Connect with us


      




ಕೃಷಿ

ನಕಲಿ ಬೀಜ ಹಾವಳಿ ಬಗ್ಗೆ ನಿಗಾ : ಮುಖ್ಯಮಂತ್ರಿ ಬೊಮ್ಮಾಯಿ

Iranna Anchatageri

Published

on

ಬೆಂಗಳೂರು: ಮೇ 08 (ಯು.ಎನ್.ಐ.) ನಕಲಿ ಬೀಜದ ಹಾವಳಿ ಬಗ್ಗೆ ನಿಗಾವಹಿಸಿಲು ಹಾಗೂ ಬೀಜಗಳ ಉತ್ಪಾದನೆಯ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಶ್ವಬ್ಯಾಂಕ್ ನೆರವಿನ ರಾಷ್ಟ್ರಮಟ್ಟದ “ರಿವಾರ್ಡ್”ಯೋಜನೆ, ಜಲಾನಯನ ಉತ್ಕೃಷತಾ (CoE) ಉದ್ಘಾಟನೆ ಮತ್ತು ಎಫ್ಪಿ.ಎಂ. ಗಳ ಏಕರೂಪ ಬ್ರಾಂಡಿಂಗ್ ಸ್ಪರ್ಧೆಯ ಅನಾವರಣ ಹಾಗೂ ಅತ್ಯುತ್ತಮ ರೈತ ಉತ್ಪಾದಕರ ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಬೀಜಗಳ ಪ್ರಮಾಣೀಕರಣ, ಬೀಜಗಳ ಉತ್ಪಾದನಾ ಖಾಸಗಿ ಕಂಪನಿಗಳ ಮಾಹಿತಿ, ಉತ್ಪಾದಿಸಿದ ದಿನಾಂಕ, ಮದರ್ ಸೀಡ್ ಗಳ ವಿವರ, ಬೀಜಗಳ ಗುಣಮಟ್ಟ ಮಾಹಿತಿಗಳ ಸಂಪೂರ್ಣ ಟ್ರ್ಯಾಕಿಂಗ್ ಮಾಡಿ ನಿಗಾ ವಹಿಸಲಾಗುತ್ತಿದೆ ಎಂದು ತಿಳಿಸಿದರು.

Share