Connect with us


      
ರಾಜಕೀಯ

ಶಿವಸೇನೆಯು ಬಿಜೆಪಿ ರೀತಿ ಸುಳ್ಳು ವಾಗ್ದಾನ ಮಾಡಲ್ಲ; ಬಿಜೆಪಿಗೆ ಉದ್ಧವ್ ಠಾಕ್ರೆ ಟಾಂಗ್

Vanitha Jain

Published

on

ಮುಂಬೈ, ಜನವರಿ 01 (ಯು.ಎನ್.ಐ) ಚುನಾವಣೆ ವೇಳೆ ಹಲವು ನಾಯಕರು ಮತದಾರರಿಗೆ ಚಂದ್ರ, ನಕ್ಷತ್ರ ಕೊಡಿಸುವ ರೀತಿಯಲ್ಲಿ ಭರವಸೆ ನೀಡುತ್ತಾರೆ. ತದನಂತರ ತಮ್ಮ ವಾಗ್ದಾನದಿಂದ ಹಿಂದೆ ಸರಿದು ಕೊಟ್ಟ ಭರವಸೆಯನ್ನೇ ಮರೆತು ಬಿಡುತ್ತಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಟೀಕಿಸಿದರು.

ಬಿಜೆಪಿ ವಿರುದ್ಧ ಮುಸುಕಿನ ಗುದ್ದಾಟ ನಡೆಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಕೆಲವು ನಾಯಕರು ಚುನಾವಣೆಗೆ ಮುನ್ನ ಮತದಾರರಿಗೆ ಚಂದ್ರ ಮತ್ತು ನಕ್ಷತ್ರಗಳನ್ನೇ ತಂದು ಕೊಡುವ ರೀತಿಯಲ್ಲಿ ಮಾತನಾಡುತ್ತಾರೆ. ನಂತರ ತಮ್ಮ ವಾಗ್ದಾನದಿಂದ ಹಿಂದೆ ಸರಿಯುತ್ತಾರೆ. ಆದರೆ ಶಿವಸೇನೆ ಬೇರೆ ಪಕ್ಷದ ರೀತಿ ಅಲ್ಲ ಎಂದು ಹೇಳಿದ್ದಾರೆ.

ರಾಜ್ಯ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ಶಿವಸೇನೆ ಬೇರೆ ರೀತಿಯ ಪಕ್ಷದ ರೀತಿಯಲ್ಲಿ ಪೊಳ್ಳು ಭರವಸೆಗಳನ್ನು ನೀಡುವುದಿಲ್ಲ ಮತ್ತು ಈಡೇರಿಸಲಾಗದ ಭರವಸೆಗಳನ್ನು ಎಂದಿಗೂ ನೀಡುವುದಿಲ್ಲ ಎಂದು ಅವರು ಹೇಳಿದರು.

ಶಿವಸೇನೆಯು ಈಗ ಮಾತ್ರವಲ್ಲ ಮೊದಲಿನಿಂದಲೂ ಇದೇ ರೀತಿಯಲ್ಲಿ ನಡೆದುಕೊಂಡು ಬಂದಿದೆ. ಕಾಂಗ್ರೆಸ್ ಮತ್ತು ಎನ್‍ಸಿಪಿ ಜೊತೆಗೆ ಶಿವಸೇನೆಯು ಜೊತೆಯಲ್ಲಿ ಸಾಗುತ್ತಿದೆ ಮತ್ತು ಯಾರೆಲ್ಲ ಹೊರಗುಳಿದಿದ್ದಾರೆ ಎಂಬುದು ಸ್ಪಷ್ಟವಾಗಿದೆ” ಎಂದು ಹೇಳಿದರು.

ಏತನ್ಮಧ್ಯೆ, ಕೋವಿಡ್ ಪರಿಸ್ಥಿತಿಯ ಬಗ್ಗೆ ಸೇನಾ ಮುಖ್ಯಸ್ಥರು, “ಚಿಂತಿಸಬೇಡಿ, ನಾವು ಪರಿಸ್ಥಿತಿಯನ್ನು ನಿಭಾಯಿಸಲು ಸಮರ್ಥರಾಗಿದ್ದೇವೆ. ನಿಮ್ಮ ಬೆಂಬಲ ನಮಗಿರಲಿ. ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ, ನಾನು ಕೊರೊನಾವೈರಸ್ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.

Share