಸಿ ಪಾಟೀಲ್- ಬಾಗಲಕೋಟೆ, ಆನಂದ್ ಸಿಂಗ್ -ಕೊಪ್ಪಳ, ಕೋಟ ಶ್ರೀನಿವಾಸ ಪೂಜಾರಿ-ದಕ್ಷಿಣ ಕನ್ನಡ, ಪ್ರಭು ಚೌಹಾಣ್- ಯಾದಗಿರಿ, ಮುರುಗೇಶ್ ನಿರಾಣಿ- ಕಲಬುರಗಿ, ಶಿವರಾಮ್ ಹೆಬ್ಬಾರ್- ಹಾವೇರಿ, ಎಸ್ ಟಿ ಸೋಮಶೇಖರ್- ಮೈಸೂರು, ಬಿ.ಸಿ ಪಾಟೀಲ್- ಚಿತ್ರದುರ್ಗ, ಗದಗ, ಭೈರತಿ ಬಸವರಾಜ್ -ದಾವಣಗೆರೆ, ಕೆ. ಗೋಪಾಲಯ್ಯ- ಹಾಸನ, ಮಂಡ್ಯ, ಶಶಿಕಲಾ ಜೊಲ್ಲೆ- ವಿಜಯನಗರ, ಎಂಟಿಬಿ ನಾಗರಾಜ್- ಚಿಕ್ಕಬಳ್ಳಾಪುರ, ಕೆ.ಸಿ ನಾರಾಯಣ ಗೌಡ- ಶಿವಮೊಗ್ಗ, ಬಿ.ಸಿ ನಾಗೇಶ್- ಕೊಡಗು, ವಿ. ಸುನೀಲ್ ಕುಮಾರ್ -ದಕ್ಷಿಣ ಕನ್ನಡ, ಹಾಲಪ್ಪ ಆಚಾರ್- ಧಾರವಾಡಶಂಕರ ಪಾಟೀಲ್ ಮುನೇಕೊಪ್ಪ- ರಾಯಚೂರು, ಬೀದರ್, ಮುನಿರತ್ನ- ಕೋಲಾರ

 

Share