Published
6 months agoon
By
Vanitha Jainಕಾಬ್ರಿ: ಜನೆವರಿ 05 (ಯು.ಎನ್.ಐ) ಥಾಯ್ಲೆಂಡ್ನ ಕ್ರಾಬಿ ಪ್ರಾಂತ್ಯದಲ್ಲಿ ಮಾಯಾ ಕೊಲ್ಲಿಯನ್ನು ಸತತ ಮೂರು ವರ್ಷಗಳ ನಂತರ ಪ್ರವಾಸಿಗರಿಗೆ ಪ್ರವೇಶ ಮುಕ್ತಗೊಳಿಸಲಾಗಿದೆ.
ಪ್ರವಾಸೋದ್ಯಮದ ಪ್ರಭಾವದಿಂದ ಅದರ ಪರಿಸರ ವ್ಯವಸ್ಥೆಯು ಸಂಪೂರ್ಣ ಹದಗೆಟ್ಟಿತ್ತು. ಅದನ್ನು ಪುನಃ ಸ್ಥಾಪಿಸುವ ಸಲುವಾಗಿ ಮೂರು ವರ್ಷಗಳ ಕಾಲ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು.
ಲಿಯೊನಾರ್ಡೊ ಡಿಕಾಪ್ರಿಯೊ ನಟಿಸಿದ 2000ರ ಚಲನಚಿತ್ರ “ದಿ ಬೀಚ್” ನಿಂದ ಪ್ರಸಿದ್ಧವಾದ ಬಿಳಿ ಮರಳಿನ ಸಮುದ್ರ ಹಾಳಾಗಿತ್ತು. ಈ ಹಿಂದಿನ ಪ್ರಕೃತಿ ಸೌಂದರ್ಯವನ್ನು ಮರುಕಳಿಸಲು ಪ್ರವಾಸೋದ್ಯಮ ಇಲಾಖೆ ಈ ನಿರ್ಧಾರ ತೆಗೆದುಕೊಂಡಿತ್ತು. ಪ್ರತಿದಿನ ಸಾವಿರಾರು ಸಂದರ್ಶಕರ ಪ್ರಭಾವದಿಂದ ಅದರ ಪರಿಸರ ವ್ಯವಸ್ಥೆಯು ಚೇತರಿಸಿಕೊಳ್ಳಲು ಮಾಯಾ ಕೊಲ್ಲಿಯನ್ನು ಮುಚ್ಚಲಾಯಿತು
100 ಮೀಟರ್ ಎತ್ತರದ ಬಂಡೆಗಳಿಂದ ಆವೃತವಾಗಿರುವ ಈ ಕಡಲತೀರವು ಅಂಡಮಾನ್ ಸಮುದ್ರದ ಫಿ ಫಿ ಲೆಹ್ ದ್ವೀಪದಲ್ಲಿದೆ ಮತ್ತು ಫುಕೆಟ್ ಅಥವಾ ಫಿ ಫಿ ಅಥವಾ ಮುಖ್ಯ ಭೂಭಾಗದಂತಹ ಹತ್ತಿರದ ಸ್ಥಳಗಳಿಂದ ದೋಣಿಗಳ ಮೂಲಕ ಮಾತ್ರ ಪ್ರವೇಶಿಸಬಹುದು.
ನಿರಂತರ ಪ್ರವಾಸಿ ಚಟುವಟಿಕೆಗಳಿಂದ ಹವಳದ ಬಂಡೆಗಳು ಮತ್ತು ಕಡಲತೀರದ ಪ್ರದೇಶಗಳು ಹಾನಿಗೊಳಗಾಗಿವೆ ಎಂದು ಹೇಳುವ ಮೂಲಕ ಅಧಿಕಾರಿಗಳು 2018ರಲ್ಲಿ ಸಂಪೂರ್ಣ ಮಾಯಾ ಕೊಲ್ಲಿಯನ್ನು ಸಾರ್ವಜನಿಕರಿಗೆ ಮುಚ್ಚಿದರು. ಆದರೆ ಈ ವರ್ಷದ ಆರಂಭದಿಂದ ಕೆಲವು ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ.
“ಶಾರ್ಕ್ಗಳು ಮರಳಿವೆ, ಹವಳದ ಬಂಡೆಗಳು ಮತ್ತೆ ಬೆಳೆಯುತ್ತಿವೆ ಮತ್ತು ನೀರು ಮತ್ತೆ ಶುದ್ಧವಾಗಿದೆ ಎಂದು ಥೈಲ್ಯಾಂಡ್ನ ಪ್ರವಾಸೋದ್ಯಮ ಪ್ರಾಧಿಕಾರದ ಗವರ್ನರ್ ಯುಥಾಸಾಕ್ ಸುಪಾಸೋರ್ನ್ ತಿಳಿಸಿದರು.
“ನಾವು ಸಮಯವನ್ನು ನೀಡಿದರೆ ಪ್ರಕೃತಿಯನ್ನು ಸುಂದರಗೊಳಿಸಬಹುದು. ಆದರೆ ಅದರ ಸ್ಥಿತಿಯನ್ನು ಹಾಳಾಗದಂತೆ ಉಳಿಸಿಕೊಳ್ಳುವುದು ಮುಖ್ಯ, ಆ ನಿಟ್ಟಿನಲ್ಲಿ ನಮ್ಮ ಕೆಲಸ ಕಾರ್ಯಗಳಿರಬೇಕು ಎಂದು ಹೇಳಿದರು.
ಇದು ಸಂರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು, ಒಂದೇ ಬಾರಿಗೆ 375 ಸಂದರ್ಶಕರಿಗೆ ಮಾತ್ರ ಭೇಟಿ ನೀಡಲು ಅನುಮತಿಸಲಾಗುವುದು ಮತ್ತು ಸದ್ಯಕ್ಕೆ ಈಜುವುದನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹವಳದ ದಿಬ್ಬಗಳಿಗೆ ಹಾನಿಯಾಗುವುದನ್ನು ತಪ್ಪಿಸಲು ಕೊಲ್ಲಿಯ ಹಿಂಭಾಗದಲ್ಲಿ ಗೊತ್ತುಪಡಿಸಿದ ಸ್ಥಳದಲ್ಲಿ ಮಾತ್ರ ದೋಣಿಗಳಿಗೆ ಅನುಮತಿ ನೀಡಲಾಗುವುದು ಎಂದು ಅವರು ಹೇಳಿದರು.
46 ವಲಸಿಗರ ಮೃತದೇಹ ಪತ್ತೆ; ಮಾನವ ಕಳ್ಳಸಾಗಣಿಕೆ ಶಂಕೆ
ಸ್ಕೂಟರ್ ನಲ್ಲಿ ಹೋಗ್ತಿದ್ದಾಗ ತಲೆ ಮೇಲೆ ಬಿದ್ದ ತೆಂಗಿನಕಾಯಿ; ಹೆಲ್ಮೆಟ್ ನಿಂದ ಉಳಿದ ಜೀವ
ಶ್ರೀಲಂಕಾ ಬಿಕ್ಕಟ್ಟು: ಶಾಲಾ ಕಾಲೇಜುಗಳು ಬಂದ್, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ
ದಕ್ಷಿಣ ಆಫ್ರಿಕಾದ ನೈಟ್ಕ್ಲಬ್ನಲ್ಲಿ 17 ಮಂದಿ ಶವವಾಗಿ ಪತ್ತೆ!
ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜರ್ಮನಿಗೆ ಆಗಮಿಸಿದ ಪ್ರಧಾನಿ ಮೋದಿ
ಶ್ರೀಲಂಕಾಕ್ಕೆ ನೆರವು ನೀಡಲು ರಷ್ಯಾ ಸಿದ್ಧ: ಸಿರಿಸೇನಾ