Connect with us


      
ರಾಜಕೀಯ

ನಾರಾಯಣಗುರು ಟ್ಯಾಬ್ಲೋಗೆ ಅವಕಾಶ ನೀಡಬೇಕಿತ್ತು: ಸಲೀಂ ಅಹ್ಮದ್

Kumara Raitha

Published

on

ಬೆಂಗಳೂರು: ಜನೆವರಿ ೨೬ (ಯು.ಎನ್.‌ಐ.) ಗಣರಾಜ್ಯೋತ್ಸವ ಪಥ ಸಂಚಲನ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ಹರಿಕಾರ ನಾರಾಯಣಗುರುಗಳ ಟ್ಯಾಬ್ಲೋಗೆ  ಅವಕಾಶ ಕೊಟ್ಟಿಲ್ಲ. ಇದು ರಾಜ್ಯದ ಜನತೆಗೆ ನೋವುಂಟು ಮಾಡಿದೆ ಎಂದು‌ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂತಹ ಘಟನೆಗಳು ಆಗಬಾರದು. ಎಲ್ಲ ಸಮಾಜಗಳು ಈ ಸಂದರ್ಭದಲ್ಲಿ ಭಾಗವಹಿಸಬೇಕು. ಆದರೆ ಇದಕ್ಕೆ ಅವಕಾಶ ನೀಡದ ಕೇಂದ್ರ ಸರ್ಕಾರದ ನಡೆ ಸರ್ಕಾರದ ಸಂವಿಧಾನ ವಿರೋಧಿಯಾಗಿದೆ. ಇಂಥ ಹಕವು ನಿದರ್ಶನಗಳು ನಮ್ಮ ಮುಂದಿವೆ. ಇದರ ವಿರುದ್ಧ ಹೋರಾಟ ಮಾಡುವ ಅನಿವಾರ್ಯತೆಯಿದೆ. ಕಾಂಗ್ರೆಸ್ ಈ ನಿಟ್ಟಿನಲ್ಲಿ ಹೋರಾಟ ಮಾಡಲಿದೆ ಎಂದ ಅವರು ಅಂಬೇಡ್ಕರ್ ಚಿಂತನೆಗಳ ಅನುಷ್ಟಾನ ಅಗತ್ಯವಿದೆ. ಸಮಾಜಕ್ಕೆ ಅವರ ಕೊಡುಗೆ ಅನನ್ಯ ಎಂದು ಅಭಿಪ್ರಾಯಪಟ್ಟರು.

Share