Connect with us


      
ವಿದೇಶ

ಕಾಬೂಲ್ ಶಾಲಾ ಸ್ಫೋಟ: 6 ಸಾವು, 14 ಮಂದಿಗೆ ಗಾಯ

Vanitha Jain

Published

on

ಕಾಬೂಲ್: ಏಪ್ರಿಲ್ 19 (ಯು.ಎನ್.ಐ.) ಪಶ್ಚಿಮ ಕಾಬೂಲ್ ನ ಪ್ರೌಢಶಾಲೆಯೊಂದರಲ್ಲಿ ನಡೆದ ಮೂರು ಸ್ಫೋಟಗಳಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 14 ಮಂದಿ ಗಾಯಗೊಂಡಿದ್ದಾರೆ.

ಅಬ್ದುಲ್ ರಹೀಮ್ ಶಾಹಿದ್ ಪ್ರೌಢಶಾಲೆಯಲ್ಲಿ ಸ್ಫೋಟ ಸಂಭವಿಸಿದೆ ಮತ್ತು ಶಿಯಾ ಸುಮದಾಯದ ಮಂದಿಗೆ ಸಾವುನೋವುಗಳಾಗಿವೆ ಎಂದು ಕಾಬೂಲ್ ಪೊಲೀಸ್ ವಕ್ತಾರ ಖಾಲಿದ್ ಜದ್ರಾನ್ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ತರಗತಿಯಿಂದ ಹೊರಬರುತ್ತಿದ್ದಾಗ ಈ ಘಟನೆ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ನೆರೆಹೊರೆಯಲ್ಲಿರುವ ಅನೇಕ ನಿವಾಸಿಗಳು ಶಿಯಾ ಹಜಾರಾ ಸಮುದಾಯಕ್ಕೆ ಸೇರಿದವರು, ಇಸ್ಲಾಮಿಕ್ ಸ್ಟೇಟ್ ಸೇರಿದಂತೆ ಸುನ್ನಿ ಉಗ್ರಗಾಮಿ ಗುಂಪುಗಳಿಂದ ಆಗಾಗ್ಗೆ ಗುರಿಯಾಗುತ್ತಿರುವ ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು.

Share