Connect with us


      
ದೇಶ

ಲಷ್ಕರ್-ಎ-ತೊಯ್ಬಾದ ಕಮಾಂಡರ್ ಸಲೀಂ ಪರ್ರೆ ಸೇರಿದಂತೆ ಇಬ್ಬರ ಹತ್ಯೆ

Vanitha Jain

Published

on

ಶ್ರೀನಗರ: ಜನವರಿ 03(ಯು.ಎನ್.ಐ) ಕಾಶ್ಮೀರದಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಹತರಾದ ಇಬ್ಬರು ಭಯೋತ್ಪಾದಕರ ಪೈಕಿ ಲಷ್ಕರ್-ಎ-ತೊಯ್ಬಾದ ಕಮಾಂಡರ್ ಸಲೀಂ ಪರ್ರೆ ಕೂಡ ಸೇರಿದ್ದಾರೆ ಎಂದು ಭದ್ರತಾ ಪಡೆಗಳು ತಿಳಿಸಿವೆ.

ಹಿರಿಯ ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ಮಾತನಾಡಿ, ಎಲ್‍ಇಟಿಯ ಉನ್ನತ ಕಮಾಂಡರ್ ಸಲೀಂ ಪರ್ರೆ ಹತ್ಯೆಯು ಪೆÇಲೀಸರಿಗೆ ಸಂದ ದೊಡ್ಡ ಯಶಸ್ಸು. ಈತ 2016ರಲ್ಲಿ 12 ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ಹೇಳಿದ್ದಾರೆ.

“ಶ್ರೀನಗರ ಪೊಲೀಸರು ಸಲೀಂ ಪರ್ರೆಯ ಗುಂಡು ಹಾರಿಸಿದರು. ನಂತರದ ಪ್ರತೀಕಾರದ ಗುಂಡಿನ ದಾಳಿಯಲ್ಲಿ ಪರ್ರೆ ಹತ್ಯೆಯಾದನು. 2016ರಲ್ಲಿ, ಸಲೀಮ್ ಪರ್ರೆ 12 ನಾಗರಿಕರನ್ನು ಕತ್ತು ಸೀಳಿ ಕೊಂದಿದ್ದನು ಎಂದು ಹೇಳಿದರು.

ಬಂಡಿಪೊರಾ ಜಿಲ್ಲೆಯ ಹಜನ್ ಪ್ರದೇಶದ ನಿವಾಸಿಯಾದ ಪರ್ರೆ, ಎ+ ವರ್ಗದ ಭಯೋತ್ಪಾದಕನಾಗಿದ್ದನು ಮತ್ತು ಭದ್ರತಾ ಪಡೆಗಳ ಮೋಸ್ಟ್ ವಾಂಟೆಡ್” ಪಟ್ಟಿಯಲ್ಲಿದ್ದನು.

ಶ್ರೀನಗರದ ಪ್ರದೇಶದಲ್ಲಿ ನಡೆದ ಪ್ರತ್ಯೇಕ ಎನ್‍ಕೌಂಟರ್‍ನಲ್ಲಿ ಮತ್ತೊಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ. 01 #ಭಯೋತ್ಪಾದಕನನ್ನು ಕೊಲ್ಲಲಾಯಿತು. #ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಸೇರಿದಂತೆ ದೋಷಾರೋಪಣೆಯ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಹುಡುಕಾಟ ನಡೆಯುತ್ತಿದೆ. ಹೆಚ್ಚಿನ ವಿವರಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.

Share