Connect with us


      
ಕರ್ನಾಟಕ

ಚಹಾ ಮಾರುತ್ತಿದ್ದ ವ್ಯಕ್ತಿ ಪ್ರಧಾನಿ; ಇದೇ ಪ್ರಜಾಪ್ರಭುತ್ವ ಸೌಂದರ್ಯ: ಕಟೀಲ್

Kumara Raitha

Published

on

ಬೆಂಗಳೂರು: ಜನೆವರಿ ೨೬ (ಯು.ಎನ್.ಐ.) ನಾಡಿನ ವಿವಿಧೆಡೆ ರಾಷ್ಟ್ರದ ೭೩ನೇ ಗಣರಾಜ್ಯೋತ್ಸವವನ್ನು ಗಣ್ಯರು ಆಚರಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರು ಇಂದು ತಮ್ಮ ಕಾವೇರಿ ನಿವಾಸದಲ್ಲಿ ರಾಷ್ಟ್ರಧ್ವಜ ಆರೋಹಣ ಮಾಡಿದರು. ಧ್ವಜಕ್ಕೆ ವಂದನೆ ಸಲ್ಲಿಸಿದರು. ಬಳಿಕ ರಾಷ್ಟ್ರದ ಜನತೆಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅವರ ಆಪ್ತ ಸಿಬ್ಬಂದಿ, ಅಂಗರಕ್ಷಕರು ಹಾಜರಿದ್ದರು.

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್ ಅವರು ಧ್ವಜಾರೋಹಣ ನೇರವೇರಿಸಿದರು.ಈ ಸಂದರ್ಭದಲ್ಲಿ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು. ಧ್ವಜಕ್ಕೆ ವಂದನೆ ಸಲ್ಲಿಸಿದ ನಂತರ ಮಾತನಾಡಿದ‌ ಕಟೀಲ್‌ ನಾಡಿನ ಜನತೆಗೆ ೭೩ನೇ ಗಣರಾಜ್ಯೋತ್ಸವದ ಶುಭಾಶಯ ಕೋರಿದರು.

ಓರ್ವ ಸಾಮಾನ್ಯ  ವ್ಯಕ್ತಿ, ಚಹಾ ಮಾರಾಟ ಮಾಡುತ್ತಿದ್ದ ವ್ಯಕ್ತಿ  ಈ ದೇಶದ ಪ್ರಧಾನಿಯಾಗಿದ್ದಾರೆ. ಇದೇ ಪ್ರಜಾಪ್ರಭುತ್ವವದ ಸೌಂದರ್ಯ. ಡಾ.ಬಿ ಆರ್ ಅಂಬೇಡ್ಕರ್ ನೀಡಿದ ಸಂವಿಧಾನ ಜಗತ್ತಲ್ಲೇ ಶ್ರೇಷ್ಠ. ಪಾರದರ್ಶನಕ ಚುನಾವಣೆಗಳನ್ನು ನಡೆಸುವ ದೇಶ ಭಾರತ. ನಮ್ಮ ಪ್ರಜಾಪ್ರಭುತ್ವ, ಸಂವಿಧಾನ ಜಗತ್ತಿಗೇ ಮಾದರಿ ಎಂದರು.

ಮೋದಿ ಅವರು ಪ್ರಧಾನಿಯಾದ ಮೇಲೆ ಸರ್ವಶ್ರೇಷ್ಠ ಆಡಳಿತ ನೀಡಿದ್ದಾರೆ. ರಾಜ್ಯದಲ್ಲಿ ಬೊಮ್ಮಾಯಿ ಅವರು ಅಮೃತ ಯೋಜನೆಗಳನ್ನು ನೀಡುತ್ತಿದ್ದಾರೆ. ಗ್ರಾಮೀಣ ಭಾಗದ ಅಭಿವೃದ್ಧಿ, ರೈತಾಪಿ ಸಮುದಾಯಕ್ಕೆ ಯೋಜನೆಗಳನ್ನು ತಂದಿದ್ದಾರೆ ಕೊರೊನಾ ನಿಯಂತ್ರಣ ಕಾರ್ಯವನ್ನು  ಸಮರ್ಥವಾಗಿ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

Share