Connect with us


      
ಸಿನೆಮಾ

ಸಂಡೆ ಧಮಾಕಾ: ಕೆಜಿಎಫ್​ 2’ ಟ್ರೇಲರ್ ರಿಲೀಸ್‌ಗೆ ಕೌಂಟ್​ಡೌನ್​

Iranna Anchatageri

Published

on

ಬೆಂಗಳೂರು: ಮಾರ್ಚ್ 27 (ಯು.ಎನ್.ಐ.) ಕರ್ನಾಟಕದಲ್ಲಿ ಅಷ್ಟೇ ಅಲ್ಲ… ವರ್ಲ್ಡ್ ಫಿಲಂ ದುನಿಯಾದಲ್ಲೇ ಕೆಜಿಎಫ್-2 ಚಿತ್ರ ತೀವ್ರ ಕುತೂಹಲ ಹುಟ್ಟು ಹಾಕಿದೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2 ಚಿತ್ರವನ್ನು ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ರಾಕಿಂಗ್​ ಸ್ಟಾರ್ ಯಶ್​ ಅಭಿನಯದ ‘ಕೆಜಿಎಫ್​ 2’ ಚಿತ್ರದ ಟ್ರೇಲರ್ ಇಂದು ರಿಲೀಸ್ ಆಗಲಿದೆ.

ಅಭಿಮಾನಿಗಳಲ್ಲಿ ಸಿನಿಮಾದ ಟ್ರೇಲರ್ ಹೇಗಿರಲಿದೆ ಅನ್ನೋದು ಕಾತರ ಹೆಚ್ಚಾಗಿದ್ದು, ಸಂಜೆ 6:40ಕ್ಕೆ ಚಿತ್ರದ ಟ್ರೈಲರ್ ಲಾಂಚ್ ಆಗಲಿದೆ. ರಿಲೀಸ್ ಆಗಲಿರುವ ಟ್ರೇಲರ್ ನಿಂದ ಸಿನಿಮಾ ಹೇಗಿರಲಿದೆ ಅನ್ನೋ ಸಣ್ಣ ಸುಳಿವು​ ದೊರೆಯಲಿದೆ. ಬೆಂಗಳೂರಿನಲ್ಲಿ ನಡೆಯುವ ಟ್ರೇಲರ್ ರಿಲೀಸ್​ ಕಾರ್ಯಕ್ರಮವನ್ನು ಬಾಲಿವುಡ್​ನ ಖ್ಯಾತ ನಿರೂಪಕ ಹಾಗೂ ನಿರ್ಮಾಪಕ ಕರಣ್​ ಜೋಹರ್ ನಡೆಸಿಕೊಡಲಿದ್ದಾರೆ ಅನ್ನೋದು ವಿಶೇಷ.

ಪ್ರಶಾಂತ್ ನೀಲ್ ನಿರ್ದೇಶನದ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈಗಾಗಲೇ ‘ಕೆಜಿಎಫ್​’ ನ ಮೊದಲ ಚಾಪ್ಟರ್ ಮೂಲಕ ತಮ್ಮ ಕೆಲಸ ಏನು ಅನ್ನೋದನ್ನು ಅವರು ತೋರಿಸಿ ಕೊಟ್ಟಿದ್ದಾರೆ. ಆದರೆ, ‘ಕೆಜಿಎಫ್​ 2’ ಕಣ್ತುಂಬಿಕೊಳ್ಳೋಕೆ ಏಪ್ರಿಲ್ 14ರವರೆಗೆ ಅಭಿಮಾನಿಗಳು ಕಾಯಬೇಕಿದೆ. ಇತ್ತೀಚೆಗೆ ರಿಲೀಸ್ ಆದ ಸಿನಿಮಾದ ‘ತೂಫಾನ್​..’ ಹಾಡು ಅಭಿಮಾನಿಗಳಿಗೆ ರಸದೌತಣ ಉಣಬಡಿಸಿತ್ತು. ಇಂದು ರಿಲೀಸ್ ಆಗುವ ಟ್ರೇಲರ್ ಕೂಡ ಗ್ರ್ಯಾಂಡ್​ ಆಗಿರಲಿದೆ ಎಂಬ ನಿರೀಕ್ಷೆ ಇದೆ.

ಬೆಂಗಳೂರಿನ ಒರಾಯನ್​ ಮಾಲ್​ನಲ್ಲಿರುವ ಪಿವಿಆರ್​ ಥಿಯೇಟರ್​ನಲ್ಲಿ ‘ಕೆಜಿಎಫ್​ 2’ ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ. ನಟ ಶಿವರಾಜ್​ಕುಮಾರ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಕರಣ್ ಅವರು ಕಾರ್ಯಕ್ರಮದ ನಿರೂಪಣೆ ಮಾಡಲಿದ್ದು, ಚಿತ್ರದ ಹೀರೋ ಯಶ್​, ನಾಯಕಿ ಶ್ರೀನಿಧಿ ಶೆಟ್ಟಿ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

Share