Connect with us


      
ಹಣಕಾಸು

ತಿರುಪತಿ ತಿಮ್ಮಪ್ಪನಿಗೂ ….. ಕೇಂದ್ರ ಸರ್ಕಾರ ಶಾಕ್….!‌

UNI Kannada

Published

on

ತಿರುಮಲ, ಜ 4 (ಯುಎನ್‌ ಐ) – ತಿರುಮಲ ತಿರುಪತಿ ದೇವಸ್ಥಾನ( ಟಿಟಿಡಿ) ಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ಟಿ ಟಿ ಡಿಯ ಎಫ್‌ ಸಿ ಆರ್‌ ಎ ಪರವಾನಗಿ ನವೀಕರಿಸಿಲ್ಲ. ಇದರಿಂದ ವಿದೇಶಿ ದೇಣಿಗೆ ಸಂಗ್ರಹಿಸಲು ಟಿಟಿಡಿಗೆ ಸಾಧ್ಯವಾಗುತ್ತಿಲ್ಲ. ಧಾರ್ಮಿಕ ದತ್ತಿ ಸಂಸ್ಥೆಗಳು ವಿದೇಶಿ ದೇಣಿಗೆ ಸಂಗ್ರಹಿಸಲು ಕೇಂದ್ರ ಗೃಹ ಸಚಿವಾಲಯದ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‌ ಸಿ ಆರ್‌ ಎ) ಪರವಾನಗಿ ಕಡ್ಡಾಯವಾಗಿದೆ.. . ಒಮ್ಮೆ ಅರ್ಜಿ ಸಲ್ಲಿಸಿದರೆ, ಪರವಾನಗಿ ಐದು ವರ್ಷಗಳ ಕಾಲ ಮುಂದುವರಿಯಲಿದೆ.

ಟಿಟಿಡಿ ಪರವಾನಗಿ ಅವಧಿ … ಡಿಸೆಂಬರ್ 2020 ರೊಳಗೆ ಮುಕ್ತಾಯಗೊಂಡಿದೆ. ಪರವಾನಗಿ ನವೀಕರಣಗೊಳಿಸಿಕೊಳ್ಳಲು ಕಳೆದೊಂದು ವರ್ಷದಿಂದ ಟಿಟಿಡಿ ಹಲವಾರು ಪ್ರಯತ್ನ ಮಾಡಿದೆ. ಆದರೆ, ತಿದ್ದುಪಡಿ ನಿಯಮಗಳಂತೆ ಪರವಾನಗಿ ನವೀಕರಣಗೊಳಿಸಿಕೊಳ್ಳಲು ಟಿಟಿಡಿಗೆ ಸಾಧ್ಯವಾಗಿಲ್ಲ. ದೇಶಾದ್ಯಂತ 18,778 ಸಂಸ್ಥೆಗಳ ಪರವಾನಗಿ ಡಿಸೆಂಬರ್ 31 ರಂದು ಮುಕ್ತಾಯಗೊಂಡಿದೆ. 12,989 ಸಂಸ್ಥೆಗಳು ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದರೆ, 5,789 ಸಂಸ್ಥೆಗಳು ಯಾವುದೇ ಅರ್ಜಿ ಸಲ್ಲಿಸಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಅಧಿಕೃತವಾಗಿ ಪ್ರಕಟಿಸಿದೆ. 2020-21ರಲ್ಲಿ ಟಿಟಿಡಿ ಒಂದು ರೂಪಾಯಿ ವಿದೇಶಿ ದೇಣಿಗೆಯನ್ನು ಸ್ವೀಕರಿಸಿಲ್ಲ. ಈ ಹಿಂದೆ ಟಿಟಿಡಿ ವಿದೇಶಿ ಭಕ್ತರಿಂದ ದೇಣಿಗೆ ಪಡೆಯುತ್ತಿತ್ತು. ಪರವಾನಗಿ ನವೀಕರಿಸಲಾಗದ ಕಾರಣ ಟಿಟಿಡಿ ವಿದೇಶಿ ದೇಣಿಗೆ ಸಂಗ್ರಹಿಸಲು ಯಾವುದೇ ಅನುಮತಿ ಹೊಂದಿಲ್ಲ.

Share