Connect with us


      
ಪ್ರವಾಸ

ಭಾರತದ 5 ಸುಂದರ ಕಣಿವೆಗಳು; ಸ್ವರ್ಗಕ್ಕಿಂತ ಕಡಿಮೆ ಏನಿಲ್ಲ!

Published

on

ಹೊಸದಿಲ್ಲಿ : ಜನೆವರಿ 15 (ಯು.ಎನ್.ಐ.) ಜನೆವರಿ 25ರಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನ. ಜಮ್ಮು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತದಲ್ಲಿ ಅನೇಕ ಪ್ರಸಿದ್ಧ ಪ್ರವಾಸಿ ಸ್ಥಳಗಳಿವೆ. ಭಾರತದ ಸಂಸ್ಕೃತಿ ವೈಭವವನ್ನು ಬಿಂಬಿಸುವ ಅನೇಕ ಸುಂದರ ತಾಣಗಳಿವೆ. ಆದರೆ ಭಾರತದ ನೈಸರ್ಗಿಕ ಸೌಂದರ್ಯವು ವಿದೇಶಿ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಣೆ ಮಾಡುತ್ತದೆ. ಸುಂದರವಾದ ಬೆಟ್ಟ, ಕಣಿವೆ, ಸರೋವರ, ನೈಸರ್ಗಿಕ ಔಷಧಗಳು ಮತ್ತು ಗಿಡಮೂಲಿಕೆಗಳಿಂದ ತುಂಬಿರುವ ಕಾಡುಗಳಿವೆ, ಅಲ್ಲದೆ ಮನಸ್ಸಿಗೆ ಶಾಂತಿ ನೀಡುವ, ಮನರಂಜನೆ ನೀಡುವ ಸುಂದರವಾದ ಸಮುದ್ರ ತೀರಗಳಿವೆ.

ವಿದೇಶಗಳಲ್ಲಿ ಭಾರತವು ನೈಸರ್ಗಿಕ ಸೌಂದರ್ಯದ ನಾಡು ಎಂದು ಪ್ರಸಿದ್ಧವಾಗಿದೆ. ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಸಂದರ್ಭದಲ್ಲಿ ದೇಶದ ಅತ್ಯಂತ ಸುಂದರವಾದ ಕಣಿವೆಗಳ ಮೇಲೆ ಈ ವರದಿ ಬೆಳಕು ಚೆಲ್ಲಲಿದೆ. ಇಲ್ಲಿ ಪ್ರತಿಯೊಬ್ಬರೂ ಒಮ್ಮೆ ಭೇಟಿ ನೀಡಬೇಕು. ಹಸಿರು ಕಾಡು, ಸುಂದರವಾದ ಕಣಿವೆ, ಭವ್ಯವಾದ ಸರೋವರ ಮತ್ತು ನದಿಗಳು ಈ ಬಯಲು ಪ್ರದೇಶಗಳಲ್ಲಿವೆ.

ಹಿಮಾಚಲ ಪ್ರದೇಶದ ಪಬ್ಬರ್ ಕಣಿವೆ
ಹಿಮಾಚಲ ಪ್ರದೇಶವು ಅನೇಕ ಪ್ರಸಿದ್ಧ ಕಣಿವೆಗಳಿಂದ ಆವೃತವಾದ ರಾಜ್ಯ. ಇದರಲ್ಲಿ ಪಬ್ಬರ್ ಕಣಿವೆ ಅತ್ಯಂತ ಜನಪ್ರಿಯ ಹಾಗೂ ಪ್ರಸಿದ್ಧಿ ಪಡೆದಿದೆ. ಪಬ್ಬರ್ ಕಣಿವೆಯ ಸುಂದರ ನೋಟವು ಮನಸೂರೆಗೊಳ್ಳುವಂತೆ ಮಾಡುತ್ತದೆ. ಇಲ್ಲಿ ಸುತ್ತಲೂ ಪರ್ವತಗಳು, ದಟ್ಟವಾದ ಕಾಡಿನ ಹಸಿರು, ಹಿಮದಿಂದ ಆವೃತವಾದ ಶಿಖರಗಳು, ಸೂರ್ಯನ ತೇಜಸ್ಸಿನಿಂದ ಹೊಳೆಯುವ ಪರ್ವತಗಳು ಅದ್ಭುತವಾಗಿ ಕಾಣುತ್ತವೆ. ಒಂದು ವೇಳೆ ನೀವು ಸಾಹಸಿ ಯಾತ್ರಿಗಳಾಗಿದ್ದರೆ, ಈ ಸ್ಥಳವು ನಿಮಗೆ ಸರ್ವೋತ್ತಮ. ಪರ್ವತಗಳ ಎತ್ತರದಿಂದ ಬೀಳುವ ಜಲಪಾತಗಳು ಮತ್ತು ಹರಿಯುವ ನದಿಗಳ ಶಬ್ದವು ಕಿವಿಗೆ ಇಂಪು ನೀಡುತ್ತದೆ.  ಉತ್ತಮ ಅನುಭವ ನೀಡುತ್ತದೆ.

ಅರುಣಾಚಲದ ಜಿರೋ ವ್ಯಾಲಿ
ಅರುಣಾಚಲ ಪ್ರದೇಶದಲ್ಲಿ ನೆಲೆಗೊಂಡಿರುವ ಜಿರೋ ವ್ಯಾಲಿಯ ಹೆಸರನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಘೋಷಿಸಿದೆ. ಈ ಕಣಿವೆಯ ನೈಸರ್ಗಿಕ ಸೌಂದರ್ಯವು ಪ್ರಸಿದ್ಧವಾಗಿದೆ. ವಿಶೇಷವೆಂದರೆ ಪ್ರವಾಸಿಗರು ವರ್ಷವಿಡೀ ಯಾವಾಗ ಬೇಕಾದರೂ ಝಿರೋ ವ್ಯಾಲಿಗೆ ಭೇಟಿ ನೀಡಬಹುದು. ಇಲ್ಲಿನ ವಾತಾವರಣ ಹೆಚ್ಚು ಚಳಿಯಿಲ್ಲದ ಕಾರಣ ಇಲ್ಲಿ ತಿರುಗಾಡಲು ನಿರ್ಬಂಧವಿಲ್ಲ. ಝಿರೋ ವ್ಯಾಲಿಯಲ್ಲಿ, ಟ್ಯಾಲಿ ವ್ಯಾಲಿ ವನ್ಯಜೀವಿ ಅಭಯಾರಣ್ಯ, ಮೇಘನಾ ಗುಹೆ ದೇವಾಲಯ, ಕೈಲ್ ಪಾಖೋ, ಮಿಡಿ ಮುಂತಾದ ಸುಂದರವಾದ ಸ್ಥಳಗಳನ್ನು ಕಾಣಬಹುದು.


ಕರ್ನಾಟಕದ ಶರಾವತಿ ಕಣಿವೆ
ಕರ್ನಾಟಕ ರಾಜ್ಯದಲ್ಲಿ ಭೇಟಿ ನೀಡಲು ಸುಂದರವಾದ ಸ್ಥಳ ಶರಾವತಿ ಕಣಿವೆ ಶಿವಮೊಗ್ಗ ಜಿಲ್ಲೆಯಲ್ಲಿದೆ. ಈ ಕಣಿವೆಯಲ್ಲಿರುವ ಜಲಪಾತಗಳು ಮತ್ತು ಎಲೆಯುದುರುವ ಮರಗಳು ಪರಿಸರದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಪ್ರವಾಸಿಗರು ಶರಾವತಿ ಕಣಿವೆಯಲ್ಲಿ ಕರಡಿ, ಹುಲಿ, ನರಿ, ಜಿಂಕೆ ​​ಸೇರಿದಂತೆ ಅನೇಕ ವನ್ಯಜೀವಿಗಳನ್ನು ಕಾಣಬಹುದು. ಶರಾವತಿ ನದಿಯು ಕಣಿವೆಯ ಪ್ರದೇಶದಲ್ಲಿ ಹರಿಯುತ್ತದೆ, ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಅಕ್ಟೋಬರ್‌ನಿಂದ ಫೆಬ್ರವರಿ.


ಕಾಶ್ಮೀರ ಕಣಿವೆ
ಕಾಶ್ಮೀರವನ್ನು ಭೂಮಿಯ ಮೇಲಿನ ಸ್ವರ್ಗ ಎನ್ನುತ್ತಾರೆ. ಪರ್ವತ, ಕಣಿವೆ ಮತ್ತು ಸರೋವರಗಳ ಸಂಗಮವನ್ನು ಕಾಣಶಬೇಕಾದರೆ ಕಾಶ್ಮೀರಕ್ಕೆ ಭೇಟಿ ನೀಡಲೇಬೇಕು. ಕಾಶ್ಮೀರ ಕಣಿವೆಯು ಕಾರಕೋರಂ ಮತ್ತು ಪಿರ್ ಪಂಜಾಲ್ ಶ್ರೇಣಿಗಳ ನಡುವೆ ಇದೆ. ಇಲ್ಲಿ ನೈಸರ್ಗಿಕ ಸೌಂದರ್ಯ ಮತ್ತು ಶಾಂತ ವಾತಾವರಣವನ್ನು ಅನುಭವಿಸಲು ಬೇರೆಲ್ಲೂ ಸಾಧ್ಯವಿಲ್ಲ.


ಹಿಮಾಚಲ, ಹೂಗಳ ಕಣಿವೆ
ಹಿಮಾಚಲದ ಅನೇಕ ಸುಂದರ ಕಣಿವೆಗಳಲ್ಲಿ ಒಂದು ಹೂಗಳ ಕಣಿವೆ ಇದೆ. ಈ ಕಣಿವೆಯನ್ನು ಹಿಮಾಚಲದ ಅತ್ಯಂತ ಜನಪ್ರಿಯ ಪ್ರವಾಸಿ ತಾಣವೆಂದು ಪರಿಗಣಿಸಲಾಗಿದೆ. ಇಲ್ಲಿ 300 ಕ್ಕೂ ಹೆಚ್ಚು ಜಾತಿಯ ಕಾಡು ಹೂವುಗಳಿವೆ, ಅದರ ಸೌಂದರ್ಯ ಮತ್ತು ಸುಗಂಧವು ಇಡೀ ಕಣಿವೆಯನ್ನು ಮೆತ್ತಿಕೊಳ್ಳುತ್ತದೆ. ಈ ದೃಶ್ಯವನ್ನು ಸವಿಯಲು ಪ್ರಪಂಚದಾದ್ಯಂತ ಜನರು ಬರುತ್ತಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement
ದೇಶ8 mins ago

ದಲಿತ ನಾಯಕ ರೋಹಿತ್ ಮೇಮುಲ ಪ್ರತಿರೋಧದ ಸಂಕೇತ: ರಾಹುಲ್ ಗಾಂಧಿ

ನವದೆಹಲಿ: ಜನೆವರಿ 17 (ಯು.ಎನ್.ಐ.) ದಲಿತ ನಾಯಕ ರೋಹಿತ್ ಮೇಮುಲ ಪ್ರತಿರೋಧದ ನಾಯಕ ಮತ್ತು ಸಂಕೇತ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. ರೋಹಿತ್ ವೇಮುಲಾ...

ಕರ್ನಾಟಕ36 mins ago

ಬೆಂಗಳೂರಲ್ಲಿ ಆತಂಕ ಹೆಚ್ಚಿಸಿದ ಒಮೈಕ್ರಾನ್!

ಬೆಂಗಳೂರು: ಜನೆವರಿ 17 (ಯು.ಎನ್.ಐ) ರಾಜಧಾನಿ ಬೆಂಗಳೂರಲ್ಲಿ ಒಂದೇ ದಿನ ಬರೋಬ್ಬರಿ 287 ಒಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯ ಸರ್ಕಾರ ತೀವ್ರ ನಿಗಾದ ಮಧ್ಯೆಯೇ ಒಮೈಕ್ರಾನ್ ಪ್ರಕರಣಗಳು...

ದೇಶ49 mins ago

ಪಂಜಾಬ್ ಚುನಾವಣಾ ದಿನಾಂಕ ಮುಂದೂಡಿಕೆ

ಚಂಡೀಗಢ: ಜನೆವರಿ 17 (ಯು.ಎನ್.ಐ.) ಪಂಜಾಬ್‌ನಲ್ಲಿ ಫೆಬ್ರವರಿ 20ರಂದು ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಇಂದು ತಿಳಿಸಿದೆ. ಗುರು ರವಿದಾಸ್ ಜಯಂತಿ ಆಚರಣೆಗೆ ಅನುಕೂಲ...

ದೇಶ50 mins ago

ದೇಶವನ್ನು ಕೊರೋನಾ ಮುಕ್ತಗೊಳಿಸಲು ಪಣ ತೊಡೋಣ; ಕೇಜ್ರಿವಾಲ್

ನವದೆಹಲಿ: ಜನೆವರಿ 17 (ಯು.ಎನ್.ಐ.) ಸಾಂಕ್ರಾಮಿಕ ರೋಗವಾದ ಕೋವಿಡ್ -೧೯ ಪರಿಸ್ಥಿತಿಯನ್ನು ಆಪಾದನೆ ಮಾಡುತ್ತಾ ಕುಳಿತುಕೊಂಡರೆ ಯಾವುದೇ ಪ್ರಯೋಜನವಿಲ್ಲ. ಇಡೀ ದೇಶದಿಂದ ತೊಡೆದುಹಾಕು ಪಣ ತೊಡಬೇಕು ಎಂದು...

ಸಿನೆಮಾ1 hour ago

ಹಿಂದಿಯಲ್ಲಿ ತೆರೆ ಕಾಣುತ್ತಿದೆ ಅಲ್ಲು ಅರ್ಜುನ್‌ ಅಭಿನಯದ ‘ಅಲಾ ವೈಕುಂಠಪುರಮುಲು’

ಹೈದರಾಬಾದ್: ಜನೆವರಿ 17 (ಯು.ಎನ್.ಐ.) ಇದೀಗ ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ದಿ ರೈಸ್ ಸಿನಿಮಾದ ಯಶಸ್ಸಿನಲ್ಲಿದ್ದಾರೆ. ಮತ್ತೊಂದು ಸಂತೋಷದ ವಿಚಾರವೆಂದರೆ ಅಲ್ಲು ಅರ್ಜುನ್‌...

ದೇಶ1 hour ago

ಮೂವರು ಪಿಎಲ್ ಎಫ್ ಐ ಸಂಘಟನೆ ನಕ್ಸಲರ ಬಂಧನ

ಖುಂಟಿ: ಜನೆವರಿ 17 (ಯು.ಎನ್.ಐ.) ನಿಷೇಧಿತ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (ಪಿಎಲ್ ಎಫ್‌ಐ) ಸಂಘಟನೆಗೆ ಸೇರಿದ 14 ವರ್ಷದ ಅಪ್ರಾಪ್ತ ಸೇರಿದಂತೆ ಮೂವರು ಮೂವರು...

ದೇಶ1 hour ago

ಪದ್ಮಶ್ರೀ ಪುರಸ್ಕೃತೆ, ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ನಿಧನ: ಮೋದಿ ಸಂತಾಪ

ರಾಯಗಡ: ಜನೆವರಿ ೧೭ (ಯು.ಎನ್.ಐ.) ಪದ್ಮಶ್ರೀ ಪುರಸ್ಕೃತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ಭಾನುವಾರ ರಾತ್ರಿ ಒಡಿಶಾದ ರಾಯಗಡ ಜಿಲ್ಲೆಯ ಗುಣಪುರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ....

ಕರ್ನಾಟಕ2 hours ago

ಪಿಎಂಎಫ್ಎಂಇ ಯೋಜನೆಗೆ ಶೇ.15 ರಷ್ಟು ರಾಜ್ಯದಿಂದ ಹೆಚ್ಚುವರಿ ಸಹಾಯಧನ

ಬೆಂಗಳೂರು: ಜನೆವರಿ 17 (ಯು.ಎನ್.ಐ.)ರೈತರಿಗೆ ಬಲತುಂಬಲು ರಾಜ್ಯ ಸರ್ಕಾರ ಕೇಂದ್ರದ ಆತ್ಮ ನಿರ್ಭರ ಭಾರತ ಅಭಿಯಾನ (ಪಿಎಂಎಫ್ಎಂಇ) ಯೋಜನೆಗೆ ಸಹಾಯಧನವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಪಿಎಂಎಫ್ಎಂಇ ಯೋಜನೆಗೆ...

ಬೆಂಗಳೂರು2 hours ago

ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ಕೋವಿಡ್

ಬೆಂಗಳೂರು, ಜ ೧೭(ಯುಎನ್ ಐ) ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕಳೆದ ನಾಲ್ಕೈದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆಆರ್ ಟಿ...

ದೇಶ2 hours ago

ಉಪಯುಕ್ತ ಮಾಹಿತಿ ; 5 ಸಾವಿರ ಅಲ್ಲ, ಕೇವಲ ₹260 ರಲ್ಲಿ ಒಮೈಕ್ರಾನ್ ಪತ್ತೆ ಹಚ್ಚಿ!

ಬೆಂಗಳೂರು : ಜನೆವರಿ 17 (ಯು.ಎನ್.ಐ.) ಪ್ರತಿ ದಿನ ಒಮೈಕ್ರಾನ್ ಸೋಂಕು ದೇಶದಲ್ಲಿ ವೇಗವಾಗಿ ಹರಡಲಾರಂಭಿಸಿದೆ. ಕೊರೊನಾ ರೂಪಾಂತರಗಳಿಗಿಂತ ಒಮೈಕ್ರಾನ್ ಹೆಚ್ಚು ಸಾಂಕ್ರಾಮಿಕವಾಗಿದ್ದು, ಜೀನೋಮ್ ಸೀಕ್ವೆನ್ಸಿಂಗ್ ಟೆಸ್ಟ್‌ನೊಂದಿಗೆ...

ಟ್ರೆಂಡಿಂಗ್

Share