Connect with us


      




ಅಪರಾಧ

ಸೆಲ್ಫಿ ಹುಚ್ಚು; ನೀರು ಪಾಲಾದ ಒಂದೇ ಕುಟುಂಬದ ಮೂವರು ಸದಸ್ಯರು

Published

on

ನವದೆಹಲಿ, ಡಿಸೆಂಬರ್ 27(ಯು.ಎನ್.ಐ) ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಚೆಂಗಲ್ಪಟುವಿನ ಪಾಲಾರ್ ನದಿಯಲ್ಲಿ ಒಂದೇ ಕುಟುಂಬದ ಮೂವರು ಕೊಚ್ಚಿಕೊಂಡು ಹೋಗಿದ್ದು, ಇದುವರೆಗೂ ಮೃತದೇಹ ಪತ್ತೆಯಾಗಿಲ್ಲ.

ನಾಪತ್ತೆಯಾದವರನ್ನು ತಿರುಸುಲಂನಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ಲಿಯೋನ್‍ಸಿಂಗ್ ರಾಜಾ (38), ಮಗಳು ಪರ್ಸಿ (16) ಮತ್ತು ಸಹೋದರನ ಮಗ ಲಿವಿಂಗ್‍ಸ್ಟನ್ (19) ಎಂದು ಗುರುತಿಸಲಾಗಿದೆ.

ಚೆಂಗಲ್ಪಟುವಿನ ಪಾಲಾರ್ ನದಿಯ ಬಳಿ ಹೋಗದಂತೆ ಎಚ್ಚರಿಕೆ ನೀಡಿದ್ದರೂ, ಆಚರಪಕ್ಕಂನ ಮಲೈ ಮಾಧಾ ಚರ್ಚ್‍ನಲ್ಲಿ ಪ್ರಾರ್ಥನೆ ಸಲ್ಲಿಸಿ ಮನೆಗೆ ಮರಳುತ್ತಿದ್ದ 20 ಜನರ ಗುಂಪು ಸೆಲ್ಫಿ ಕ್ಲಿಕ್ಕಿಸಲು ನದಿಯ ಬಳಿ ಹೋಗಿದೆ. ಆದರೆ, ಲಿಯೋನ್‍ಸಿಂಗ್ ರಾಜಾ ಮತ್ತು ಮಕ್ಕಳು ನದಿಯ ಆಳಕ್ಕೆ ಇಳಿದು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಪಾಲಾರ್ ಪೆÇಲೀಸರು ತಿಳಿಸಿದ್ದಾರೆ. ಗುಂಪಿನ ಸದಸ್ಯರು ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಸಮೀಪದ ಚೆಂಗಲಪಾಟು ಡಿಪೋದ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಗೆ ಪ್ರಯತ್ನಿಸಿದರು. ಆದರೆ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಲಿಯೋನ್‍ಸಿಂಗ್ ರಾಜಾ ಮಕ್ಕಳನ್ನು ರಕ್ಷಿಸಲು ಯತ್ನಿಸಿದ್ದು, ಏಕಾಏಕಿ ಸಮತೋಲನ ಕಳೆದುಕೊಂಡು ಮೂವರು ಕೊಚ್ಚಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರೀ ಪ್ರಮಾಣದ ನೀರಿನ ಹರಿವು ಶೋಧ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿರುವ ಕಾರಣ ಮೃತದೇಹಗಳು ಪತ್ತೆಯಾಗಿಲ್ಲ ಎಂದು ಚೆಂಗಲ್ಪಟುವಿನ ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಚೆನ್ನೈನ ಮುಳುಗುಗಾರರು ಮತ್ತು ಸ್ಥಳೀಯ ಜನರು ಮೃತದೇಹಗಳನ್ನು ಹೊರತೆಗೆಯಲು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಅಪರಾಧ

‘ನಿಮ್ಮ ಇಲಾಖೆಯಲ್ಲೇ ದೊಡ್ಡ ಭ್ರಷ್ಟರಿದ್ದಾರೆ’ ಅವರನ್ನ ಹಿಡಿಯಿರಿ ಎಂದು ಡಿಸಿಪಿ ಅನೂಪ್ ಶೆಟ್ಟಿಗೆ ಹೇಳಿದ ನೆಟ್ಟಿಗರು !

Published

on

ಬೆಂಗಳೂರು: ಜನೆವರಿ 22 ( ಯು.ಎನ್.ಐ.) ದಿನದಿಂದ ದಿನಕ್ಕೆ ಬೆಂಗಳೂರು ನಗರದಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಹಣ ವಂಚನೆ, ಬಂಗಾರ ವಂಚನೆ, ಮನೆ ವಂಚನೆ, ದಾಖಲಾತಿ ವಂಚನೆ ಸಂಬಂಧ ಹೀಗೆ ಸಾಲು ಸಾಲು ದೂರುಗಳು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಿವೆ.

ಇದೀಗ ವ್ಯಕ್ತಿಯೊಬ್ಬರ ದಾಖಲಾತಿಗಳನ್ನು ದುರ್ಬಳಕೆ ಮಾಡಿಕೊಂಡು ಸಾಲ ಪಡೆದುಕೊಂಡಿರುವ ಘಟನೆ ನಡೆದಿದೆ. ಈ ಆರೋಪಿಯು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ವ್ಯಕ್ತಿಯೊಬ್ಬರ ದಾಖಲಾತಿಗಳನ್ನು ದುರ್ಬಳಕೆ ಮಾಡಿಕೊಂಡು ಮೊಬೈಲ್ ಮೂಲಕ ಲೋನ್ ಪಡೆದು ವಂಚಿಸಿದ ಆರೋಪಿಯನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ, ಟ್ವೀಟ್ ಮಾಡಿದ್ದು, ಆರೋಪಿ ಬಂಧಿಸಿರುವ ಬಗ್ಗೆ ತಿಳಿಸಿದ್ದಾರೆ. ಆದರೆ ಆರೋಪಿಯ ಹೆಸರು, ಊರು ಎಂಬುದು ತಿಳಿದು ಬಂದಿಲ್ಲ. ತನಿಖೆಯ ನಂತರ ಎಲ್ಲಾ ಮಾಹಿತಿ ಬಹಿರಂಗವಾಗಲಿದೆ.

ಆದರೆ ಅನೂಪ್ ಅವರ ಈ ಟ್ವೀಟ್ ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಬ್ಬರು ಟ್ವೀಟ್ ಮಾಡಿ, ಕಳ್ಳತನ ಮತ್ತು ಮೋಸದ ಜಾಲವನ್ನು ಪತ್ತೆ ಹಚ್ಚಿದಕ್ಕಾಗಿ ಅಭಿನಂದನೆಗಳು. ಮನೆ ಖರೀದಿದಾರರಿಗೆ ಮನೆ ತಲುಪಿಸದೆ ಸಾವಿರಾರು ಕೋಟಿ ಲೂಟಿ ಮಾಡಿದ ಮಂತ್ರಿ ಡೆವಲಪರ್ಸ್ ವಿರುದ್ಧ ನಿಮ್ಮ ಇಲಾಖೆ ಚಾರ್ಜ್ ಶೀಟ್ ಸಲ್ಲಿಸಿದೆಯೇ? ಎಂತಹ ಅವಮಾನ ಎಂದು ಕರ್ನಾಟಕ ಹೋಮ್ ಬಯರ್ಸ್ ಫೋರಮ್ ಪ್ರಶ್ನಿಸಿದೆ.

ರುದ್ರೇಶ್ ಪಿ ಎಂಬುವರು ಟ್ವೀಟ್ ಮಾಡಿ, ನಿಮ್ಮ ಇಲಾಖೆಗಳಲ್ಲೇ ದೊಡ್ಡ ದೊಡ್ಡ ಭ್ರಷ್ಟರು ಇದ್ದಾರೆ ಅವರನ್ನು ಮೊದಲು ಹಿಡಿಯಿರಿ ಸರ್ ಎಂದಿದ್ದಾರೆ.

ನನ್ನ ಬಳಿ ಒಬ್ಬರು ಅಸಭ್ಯವಾಗಿ ಮಾತನಾಡುತ್ತಾರೆ ಎಂದು ದೂರು ನೀಡಲು ಬೆಂಗಳೂರು ಸೈಬರ್ ಕ್ರೈಂಗೆ ಕರೆ ಮಾಡಿದೆ. ಆದರೆ ಇಲ್ಲಿ ಕೇವಲ ಹಣಕಾಸಿನ ನಷ್ಟ, ವಂಚನೆ ಬಗ್ಗೆ ಮಾತ್ರ ದೂರು ತೆಗೆದುಕೊಳ್ಳಲಾಗುತ್ತದೆ ಎಂದು ಉತ್ತರಿಸಿ ಪೊಲೀಸ್ ಠಾಣೆಗೆ ಭೇಟಿ ನೀಡಲು ಹೇಳಿದರು ಎಂದು ರಂಗಣ್ಣ ಎಂಬುವವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ

ಸರ್ ನಗರದಲ್ಲಿ ಹೊಸ ಅಪರಾಧ ಪ್ರಕರಣಗಳು ಸಹ ನಡೆಯುತ್ತಿದೆ. ಹಣದ ಅಗತ್ಯವಿರುವ ವ್ಯಕ್ತಿಯನ್ನು ಕೆಲವು ಗುಂಪಿನ ಜನರು ಸಂಪರ್ಕಿಸುತ್ತಾರೆ!. ನೀವು ಕಾರನ್ನು ಗೆದ್ದಿದ್ದೀರಿ ಎಂದು ಪತ್ರವನ್ನು ಕಳುಹಿಸಿ 1ಸಾವಿರ, 3 ಸಾವಿರ ಅಥವಾ 5 ಸಾವಿರ ತೆಗೆದುಕೊಳ್ಳಿ ಎಂದು ಹೇಳಿ ವರ್ಷದ ಅಂತ್ಯದ ವೇಳೆಗೆ ಅವರು 3-5 ಲಕ್ಷ ಸಂಗ್ರಹಿಸುತ್ತಿದ್ದರು. ತಿಂಗಳಿಗೆ 10 ಜನರ ಗುರಿ ಇಟ್ಟುಕೊಂಡು ಕೃತ್ಯ ನಡೆಸುತ್ತಿದ್ದಾರೆ ಎಂದು ಅಪರಾಧದ ಬಗ್ಗೆ ವರುಣ್ ಸಿ ಎಂಬುವವರು ಮಾಹಿತಿ ನೀಡಿದ್ದಾರೆ.

Continue Reading

ಅಪರಾಧ

ಅಪರಾಧ ಕೃತ್ಯಗಳಲ್ಲಿ ತೊಡಗುವ ಪೊಲೀಸ್ ಸಿಬ್ಬಂದಿ ವಜಾಗೊಳಿಸುವುದೇ ಸೂಕ್ತ

Published

on

By

ಬೆಂಗಳೂರು ಜ ೨೦(ಯುಎನ್ ಐ) ಸಮಾಜ ವಿರೋಧಿ ಶಕ್ತಿಗಳೊಂದಿಗೆ ಗುರುತಿಸಿಕೊಂಡು ಅಪರಾಧ ಕೃತ್ಯಗಳಲ್ಲಿ ಶಾಮೀಲಾಗಿರುವ ಪೊಲೀಸರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
ನಗರದ ಚಾಮರಾಜಪೇಟೆಯ ಸಂಚಾರಿ ಪೊಲೀಸ್ ಠಾಣೆಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನಗರದ ಇಬ್ಬರು ಪೊಲೀಸ್ ಪೇದೆಗಳು ಗಾಂಜಾ ಮಾರಾಟ ಜಾಲದೊಂದಿಗೆ ಸಂಪರ್ಕ ಹೊಂದಿರುವುದಾಗಿ ದೂರುಗಳು ಕೇಳಿಬಂದಿದ್ದು, ಇಂತಹ ಕಾನೂನು ಬಾಹಿರ ಕೃತ್ಯಗಳನ್ನು ಸರ್ಕಾರ ಸಹಿಸುವುದಿಲ್ಲ ಎಂದುಅಸಮಧಾನವ್ಯಕ್ತಪಡಿಸಿದರು. ಕೆಲವೇ ಕೆಲವು ಪೊಲೀಸರು ಇಂತಹ ಕೃತ್ಯದಲ್ಲಿ ಶಾಮೀಲಾಗುವುದರಿಂದ ಇತರ ದಕ್ಷ ಸಿಬ್ಬಂದಿಯಲ್ಲಿ ನಂಬಿಕೆಯೇ ಇಲ್ಲದಂತಾಗುತ್ತದೆ ಎಂದರು.
ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದವರನ್ನು ಇಲಾಖೆಯಿಂದಲೇ ಶಾಶ್ವತವಾಗಿ ವಜಾ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. ಗಾಂಜಾ ಮಾರಾಟದಲ್ಲಿ ಭಾಗಿಯಾಗಿರುವ ಪೊಲೀಸರ ಕುರಿತು ಸಂಪೂರ್ಣ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Continue Reading

ಅಪರಾಧ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಗುಪ್ತಾಂಗಕ್ಕೆ ಚೂಪಾದ ವಸ್ತುಗಳಿಂದ ಗಾಯಗೊಳಿಸಿದ ಕಾಮುಕರು

Published

on

ಅಲ್ವಾರ್: ಜನೆವರಿ 13 (ಯು.ಎನ್.ಐ.) 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಕಾಮುಕರು ಆಕೆಯ ಗುಪ್ತಾಂಗಕ್ಕೆ ಚೂಪಾದ ವಸ್ತುಗಳನ್ನು ತುರುಕಿ ಗಂಭೀರವಾಗಿ ಗಾಯಗೊಳಿಸಿ ನಗರದ ಮೇಲ್ಸೇತುವೆಯಿಂದ ಎಸೆದಿರುವ ಅಮಾನವೀಯ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ.

ಅಲ್ವಾರ್‍ನ ತಿಜಾರಾ ಮೇಲ್ಸೇತುವೆಯ ಕೆಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಶೇಷ ಸಾಮಥ್ರ್ಯವುಳ್ಳ ಬಾಲಕಿಯನ್ನು ಅಲ್ವಾರ್‍ನ ಆಸ್ಪತ್ರೆಗೆ ದಾಖಲಿಸಲಾಯಿತು. ರಕ್ತಸ್ರಾವ ನಿಲ್ಲಿಸಲು ಅಲ್ಲಿನ ವೈದ್ಯರು ವಿಫಲರಾದ ಕಾರಣ ಬುಧವಾರ ಚಿಕಿತ್ಸೆಗಾಗಿ ಜೈಪುರದ ಜೆಕೆ ಲೋನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸುಮಾರು ಎರಡೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ನಂತರ, ಸಂತ್ರಸ್ತೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಾಹಿತಿಯ ಪ್ರಕಾರ, ಬಾಲಕಿಯ ಆಂತರಿಕ ಭಾಗವು ತೀವ್ರವಾಗಿ ಹಾನಿಗೊಳಗಾಗಿದ್ದು, ಪ್ರಸ್ತುತ ಆಕೆ ಜೆಕೆ ಲೋನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದಾರೆ.

Continue Reading
Advertisement
ದೇಶ22 mins ago

ಬಂಗಾಳ: ನೇತಾಜಿ ಜನ್ಮದಿನದಂದು ಲಾಠಿ ಚಾರ್ಜ್

ಕೋಲ್ಕತ್ತಾ: ಜನೆವರಿ 23 (ಯು.ಎನ್.ಐ.) ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಸಂದರ್ಭದಲ್ಲಿಯೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ರಾಜಕೀಯ ನಿಂತಿಲ್ಲ. ಪಶ್ಚಿಮ ಬಂಗಾಳದ...

ಅಂಕಣ1 hour ago

ದಟ್ಟ ಕಾಡಿನಲ್ಲಿ ʻಸಪ್ನೋಂ ಕೀ ರಾಣೀʼ

ಅಂಕಣ: ಒಂದೂರಲ್ಲಿ ಒಂದಿನ- 3 ಈ ಒಂದೂರು ಅನ್ನುವ ಮಾಯೆ ಇದೆಯಲ್ಲ, ಅದು ವಿಚಿತ್ರವಾದದ್ದು. ಅಪ್ಪ ಕಥೆ ಹೇಳುವಾಗ ಪ್ರತಿ ಸಲವೂ ಆ ಕಥೆ ಒಂದೂರಿನಲ್ಲಿ ಅಂತಲೇ...

ಕ್ರೀಡೆ2 hours ago

ಅಂಕುಶ್ ರಘುವಂಶಿ ಟೀಂ ಇಂಡಿಯಾದ ಉದಯೋನ್ಮುಖ ತಾರೆ!

ಹೊಸದಿಲ್ಲಿ: ಜನೆವರಿ 23 (ಯು.ಎನ್.ಐ.) ಅಂಡರ್ 19 ವರ್ಲ್ಡ್ ಕಪ್ ಮೂಲಕ ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಬ್ಬ ಉದಯೋನ್ಮುಖ ಆಟಗಾರ ದೊರೆತಿದ್ದಾರೆ. ಅವರೇ ದೆಹಲಿ ಮೂಲದ ಅಂಕುಶ್...

ಅಂಕಣ3 hours ago

ಎಳವೆಯಿಂದ ರಂಗಭೂಮಿ

ನಾದಾಂಕಣ – ಡಾ. ನಾ. ದಾಮೋದರ ಶೆಟ್ಟಿ ಭಾರತೀಯ ಹಾಗೂ ಗ್ರೀಕ್‌ ರಂಗಭೂಮಿಗೆ ಬಹುದೊಡ್ಡ ಪರಂಪರೆಇದೆ ಎನ್ನುವುದು ಸಾರ್ವಕಾಲಿಕ ಸತ್ಯ. ಆದರೆ ಯುರೋಪಿನ ರಂಗಭೂಮಿಯಾಗಲೀ ರಷ್ಯಾ, ಅಮೇರಿಕಾ...

ದೇಶ3 hours ago

ಅರುಣಾಚಲದಿಂದ ನಾಪತ್ತೆಯಾಗಿದ್ದ ಯುವಕ ಚೀನಾ ಗಡಿಯಲ್ಲಿ ಪತ್ತೆ!

ಹೊಸದಿಲ್ಲಿ: ಜನೆವರಿ 23 (ಯು.ಎನ್.ಐ.) ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ ಭಾರತೀಯ ಯುವಕ ಚೀನಾ ಗಡಿಯಲ್ಲಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಚೀನಾ ಸೈನಿಕರು ಭಾರತೀಯ ಯೋಧರಿಗೆ ಮಾಹಿತಿ ನೀಡಿದ್ದು,...

ಹಣಕಾಸು3 hours ago

ಕೆಲಸ ಬದಲಾಯಿಸಿದ್ದೀರಾ? ಚಿಂತೆ ಬಿಡಿ.. ನಿಮ್ಮ ನೆರವಿಗೆ ಇದೆ ಇಪಿಎಫ್ಒ!

ಬೆಂಗಳೂರು: ಜನೆವರಿ 23 (ಯು.ಎನ್.ಐ.) ಉತ್ತಮ ಸಂಬಳ, ಭದ್ರತೆಯುಳ್ಳ ನೌಕರಿ, ವಿಶೇಷ ಸವಲತ್ತುಗಳು.. ಹೀಗೆ ನಾನಾ ಉದ್ದೇಶಗಳಿಂದ ಉದ್ಯೋಗಿಗಳು ತಮ್ಮ ಕೆಲಸವನ್ನು ಬದಲಾಯಿಸುತ್ತಾ ಇರುತ್ತಾರೆ. ಇಂತಹ ಸಂದರ್ಭದಲ್ಲಿ...

ದೇಶ3 hours ago

ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ… ದೇಶಾದ್ಯಂತ ಪರಾಕ್ರಮ ದಿನವಾಗಿ ಆಚರಣೆ

ನವದೆಹಲಿ, ಜ ೨೩( ಯುಎನ್ ಐ) ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ೧೨೫ನೇ ಜನ್ಮಜಯಂತಿ ಇಂದು. ದೇಶಾದ್ಯಂತ ಪರಾಕ್ರಮ ದಿನವಾಗಿ ನೇತಾಜಿ...

ಕರ್ನಾಟಕ4 hours ago

ಇಡೀ ವರ್ಷ ಸುಭಾಷ್ ಚಂದ್ರಬೋಸ್ ಜನ್ಮದಿನಾಚರಣೆಗೆ ತೀರ್ಮಾನ: ಸಿಎಂ

ಬೆಂಗಳೂರು : ಜನೆವರಿ 23 (ಯು.ಎನ್.ಐ.) ರಾಜ್ಯ ಸರ್ಕಾರದ ವತಿಯಿಂದ ವರ್ಷವಿಡೀ ನೇತಾಜಿ ಸುಭಾಷ್ ಚಂದ್ರಬೋಸ್ ರವರ 125ನೇ ಜನ್ಮ ದಿನಾಚರಣೆಯನ್ನ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ...

ಅಂಕಣ4 hours ago

ಸ್ವಾತಂತ್ರ್ಯಕ್ಕಿಂತ ದೊಡ್ಡದು ಇನ್ಯಾವುದಿದೆ ?

‌ಅಂಕಣ: ದಿಟನುಡಿ -೩ ಕಳೆದ ವಾರ ನನ್ನ ಕೈರೋಪ್ರಾಕ್ಟರ್ ರೇ ಬಳಿ ಹೋಗಿದ್ದೆ. ಏಕೋ ಗೊತ್ತಿಲ್ಲ ಕೆಲ ದಿನಗಳ ಹಿಂದೆ ಸೊಂಟ ಹಿಡಿದಿತ್ತು. ಏಳಲು, ಕೂರಲು, ನಿಲ್ಲಲು...

ದೇಶ4 hours ago

ಪಂಜಾಬ್ ಚುನಾವಣೆ: ಕೆಂಪು ಕೋಟೆ ಹಿಂಸಾಚಾರದ ಆರೋಪಿಗೆ ರೈತ ಸಂಘಟನೆಯಿಂದ ಟಿಕೆಟ್!

ಚಂಡೀಗಢ: ಜನೆವರಿ 23 (ಯು.ಎನ್.ಐ.) ರೈತರ ಸಂಘಟನೆ ಯುನೈಟೆಡ್ ಸಮಾಜ ಮೋರ್ಚಾ ಪಂಜಾಬ್ ವಿಧಾನಸಭಾ ಚುನಾವಣೆಗೆ 35 ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಾಜಿ...

ಟ್ರೆಂಡಿಂಗ್

Share