Published
5 months agoon
By
UNI Kannadaನವದೆಹಲಿ,ಡಿ.14(ಯು.ಎನ್.ಐ) ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ ಡಿಮ್ಯಾಟ್ ಖಾತೆ ತೆರೆಯುವವರ ಸಂಖ್ಯೆ ವೇಗವಾಗಿ ಹೆಚ್ಚಿದೆ. ಈ ಅವಧಿಯಲ್ಲಿ ಪ್ರತಿ ತಿಂಗಳು ಸರಾಸರಿ 12 ಲಕ್ಷಕ್ಕೂ ಹೆಚ್ಚು ಡಿಮ್ಯಾಟ್ ಖಾತೆಗಳನ್ನು ತೆರೆಯಲಾಗುತ್ತದೆ. ಈ ಮೂಲಕ ಕೇವಲ ಮೂರು ವರ್ಷಗಳಲ್ಲಿ ಡಿಮ್ಯಾಟ್ ಖಾತೆದಾರರ ಒಟ್ಟು ಸಂಖ್ಯೆ ದ್ವಿಗುಣಗೊಂಡಿದೆ.
ಪ್ರಸ್ತುತ ಒಟ್ಟು 7.38 ಕೋಟಿ ಡಿಮ್ಯಾಟ್ ಖಾತೆದಾರರಿದ್ದು, ಇವುಗಳನ್ನು ಹೊರತುಪಡಿಸಿ, ಮ್ಯೂಚುವಲ್ ಫಂಡ್ಗಳ ಹೂಡಿಕೆದಾರರ ಸಂಖ್ಯೆ ಸುಮಾರು 2.75 ಕೋಟಿ ಮತ್ತು ಸೆಬಿಯೊಂದಿಗೆ ನೋಂದಾಯಿತ ಹೂಡಿಕೆ ಸಲಹೆಗಾರರ (RIA) ಸಂಖ್ಯೆ 1,324 ಆಗಿದೆ. ಮೂರು ವರ್ಷಗಳಲ್ಲಿ 3.79 ಕೋಟಿ ಹೊಸ ಡಿಮ್ಯಾಟ್ ಖಾತೆಗಳನ್ನು ತೆರೆಯಲಾಗಿದೆ
ಇತ್ತೀಚಿನ ದಿನಗಳಲ್ಲಿ ಡಿಮ್ಯಾಟ್ ಖಾತೆ ತೆರೆಯುವ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಹೂಡಿಕೆದಾರರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. 2018-19ನೇ ಹಣಕಾಸು ವರ್ಷದಲ್ಲಿ ಡಿಮ್ಯಾಟ್ ಖಾತೆದಾರರ ಸಂಖ್ಯೆ 3.59 ಕೋಟಿ ಇದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಅಕ್ಟೋಬರ್ ಅಂತ್ಯದ ವೇಳೆಗೆ 7.38 ಕೋಟಿಗೆ ಏರಿಕೆಯಾಗಿದೆ. ಕಳೆದ 31 ತಿಂಗಳಲ್ಲಿ 3.79 ಕೋಟಿ ಹೊಸ ಡಿಮ್ಯಾಟ್ ಖಾತೆಗಳನ್ನು ತೆರೆಯಲಾಗಿದೆ. ಈ ರೀತಿಯಾಗಿ, ಪ್ರತಿ ತಿಂಗಳು ಸರಾಸರಿ 12 ಲಕ್ಷಕ್ಕೂ ಹೆಚ್ಚು ಡಿಮ್ಯಾಟ್ ಖಾತೆಗಳನ್ನು ತೆರೆಯಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 1.87 ಕೋಟಿ ಡಿಮ್ಯಾಟ್ ಖಾತೆಗಳನ್ನು ತೆರೆಯಲಾಗಿದೆ
ಪ್ರಸಕ್ತ ಹಣಕಾಸು ವರ್ಷದ ಕುರಿತು ಮಾತನಾಡುವುದಾದರೆ, ಡಿಮ್ಯಾಟ್ ಖಾತೆ ತೆರೆಯುವ ವೇಗ ಹೆಚ್ಚಿದೆ. ಕಳೆದ ಹಣಕಾಸು ವರ್ಷದ ಅಂತ್ಯಕ್ಕೆ ಒಟ್ಟು ಡಿಮ್ಯಾಟ್ ಖಾತೆಗಳ ಸಂಖ್ಯೆ 5.51 ಕೋಟಿ. ಈ ಮೂಲಕ ಪ್ರಸಕ್ತ ಹಣಕಾಸು ವರ್ಷದ ಮೊದಲ ಏಳು ತಿಂಗಳ ಅವಧಿಯಲ್ಲಿ ದಾಖಲೆಯ 1.87 ಕೋಟಿ ಡಿಮ್ಯಾಟ್ ಖಾತೆಗಳನ್ನು ತೆರೆಯಲಾಗಿದೆ. ಇದು ಪ್ರತಿ ತಿಂಗಳು ಸರಾಸರಿ 26.71 ಲಕ್ಷ ಹೊಸ ಖಾತೆಗಳನ್ನು ತೆರೆಯಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 1.87 ಕೋಟಿ ಡಿಮ್ಯಾಟ್ ಖಾತೆಗಳನ್ನು ತೆರೆಯಲಾಗಿದೆ ಎಂದು ಲೋಕಸಭೆಗೆ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಮಾಹಿತಿ ನೀಡಿದ್ದಾರೆ.
ಟ್ವಿಟ್ಟರ್ ಖರೀದಿ ಒಪ್ಪಂದ ತಾತ್ಕಾಲಿಕವಾಗಿ ತಡೆಹಿಡಿದ ಎಲೋನ್ ಮಸ್ಕ್!
ಅಮೆಜಾನ್ ; ಗ್ರಾಹಕರ ದೂರುಗಳಿಗೆ ತುರ್ತು ಸ್ಪಂದಿಸಲು ಕೇಂದ್ರ ಸೂಚನೆ
1000ಕ್ಕೂ ಹೆಚ್ಚು ಶಾಖೆ ತೆರೆದ ಎಚ್ಡಿಎಫ್ಸಿ..!
ಸ್ವಿಗ್ಗಿ; ಡ್ರೋನ್ ಮೂಲಕ ದಿನಸಿ ವಿತರಣಾ ಸೇವೆಗೆ ಸಿದ್ಧ
ಬೆಂಗಳೂರಿಗರಿಗೆ ಸಿಗಲಿದೆ ಶೀಘ್ರ ಡ್ರೋನ್ ಮೂಲಕ ಆಹಾರ!
61,000 ಕೋಟಿ ರೂ. ಮೊತ್ತದ ಇಒಐ ನಿರೀಕ್ಷೆ, 12,000 ಉದ್ಯೋಗ ಸೃಷ್ಟಿ