Connect with us


      
ಕರ್ನಾಟಕ

ಮಹದಾಯಿ ಅನುಷ್ಠಾನಕ್ಕೆ ಕಾಂಗ್ರೆಸ್ನಿಂದ ಟ್ರ್ಯಾಕ್ಟರ್ ರ್‍ಯಾಲಿ

Iranna Anchatageri

Published

on

ಬೆಂಗಳೂರು: ಮಾರ್ಚ್ 28 (ಯು.ಎನ್.ಐ.) ಮಹದಾಯಿ ಯೋಜನೆ ಅನುಷ್ಠಾನ ಕುರಿತು ಚರ್ಚಿಸಲು ಉತ್ತರ ಕರ್ನಾಟಕ ಭಾಗದ ಶಾಸಕರು ಹಾಗೂ ಮುಖಂಡರ ಸಭೆಯನ್ನು ಡಾಲರ್ಸ್ ಕಾಲೋನಿಯ ಎಚ್.ಕೆ.ಪಾಟೀಲ್ ನಿವಾಸದಲ್ಲಿ ನಡೆಸಲಾಯಿತು. ಮಹದಾಯಿ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ನಿಂದ ಟ್ರ್ಯಾಕ್ಟರ್ ರ್‍ಯಾಲಿ ನಡೆಸಲು ನಾಯಕರು ನಿರ್ಧಾರ ಕೈಗೊಂಡರು.

ಮೇಕೆದಾಟು ಪಾದಯಾತ್ರೆಯಂತೆ ಮಹದಾಯಿ ಹೋರಾಟವನ್ನು ಆರಂಭಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು. ಮಹಾದಾಯಿ ಯೋಜನೆ ಅನುಷ್ಠಾನಕ್ಕಾಗಿ ಹೋರಾಟ ಮಾಡಲು ನಿರ್ಧಾರ ಮಾಡಿದ್ದೇವೆ. ಮಹದಾಯಿ ಯೋಜನೆ ಉತ್ತರ ಕರ್ನಾಟಕ ಭಾಗದ ಜನರ ಉಸಿರಾಗಿದೆ. ಮಹಾದಾಯಿ ಅನುಷ್ಠಾನಕ್ಕಾಗಿ ಪಾದಯಾತ್ರೆ ಮಾಡಬೇಕಾ? ಟ್ರ್ಯಾಕ್ಟರ್ ರ್‍ಯಾಲಿ ಮಾಡಬೇಕಾ ಅನ್ನೋದು ಗೊತ್ತಿಲ್ಲ. ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಟ್ರ್ಯಾಕ್ಟರ್ ರ್‍ಯಾಲಿಗೆ ಸಲಹೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ರ್‍ಯಾಲಿ ನಡೆಸಲು ಉದ್ದೇಶಿಸಲಾಗಿದೆ. ಮೇ ಮೊದಲನೇ ವಾರ ಅಥವಾ ಎರಡನೇ ವಾರದಲ್ಲಿ 6 ರಿಂದ 8 ದಿನಗಳ ಕಾಲ ಟ್ರ್ಯಾಕ್ಟರ್ ರ್‍ಯಾಲಿ ನಡೆಸಲು ನಿರ್ಧರಿಸಲಾಗಿದೆ. ಸರಿಯಾದ ದಿನಾಂಕ ನಿಗದಿ ಮಾಡುತ್ತೇವೆ ಎಂದು ತಿಳಿಸಿದರು.

ಸಭೆಯಲ್ಲಿ ಭಾಗಿಯಾಗಿರುವವ ವಿವರ: ಶಾಸಕರು
ಹೆಚ್ ಕೆ ಪಾಟೀಲ್
ಸತೀಶ್ ಜಾರಕಿಹೊಳಿ
ಶ್ರೀನಿವಾಸ್ ಮಾನೆ
ಪ್ರಸಾದ್ ಅಬ್ಬಯ್ಯ
ಕುಸುಮಾವತಿ ಶಿವಳ್ಳಿ
ಎಂಎಲ್‌ಸಿ ಅರ್ ಬಿ ತಿಮ್ಮಾಪುರ್

ಮಾಜಿ ಶಾಸಕರು:
ಎಸ್ ಆರ್ ನಂಜಯ್ಯನ್ ಮಠ್
ಎ ಎಂ ಹಿಂಡಸಗೇರಿ
ವೀರಣ್ಣ ಮತ್ತಿಕಟ್ಟಿ
ವೀರಕುಮಾರ್ ಪಾಟೀಲ್
ಅಜಯ್ ಕುಮಾರ್ ಸರ್ ನಾಯಕ್
ಅಶೋಕ್ ಪಟ್ಟಣ್
ಐಜಿ ಸನದಿ ಜಿಎಸ್ ಪಾಟೀಲ್
ಹೆಚ್ ವೈ ಮೇಟಿ
ಆರ್ ವಿ ಪಾಟೀಲ್
ಜಿಎಸ್ ಗಡ್ಡ ದೇವರಮಠ್
ವಿಜಯಾನಂದ ಕಾಶಪ್ಪನವರ್
ರಾಮಕೃಷ್ಣ ದೊಡ್ಡ ಮನಿ
ಎನ್ ಹೆಚ್ ಕೋನರೆಡ್ಡಿ
ವಿನಯ್ ಕುಲಕರ್ಣಿ
ಸಂತೋಷ್ ಲಾಡ್, ಜೆಟಿ ಪಾಟೀಲ್
ಕೆಎನ್ ಗಡ್ಡಿ  ಹಾಗೂ ಬಿ.ಆರ್ ಯಾವಗಲ್ ಸೇರಿದಂತೆ ಎಲ್ಲಾ ಡಿಸಿಸಿ ಅಧ್ಯಕ್ಷರು ಸಭೆಯಲ್ಲಿ ಉಪಸ್ಥಿತರಿದ್ದರು.

Share