Connect with us


      




ವಿದೇಶ

ಕೋವಿಡ್ ಟೆಸ್ಟ್ ಮಾಡಲು ಮೂಗಿಗಿಂತ ಬಾಯಿ ಹೆಚ್ಚು ಯೋಗ್ಯ!

Published

on

ಮೇರಿಲ್ಯಾಂಡ್/ಯುಎಸ್ಎ : ಜನೆವರಿ 15 (ಯು.ಎನ್.ಐ.) ದೇಹದಲ್ಲಿ ಕೋವಿಡ್ ಪತ್ತೆಹಚ್ಚಲು ವಿಶ್ವದೆಲ್ಲೆಡೆ ಹೆಚ್ಚಾಗಿ ನಮ್ಮ ಮೂಗಿನಲ್ಲಿರುವ ದ್ರವವನ್ನು ಬಳಸಲಾಗುತ್ತಿತ್ತು. ಆರೋಗ್ಯ ಕಾರ್ಯಕರ್ತರು ಮೂಗಿನೊಳಗೆ ಸ್ವ್ಯಾಬ್ ಸ್ಟಿಕ್ ಗಳನ್ನು ಹಾಕಿ ಮಾದರಿಗಳನ್ನು ಸಂಗ್ರಹಿಸಿ ಬಳಿಕ ಕೋವಿಡ್ ಪರೀಕ್ಷೆ ಮಾಡುತ್ತಿದ್ದರು. ಅಲ್ಲದೆ, ಜನರು ಮನೆಯಲ್ಲೇ ಈ ರೀತಿಯ ಕ್ರಮಗಳನ್ನು ಕೈಗೊಂಡು ಕೋವಿಡ್ ಇದೆಯೋ ಇಲ್ಲವೋ ಅಂತಾ ಪರೀಕ್ಷೆ ಮಾಡಿಕೊಳ್ಳುತ್ತಿದ್ದರು. ಇದು ಈಗಲೂ ಜಾರಿಯಲ್ಲಿದೆ. ಆದರೆ, ಇತ್ತೀಚಿನ ಪ್ರಯೋಗಗಳು ಹೆಚ್ಚುತ್ತಿರುವ ಒಮೈಕ್ರಾನ್ ಪ್ರಕರಣಗಳ ಮಧ್ಯೆ ವೈರಸನ್ನು ಪತ್ತೆಹಚ್ಚಲು ಉತ್ತಮ ಮಾರ್ಗವೆಂದರೆ ಮೂಗು ಅಲ್ಲ ಬಾಯಿ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.
ವೈರಸ್ ಕಾಣಿಸಿಕೊಳ್ಳುವುದು ಬಾಯಿ ಹಾಗೂ ಗಂಟಲಿನಲ್ಲಿ
ಕರೋನವೈರಸ್ ಮೊದಲು ಬಾಯಿ ಮತ್ತು ಗಂಟಲಿನಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಸಂಶೋಧಕ ಡಾ.ಡೊನಾಲ್ಡ್ ಮಿಲ್ಟನ್ ಸಂಶೋಧನೆ ನಡೆಸಿ ದೃಢಪಡಿಸಿದ್ದಾರೆ. ಇದರರ್ಥ, ಇಲ್ಲಿಯವರೆಗೆ ಬಳಸುತ್ತಿದ್ದ ಕೊರೊನಾ ಪರೀಕ್ಷಾ ವಿಧಾನಗಳು ಹಲವು ಸಮಸ್ಯೆಗಳು ಕಾಣಿಸಿಕೊಂಡಿವೆ. ಕೆಲವು ಸಂಶೋಧನೆಗಳು ವೈರಸ್ ಅನ್ನು ಆರಂಭಿಕ ದಿನಗಳಲ್ಲಿ ಮೂಗಿನ ಬದಲಿಗೆ ಬಾಯಿಯ ದ್ರವ್ಯದಿಂದ ಪತ್ತೆ ಹಚ್ಚಲು ಸಾಧ್ಯ ಎಂದು ಪರಿಗಣಸಿವೆ.
ಬಾಯಿಯಿಂದ ತೆಗೆದ ಮಾದರಿ 12 ಪಟ್ಟು ಉತ್ತಮ
ಡಾ. ಮಿಲ್ಟನ್ ಮತ್ತು ಅವರ ತಂಡವು ಕೊರೊನಾ ಪರೀಕ್ಷೆಯ ಉತ್ತಮ ವಿಧಾನ ಯಾವುದು ಅನ್ನೋದರ ಬಗ್ಗೆ ಸಂಶೋಧನೆ ನಡೆಸಿತು. ಇದಕ್ಕಾಗಿ ವಿಜ್ಞಾನಿಗಳ ತಂಡ ರೋಗಲಕ್ಷಣಗಳು ಕಾಣಿಸಿಕೊಂಡ ಕೊರೊನಾ ರೋಗಿಗಳ ಮೂಗು ಮತ್ತು ಬಾಯಿಯಿಂದ ಸ್ವ್ಯಾಬ್ ಅನ್ನು ತೆಗೆದುಕೊಂಡರು. ಈ ಬಗ್ಗೆ ಸಂಶೋಧನೆ ನಡೆಸಿ ಮೂಗಿಗಿಂತ ಮೂರು ಪಟ್ಟು ಹೆಚ್ಚು ವೈರಸ್ ಬಾಯಿಯಲ್ಲಿ ಇರುವುದು ಕಂಡುಬಂದಿದೆ. ಅಲ್ಲದೆ, ಬಾಯಿಯಿಂದ ತೆಗೆದ ಮಾದರಿಗಳು ಕೊರೊನಾ ಪಾಸಿಟಿವಿಟಿ ರೇಟ್ ಹೆಚ್ಚು ಇರುವುದನ್ನು ದೃಢಪಡಿಸಿವೆ. ಮೂಗಿನೊಂದಿಗೆ ಹೋಲಿಕೆ ಮಾಡಿದಾಗ ಬಾಯಿ ಅಥವಾ ಗಂಟಲಿನ ಪರೀಕ್ಷೆ 12 ಪಟ್ಟು ಹೆಚ್ಚು ಪಾಸಿಟಿವಿಟಿಯನ್ನು ನಿಖರವಾಗಿ ಹೇಳಿದೆ.
ಒಮೈಕ್ರಾನ್ ತಡೆಗಟ್ಟಲು ಲಾಲಾರಸ ಪರೀಕ್ಷೆ ಅಗತ್ಯ
ಡಾ. ರಾಬಿ ಸಿಕ್ಕಾ ಹೇಳಿಕೆ ಪ್ರಕಾರ, ಒಮೈಕ್ರಾನ್ ಅಲೆಯ ಮಧ್ಯೆ ಕೊರೊನಾ ಪರೀಕ್ಷೆಯ ವಿಧಾನ ಬದಲಾಯಿಸಬೇಕಾಗಿದೆ. ಈ ರೂಪಾಂತರವು ವೇಗವಾಗಿ ದ್ವಿಗುಣಗೊಳ್ಳುತ್ತದೆ. ಹಾಗೂ ದೇಹದಲ್ಲಿ ತ್ವರಿತವಾಗಿ ಹರಡುತ್ತದೆ. ಅಲ್ಲದೆ, ಹೆಚ್ಚಿನ ಸಂದರ್ಭಗಳಲ್ಲಿ ರೋಗ ಲಕ್ಷಣ ಉಂಟು ಮಾಡದೆ ದೇಹದಿಂದ ಹೋಗಿಬಿಡುತ್ತವೆ. ಆದ್ದರಿಂದ, ಮೂಗಿನ ಬದಲಿಗೆ ರೋಗಿಗಳ ಲಾಲಾರಸವನ್ನು ಪರೀಕ್ಷಿಸುವುದು ಅವಶ್ಯಕ. ಇನ್ನು ಕೆಲವ ಪ್ರಕಾರ ಒಮೈಕ್ರಾನ್ ಗಂಟಲು ಹಾಗೂ ಬಾಯಿಯಲ್ಲಿ ಅಧಿಕ ಪ್ರಮಾಣದಲ್ಲಿ ದ್ವಿಗುಣಗೊಳ್ಳುತ್ತದೆ. ಆದರೆ, ಸದ್ಯಕ್ಕೆ ಇದನ್ನು ಇನ್ನೂ ಖಚಿತಪಡಿಸಲು ಸಾಧ್ಯವಾಗಿಲ್ಲ.
ಡೆಲ್ಟಾ ರೂಪಾಂತರಿಗೆ ಮೂಗು ದ್ರವ್ಯ ಒಳ್ಳೆಯದು
ಇನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ ಇತ್ತೀಚಿನ ಸಂಶೋಧನೆ ಪ್ರಕಾರ ಮೂಗಿನ ಮಾದರಿಗಳು ಡೆಲ್ಟಾ ರೂಪಾಂತರಗಳನ್ನು ಪತ್ತೆಹಚ್ಚಲು ಹೆಚ್ಚು ಯೋಗ್ಯ ಎಂದಿದ್ದಾರೆ. ಆದ್ರೆ ಒಮೈಕ್ರಾನ್ ತಳಿ ಪ್ರಕರಣಗಳು ತಜ್ಞರ ಎಲ್ಲ ಸಂಶೋಧನೆಯನ್ನು ಉಲ್ಟಾಪಲ್ಟಾ ಮಾಡುತ್ತಿವೆ.
ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತನ್ನ ಸಂಶೋಧನೆಯೊಂದರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ವೈರಸ್ ಮೂಗಿನಲ್ಲಿ ಹೆಚ್ಚು ಸಂಗ್ರಹಗೊಳ್ಳುತ್ತದೆ ಎಂದು ಕಂಡುಹಿಡಿದಿದೆ. ಇದರರ್ಥ, ಆರಂಭಿಕ ದಿನಗಳಲ್ಲಿ ಬಾಯಿಯಲ್ಲಿ ವೈರಸ್ ಸುಲಭವಾಗಿ ಪತ್ತೆಹಚ್ಚಬಹುದಾದರೂ, ಸ್ವಲ್ಪ ಸಮಯದ ನಂತರ ಮೂಗನ್ನು ಪರೀಕ್ಷಿಸುವುದು ಅವಶ್ಯಕ ಎಂದಿದೆ.
ಬಾಯಿ ಉಷ್ಣಾಂಶ ಒಂದೇ ರೀತಿ ಇರಲ್ಲ
ಡಾ. ಜೋಸೆಫ್ ಡೆರಿಸಿ ಪ್ರಕಾರ, ಬಾಯಿಯಲ್ಲಿ ಉಷ್ಣಾಂಶ ಎಂದಿಗೂ ಒಂದೇ ಆಗಿರುವುದಿಲ್ಲ. ಕೆಲವೊಮ್ಮೆ ಅದು ಶುಷ್ಕವಾಗಿದ್ದರೆ, ಕೆಲವೊಮ್ಮೆ ತೇವವಾಗಿರುತ್ತದೆ. ಕೆಲವೊಮ್ಮೆ ಇದು ಹೆಚ್ಚು ಆಮ್ಲೀಯದಿಂದ ಕೂಡಿರುತ್ತದೆ. ಇದು ವೈರಸ್ ಪರೀಕ್ಷೆಯನ್ನು ಕಷ್ಟಕರವಾಗಿಸುತ್ತದೆ. ಮೂಗಿನಲ್ಲಿ ಇಂತಹ ಬದಲಾವಣೆ ತೀರಾ ಕಡಿಮೆ ಹಾಗೂ ಯೋಗ್ಯ ಎಂದು ಜೋಸೆಫ್ ಡೆರಿಸ್ ಹೇಳುತ್ತಾರೆ.

ವಿದೇಶ

ಚೀನಾದ ಜನನ ಪ್ರಮಾಣ ದಾಖಲೆ ಪ್ರಮಾಣದಲ್ಲಿ ಕುಸಿತ!

Published

on

ಬೀಜಿಂಗ್ : ಜನೆವರಿ 17 (ಯು.ಎನ್.ಐ.) ಡ್ರ್ಯಾಗನ್ ರಾಷ್ಟ್ರ ಚೀನಾದಿಂದ ಶಾಕಿಂಗ್ ಸುದ್ದಿಯೊಂದು ಬೆಳಕಿಗೆ ಬಂದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಜನನ ಪ್ರಮಾಣವು ದಾಖಲೆ ಮಟ್ಟದಲ್ಲಿ ಕುಸಿತ ಕಂಡಿದೆ ಎಂದು ಅಧಿಕೃತ ಮಾಹಿತಿ ಹೊರಬಿದ್ದಿದೆ. ಒಂದೆಡೆ ವಯಸ್ಸಾದವರ ಸಂಖ್ಯೆ ಹೆಚ್ಚಳದಿಂದ ಚೀನಾದ ಆರ್ಥಿಕ ಬೆಳವಣಿಗೆ ಮೇಲೆ ಭಾರಿ ಪ್ರಮಾಣದಲ್ಲಿ ಪರಿಣಾಮ ಬೀರಿದೆ. ಇನ್ನೊಂದೆಡೆ ಜನನ ಪ್ರಮಾಣದಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತ ಆಗಿರುವುದು ಚೀನಾದ ಆರ್ಥಿಕ ಪರಿಸ್ಥಿತಿ  ಮತ್ತಷ್ಟು ಹದಗೆಡಲಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ನಿಧಾನಗತಿಯ ಆರ್ಥಿಕತೆ ಮತ್ತು ದಶಕಗಳಲ್ಲೇ ದೇಶದ ದುರ್ಬಲ ಜನಸಂಖ್ಯೆಯ ಬೆಳವಣಿಗೆಯ ಮಧ್ಯೆ ಬೀಜಿಂಗ್ ಜನಸಂಖ್ಯಾ ಬಿಕ್ಕಟ್ಟನ್ನು ಎದುರಿಸುತ್ತಿದೆ. ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಡೇಟಾ ಪ್ರಕಾರ, ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಚೀನಾದ ಜನನ ಪ್ರಮಾಣವು 1,000 ಜನರಿಗೆ 7.52ಕ್ಕೆ ಇಳಿದಿದೆ. 2020 ರಲ್ಲಿ 8.52ರಷ್ಟು ಜನನ ಪ್ರಮಾಣ ಹೊಂದಿದ್ದ ಚೀನಾ, 7.52ರಷ್ಟು ಮಕ್ಕಳ ಹುಟ್ಟುವಿಕೆ ರೇಟ್ ಕುಸಿತಗೊಂಡಿರುವುದರಿಂದ ಬಿಕ್ಕಟ್ಟು ಎದುರಿಸುವಂತಾಗಿದೆ.
ದೇಶದ ವಾರ್ಷಿಕ ಅಂಕಿ-ಅಂಶಗಳ ಪ್ರಕಾರ 1978ರ ಬಳಿಕ ಇಂಥದ್ದೊಂದು ಕುಸಿತವನ್ನು ಚೀನಾ ಕಂಡಿರಲಿಲ್ಲ. ಅಲ್ಲದೆ, 1949ರಲ್ಲಿ ಚೀನಾದಲ್ಲಿ ಕಮ್ಯುನಿಸ್ಟ್ ಸರ್ಕಾರ ಸ್ಥಾಪನೆ ಆದ ಬಳಿಕ ಇದು ಅತ್ಯಂತ ಕಡಿಮೆ ಜನನ ಪ್ರಮಾಣ ಆಗಿದೆ. 2016ರಲ್ಲಿ ಅಧಿಕಾರಿಗಳು ಚೀನಾದ “ಒಂದು ಮಗುವಿನ ನೀತಿ” ಯನ್ನು ಸಡಿಲಗೊಳಿಸಿ ದಂಪತಿಗಳು ಎರಡು ಮಕ್ಕಳನ್ನು ಹೊಂದಲು ಅವಕಾಶ ಮಾಡಿಕೊಟ್ಟಿತ್ತು. ವಿಶ್ವದಲ್ಲೇ ಅತ್ಯಂತ ಕಠಿಣ ಕುಟುಂಬ ಯೋಜನೆ ಹೊಂದಿರುವ ಚೀನಾದಲ್ಲಿ ಈ ಸಡಿಲಿಕೆ ಕೈಗೊಂಡ್ರೂ ಯಾವುದೇ ಬದಲಾವಣೆ ಆಗದೇ ಇರುವುದು ಚೀನಾಕ್ಕೆ ಹಿನ್ನೆಡೆಯಾಗಿದೆ.

Continue Reading

ವಿದೇಶ

ಜೊಕೊವಿಕ್‌ ಗೆ ಅಘಾತ ನೀಡಿದ ಆಸ್ಟ್ರೇಲಿಯಾ ಕೋರ್ಟ್‌.. ಮೂರು ವರ್ಷ ನೋ ಎಂಟ್ರಿ !

Published

on

By

ಸಿಡ್ನಿ, ಜ 16(ಯುಎನ್‌ ಐ) ಸೆರ್ಬಿಯಾದ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ಭಾರೀ ಹಿನ್ನಡೆ ಉಂಟಾಗಿದೆ. ವೀಸಾ ವಿಚಾರದಲ್ಲಿ ಆಸ್ಟ್ರೇಲಿಯಾದ ನ್ಯಾಯಾಲಯದಲ್ಲಿ ಅವರಿಗೆ ಅಘಾತದ ತೀರ್ಪು ಹೊರಬಿದ್ದಿದೆ. ಇದರಿಂದ ಟೈಟಲ್‌ ಉಳಿಸಿಕೊಳ್ಳುಬೇಕೆಂಬ ಜೊಕೊವಿಕ್ ಆಸೆಗೆ ತಣ್ಣಿರೆಚಿದಂತಾಗಿದೆ. ಆದರೆ, ಆಸ್ಟ್ರೇಲಿಯನ್ ಓಪನ್ ಹಿನ್ನಲೆಯಲ್ಲಿ ಲಸಿಕೆ ಹಾಕಿಸಿಕೊಳ್ಳದಿದ್ದರೂ… ವಿಶೇಷ ವಿನಾಯಿತಿಯೊಂದಿಗೆ ಅವರು ಆಸ್ಟ್ರೇಲಿಯಾ ಪ್ರವೇಶಿಸಿದ್ದರು. ಈ ಕ್ರಮದಲ್ಲಿ ತೀವ್ರ ಟೀಕೆಗಳ ನಂತರ ಆಸ್ಟ್ರೇಲಿಯಾ ಸರ್ಕಾರ ಜೋಕೊ ಅವರ ವೀಸಾವನ್ನು ರದ್ದುಗೊಳಿಸಿತು.

ಆದರೆ, ಅವರು ನ್ಯಾಯಾಲಯಕ್ಕೆ ತೆರಳಿ ಜಯ ಸಾಧಿಸಿದ್ದರು. ಆದರೆ ಸರ್ಕಾರ ಮತ್ತೊಮ್ಮೆ ತನಗಿರುವ ಅಧಿಕಾರ ಬಳಸಿ ವೀಸಾ ರದ್ದುಗೊಳಿಸಿತು. ಜೊಕೊ ಎರಡನೇ ಬಾರಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ.. ಈ ಬಾರಿ ಅವರಿಗೆ ನಿರಾಸೆಯಾಯಿತು. ನ್ಯಾಯಾಲಯ ಸರ್ಕಾರದ ಪರವಾಗಿ ತೀರ್ಪು ನೀಡಿದೆ. ಕೊರೊನಾ ಪ್ರಸರಣ ಹಿನ್ನಲೆಯಲ್ಲಿ ಜನರ ಆರೋಗ್ಯ ಭದ್ರತೆಯ ದೃಷ್ಟಿಯಿಂದ ವೀಸಾ ರದ್ದುಪಡಿಸಲಾಗಿದೆ ಎಂಬ ಸರ್ಕಾರದ ವಾದವನ್ನು ನ್ಯಾಯಾಲಯ ಎತ್ತಿಹಿಡಿದಿದೆ.

ಇದರೊಂದಿಗೆ ಹಾಲಿ ಚಾಂಪಿಯನ್ ಜೊಕೊ ಈ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡದೆ ನಿವೃತ್ತಿಗೊಳ್ಳಬೇಕಿರುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಜೊಕೊವಿಕ್, ‘‘ನನಗೆ ತುಂಬಾ ನಿರಾಸೆಯಾಗಿದೆ. ಆದರೆ, ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇನೆ. ದೇಶವನ್ನು ತೊರೆಯಲು ವ್ಯವಸ್ಥೆ ಮಾಡುವ ಅಧಿಕಾರಿಗಳೊಂದಿಗೆ ನಾನು ಸಹಕರಿಸುತ್ತೇನೆ ಎಂದು ಹೇಳಿದ್ದಾರೆ. ಆದರೆ, ಎರಡನೇ ಬಾರಿ ವೀಸಾ ರದ್ದಾದ ಕಾರಣ ಜೋಕೊಗೆ ಇನ್ನೂ ಮೂರು ವರ್ಷಗಳ ಕಾಲ ಆಸ್ಟ್ರೇಲಿಯಾ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಅಂದರೆ 2025ರವರೆಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡುವ ಅವಕಾಶವಿಲ್ಲ!

Continue Reading

ವಿದೇಶ

ಬೆಚ್ಚಿಬೀಳಿಸಿದ ಕತ್ತರಿ

Published

on

Scissors in the stomach
  1. ಢಾಕಾ,ಜನವರಿ 16 (ಯು.ಎನ್.ಐ)ಮನುಷ್ಯನ ದೇಹವೇ ತುಂಬಾ ವಿಚಿತ್ರ.ದೇಹದ ಬಗ್ಗೆ ವಿಚಿತ್ರವಾದ ವಿಷಯಗಳು, ಸಂಗತಿಗಳು ಆಗಾಗ ಬೆಳಕಿಗೆ ಬಂದು ಅಚ್ಚರಿಗೊಳಿಸಿಬಿಡುತ್ತವೆ.ಆದರೆ ಇದು ಪ್ರತಿ ಬಾರಿಯೂ ಸಹಜವಲ್ಲ. ಕೆಲವೊಮ್ಮೆ ವೈದ್ಯರ ನಿರ್ಲಕ್ಷ್ಯದಿಂದಲೂ ಕೆಲವು ವಿಷಯಗಳು ಪರಿಣಾಮ ಬೀರುತ್ತವೆ.ಜೀವ ಉಳಿಸಬೇಕಾದ ವೈದ್ಯರ ನಿರ್ಲಕ್ಷ್ಯತನ ಅದೆಷ್ಟೋ ಜನರನ್ನು ಅಪಾಯದ ಅಂಚಿನಿಂದ ಹಿಡಿದು ಸಾವಿಗೂ ಕಾರಣವಾಗಿದ್ದು ಇದೆ.

ಇತ್ತೀಚೆಗೆ, ಕಳೆದ 20 ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಂಗ್ಲಾದೇಶದ ಮಹಿಳೆಯ ಬಗ್ಗೆ ತಿಳಿದು ಜನರು ಆಶ್ಚರ್ಯಚಕಿತರಾಗಿದ್ದಾರೆ.ಈಕೆಯನ್ನು ತಪಾಸಣೆ ಮಾಡಿದ ವೈದ್ಯರೇ ಬೆಚ್ಚಿಬಿದ್ದಿದ್ದಾರೆ.

55 ವರ್ಷದ ಬಚೇನಾ ಖಾತುನ್ ಎಂಬ ಬಾಂಗ್ಲಾದೇಶದ ಮಹಿಳೆ ಈ ದಿನಗಳಲ್ಲಿ ಚರ್ಚೆಯಲ್ಲಿದ್ದಾರೆ. ಬಚೇನಾ ಕಳೆದ 20 ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. 2002 ರಲ್ಲಿ ಬಾಂಗ್ಲಾದೇಶದ ಚೌಡಂಗಾದಲ್ಲಿ ಪಿತ್ತಕೋಶದ ಕಲ್ಲಿನ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು.ಈ ಮಹಿಳೆ ತನ್ನ ಜೀವನದ ಸಂಪಾದನೆಯನ್ನು ಪೂರ್ತಿಯಾಗಿ ತನ್ನ ಆಪರೇಷನ್‌ಗಾಗಿ ಹಾಕಿದ್ದಳು. ಆದರೆ ಆಸ್ಪತ್ರೆಯಿಂದ ಹೊರಬಂದ ಎರಡು ದಿನಗಳ ನಂತರ ಆಕೆಗೆ ಹೊಟ್ಟೆ ನೋವು ಪ್ರಾರಂಭವಾಯಿತು. ಮತ್ತೆ ಆಸ್ಪತ್ರೆಯಲ್ಲಿ ತೋರಿಸಿದಾಗ, ವೈದ್ಯರು ಗಮನ ಕೊಡಬೇಡಿ ಇದು ಸಹಜ ಎಂದಿದ್ದಾರೆ.

20 ವರ್ಷಗಳಿಂದ ಹೊಟ್ಟೆ ನೋವು:

ಹೀಗೆ ಆಕೆ ಸತತ 20 ವರ್ಷ ಹೊಟ್ಟೆ ನೋವನ್ನು ಅನುಭವಿಸಿದ್ದಾಳೆ.20 ವರ್ಷಗಳ ಬಳಿಕ ಅದು ತೀವ್ರವಾದಾಗ ಇನ್ನೇನು ತಡೆಯಲು ಸಾಧ್ಯವೇ ಇಲ್ಲ ಎಂದನಿಸಿದಾಗ ಬಚೇನಾ, ಮತ್ತೆ ಬೇರೆ ಬೇರೆ ವೈದ್ಯರನ್ನು ಸಂಪರ್ಕಿಸಿದ್ದಾಳೆ. ಹೆಚ್ಚಿನ ವೈದ್ಯರು ಅವರಿಗೆ ಔಷಧಿಗಳನ್ನು ನೀಡುತ್ತಲೇ ಇದ್ದರೆ ಅನೇಕರಿಗೆ ನೋವಿನ ಕಾರಣವೇ ತಿಳಿದಿರಲಿಲ್ಲ.

ಹೊಟ್ಟೆ ನೋವಿನ ಚಿಕಿತ್ಸೆಗಾಗಿ ಬಚೇನ‌ ಸಾಕಿದ ಹಸು, ಆಸ್ತಿಪಾಸ್ತಿ ಇತ್ಯಾದಿಗಳನ್ನೆಲ್ಲ ಮಾರಬೇಕಾಯಿತು.ಏಕೆಂದರೆ ಪಾಪ ಬಚೇನಾಳಿಗೆ ಚಿಕಿತ್ಸೆಗೆ ಹಣ ಸಿಗುತ್ತಿರಲಿಲ್ಲ. 20 ವರ್ಷಗಳಿಂದ ಈ ನೋವಿನಲ್ಲೇ ಬದುಕುತ್ತಿದ್ದರೂ ಚಿಕಿತ್ಸೆ ಸಿಕ್ಕಿಲ್ಲ. ನಂತರ ಅವಳು ಒಂದು ವೈದ್ಯರ ಬಳಿಗೆ ಹೋದಾ್, ಅವರು ಎಕ್ಸ್-ರೇ ಮಾಡುವಂತೆ ಸೂಚಿಸಿದ್ದಾರೆ.

ಆಘಾತಕಾರಿ ಎಕ್ಸರೇ..

ಹೊಟ್ಟೆಯ ಎಕ್ಸರೆಯಲ್ಲಿ ಕಂಡದ್ದು ಬಹಳ ಆಶ್ಚರ್ಯಕರವಾಗಿತ್ತು. ಬಚೇನಾ ಎಕ್ಸ್-ರೇ ಕಳೆದ 20 ವರ್ಷಗಳಿಂದ ಆಕೆಯ ಹೊಟ್ಟೆಯಲ್ಲಿದ್ದ ಕಬ್ಬಿಣದ ಕತ್ತರಿಯನ್ನು ತೋರಿಸಿದೆ. ಇದನ್ನು ನೋಡಿದ ವೈದ್ಯರಿಗೂ ಬುದ್ಧಿ ಭ್ರಮಣೆಯಾಯಿತು. 20 ವರ್ಷಗಳ ಹಿಂದೆ ತನ್ನ ಆಪರೇಷನ್ ಬಗ್ಗೆ ವೈದ್ಯರಿಗೆ ಹೇಳಿದಾಗ ಅದು ವೈದ್ಯರ ನಿರ್ಲಕ್ಷ್ಯದ ಪರಿಣಾಮ ಎಂದು ಅರ್ಥವಾಯಿತು. ಕಳೆದ ಸೋಮವಾರ ಆಪರೇಷನ್ ಮಾಡಿ ದೇಹದಿಂದ ಕತ್ತರಿ ತೆಗೆಯಲಾಗಿತ್ತು. ಈಗ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ. ಇದೀಗ ಅದೇ ಆಸ್ಪತ್ರೆಯಲ್ಲಿ ಮೂವರ ಸಮಿತಿ ರಚನೆಯಾಗಿದ್ದು, ಈ ರೀತಿಯ ನಿರ್ಲಕ್ಷ್ಯ ಹೇಗೆ ನಡೆದಿದೆ ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿದೆ.

Continue Reading
Advertisement
ದೇಶ3 mins ago

ಪದ್ಮಶ್ರೀ ಪುರಸ್ಕೃತೆ, ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ನಿಧನ: ಮೋದಿ ಸಂತಾಪ

ರಾಯಗಡ: ಜನೆವರಿ ೧೭ (ಯು.ಎನ್.ಐ.) ಪದ್ಮಶ್ರೀ ಪುರಸ್ಕೃತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ಭಾನುವಾರ ರಾತ್ರಿ ಒಡಿಶಾದ ರಾಯಗಡ ಜಿಲ್ಲೆಯ ಗುಣಪುರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ....

ಕರ್ನಾಟಕ13 mins ago

ಪಿಎಂಎಫ್ಎಂಇ ಯೋಜನೆಗೆ ಶೇ.15 ರಷ್ಟು ರಾಜ್ಯದಿಂದ ಹೆಚ್ಚುವರಿ ಸಹಾಯಧನ

ಬೆಂಗಳೂರು: ಜನೆವರಿ 17 (ಯು.ಎನ್.ಐ.)ರೈತರಿಗೆ ಬಲತುಂಬಲು ರಾಜ್ಯ ಸರ್ಕಾರ ಕೇಂದ್ರದ ಆತ್ಮ ನಿರ್ಭರ ಭಾರತ ಅಭಿಯಾನ (ಪಿಎಂಎಫ್ಎಂಇ) ಯೋಜನೆಗೆ ಸಹಾಯಧನವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಪಿಎಂಎಫ್ಎಂಇ ಯೋಜನೆಗೆ...

ಬೆಂಗಳೂರು30 mins ago

ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ಕೋವಿಡ್

ಬೆಂಗಳೂರು, ಜ ೧೭(ಯುಎನ್ ಐ) ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕಳೆದ ನಾಲ್ಕೈದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆಆರ್ ಟಿ...

ದೇಶ44 mins ago

ಉಪಯುಕ್ತ ಮಾಹಿತಿ ; 5 ಸಾವಿರ ಅಲ್ಲ, ಕೇವಲ ₹260 ರಲ್ಲಿ ಒಮೈಕ್ರಾನ್ ಪತ್ತೆ ಹಚ್ಚಿ!

ಬೆಂಗಳೂರು : ಜನೆವರಿ 17 (ಯು.ಎನ್.ಐ.) ಪ್ರತಿ ದಿನ ಒಮೈಕ್ರಾನ್ ಸೋಂಕು ದೇಶದಲ್ಲಿ ವೇಗವಾಗಿ ಹರಡಲಾರಂಭಿಸಿದೆ. ಕೊರೊನಾ ರೂಪಾಂತರಗಳಿಗಿಂತ ಒಮೈಕ್ರಾನ್ ಹೆಚ್ಚು ಸಾಂಕ್ರಾಮಿಕವಾಗಿದ್ದು, ಜೀನೋಮ್ ಸೀಕ್ವೆನ್ಸಿಂಗ್ ಟೆಸ್ಟ್‌ನೊಂದಿಗೆ...

ದೇಶ44 mins ago

ಐಐಟಿ ಬಾಂಬೆಯ ವಿದ್ಯಾರ್ಥಿ ಆತ್ಮಹತ್ಯೆ

ಮುಂಬೈ: ಜನೆವರಿ 17  (ಯು.ಎನ್.ಐ.) ಐಐಟಿ ಬಾಂಬೆಯ ವಿದ್ಯಾರ್ಥಿ ಸೋಮವಾರ ಮುಂಜಾನೆ ಇಲ್ಲಿನ ಪೊವೈ ಕ್ಯಾಂಪಸ್ ನಲ್ಲಿರುವ ತನ್ನ ಹಾಸ್ಟೆಲಿನ ಟೆರೇಸ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ...

ಕರ್ನಾಟಕ1 hour ago

ಕೋವಿಡ್‌ ಸೋಂಕು ಹೆಚ್ಚು; ಸಾವು ಕಡಿಮೆ:‌ ಸಚಿವ ಅಶೋಕ್

ಬೆಂಗಳೂರು: ಜನೆವರಿ ೧೭ (ಯು.ಎನ್.ಐ.) ರಾಜ್ಯದಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಹೆಚ್ಚಾಗಿದೆ.  ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆ ಇದೆ ಎಂದು ಕಂದಾಯ ಸಚಿವ ಆರ್.‌ ಅಶೋಕ್‌ ತಿಳಿಸಿದರು....

ಆರೋಗ್ಯ1 hour ago

ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ೨ ಲಕ್ಷ ೫೮ ಸಾವಿರ ಕೋವಿಡ್ ಪ್ರಕರಣ

ನವದೆಹಲಿ,ಜ ೧೭(ಯು ಎನ್ ಐ)ದೇಶದಲ್ಲಿ ಈವರೆಗೆ ೮ ಸಾವಿರದ ೨೦೯ ಕೋವಿಡ್-೧೯ ರೂಪಾಂತರಿ ಒಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿವೆ. ನಿನ್ನೆ ಒಂದೇ ದಿನ ಶೇಕಡ ೬ರಷ್ಟು ಪ್ರಕರಣಗಳು...

ಕರ್ನಾಟಕ1 hour ago

ಗಾಂಧಿ ಕುರಿತು ಸಂದೇಹ, ಪ್ರಶ್ನೆಗಳಿವೆಯೇ ?

ಬೆಂಗಳೂರು: ಜನೆವರಿ ೧೭ (ಯು.ಎನ್.ಐ.) ಗಾಂಧಿ ವಿಚಾರ ವೇದಿಕೆಯು ಗಾಂಧೀಜಿ ಅವರ ಕುರಿತ ಎಲ್ಲ ಸಂದೇಹಗಳಿಗೆ ಉತ್ತರ ರೂಪಿಯಾದ ಪುಸ್ತಕವನ್ನು ಪ್ರಕಟಿಸಲು ಯೋಜಿಸಿದ್ದು, ಸಾರ್ವಜನಿಕರಿಂದ ಪ್ರಶ್ನೆಗಳನ್ನು ಆಹ್ವಾನಿಸಿದೆ....

ವಾಣಿಜ್ಯ2 hours ago

ವಿಶ್ವ ಆರ್ಥಿಕ ವೇದಿಕೆಯ ದಾವೂಸ್ ಸಭೆಯಲ್ಲಿಂದು ರಾತ್ರಿ ಪ್ರಧಾನಿ ಮೋದಿ ಭಾಷಣ

ನವದೆಹಲಿ, ಜ ೧೭(ಯುಎನ್ ಐ) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ರಾತ್ರಿ ೮.೩೦ಕ್ಕೆ ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಸಭೆಯಲ್ಲಿ ’ಜಗತ್ತಿನ ಸ್ಥಿತಿಗತಿ’ ಕುರಿತು ವಿಶೇಷ...

ಕರ್ನಾಟಕ2 hours ago

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 7 ಪ್ರಯಾಣಿಕರಿಗೆ ಕೋವಿಡ್

ಬೆಂಗಳೂರು : ಜನೆವರಿ 17 (ಯು.ಎನ್.ಐ.) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 7 ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಕಳೆದ 24 ಗಂಟೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ...

ಟ್ರೆಂಡಿಂಗ್

Share