Connect with us


      
ನ್ಯಾಯಾಲಯ

ಬಳ್ಳಾರಿ ವಿವಿ ಕುಲಪತಿ ಪ್ರೊ. ಸಿದ್ದು ಅಲಗೂರು ನೇಮಕಾತಿ ಪ್ರಶ್ನಿಸಿದ್ದ ಅರ್ಜಿ ವಜಾ

Kumara Raitha

Published

on

ಬೆಂಗಳೂರು: ಡಿಸೆಂಬರ್ 09 (ಯು.ಎನ್.ಐ.) ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ಸಿದ್ದು ಅಲಗೂರು ಅವರನ್ನು ಬಳ್ಳಾರಿಯ ಕೃಷ್ಣದೇವರಾಯ ವಿಶ್ವ ವಿದ್ಯಾಲಯಲದ ಕುಲಪತಿ ಹುದ್ದೆಗೆ ನೇಮಕ ಮಾಡಿ ಹೊರಡಿಸಿದ ಆದೇಶ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಬೆಳಗಾವಿಯ ತಿಳಕವಾಡಿ ನಿವಾಸಿ ಹಾಗೂ ಶಿಕ್ಷಣ ತಜ್ಞ ಡಾ. ಎಂ ಆರ್ ನಿಂಬಾಳ್ಕರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಗುರುವಾರ ನಡೆಸಿತು.
ಮೋತಿಲಾಲ್ ನೆಹರೂ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯ (ಎಂಎಂಎನ್ಐಟಿ) ರಿಜಿಸ್ಟ್ರಾರ್ 2020ರ ಮೇ 18ರಂದು ನೀಡಿದ ಪತ್ರವನ್ನು ಸಿದ್ದು ಅಲಗೂರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಎಂಎಂಎನ್ಐಟಿ ಅಲಾಹಾಬಾದ್ ವಿವಿಯ ಸಂಯೋಜಿತ ಕಾಲೇಜು ಆಗಿದೆ. ಸಿದ್ದು ಅಲಗೂರು ಸ್ನಾತಕೊತ್ತರ ಪದವಿ ಪ್ರಮಾಣ ಪತ್ರ ನೈಜ ಮತ್ತು ಸರಿಯಾಗಿದೆ ಎಂಬುದಾಗಿ ಎಂಎಂಎನ್ಐಟಿ ರಿಜಿಸ್ಟ್ರಾರ್ ತಿಳಿಸಿದ್ದಾರೆ. ಆದ್ದರಿಂದ ಅಲಹಾಬಾದ್ ವಿವಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸ್ನಾತಕೋತ್ತರ ಕೋರ್ಸ್ ಹೊಂದಿರಲಿಲ್ಲ. ವಿವಿಯ ರಿಜಿಸ್ಟ್ರಾರ್ ಪತ್ರವು ಅಧಿಕೃತ ದಾಖಲೆ ಎಂಬುದಾಗಿ ಪರಿಗಣಿಸಲಾಗದು. ಅಂತೆಯೇ, ಸಿದ್ದು ಅಲಗೂರು ನಕಲಿ ದಾಖಲೆ ಸಲ್ಲಿಸಿ ಅಕ್ರಮವಾಗಿ ರಾಣಿ ಚೆನ್ನಮ್ಮ ವಿವಿಯಲ್ಲಿ ಕಂಪ್ಯೂಟರ್ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಮತ್ತು ಕೃಷ್ಣ ದೇವರಾಯ ವಿವಿಯ ಕುಲಪತಿ ಹುದ್ದೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗದು ಎಂದು ಅಭಿಪ್ರಾಯಪಟ್ಟ ಪೀಠವು ಮನವಿ ವಜಾಗೊಳಿಸಿತು.

Share