Connect with us


      
ವಿದೇಶ

ಪ್ಯಾರಿಸ್‌ನ ಟರ್ಕಿಯ ರಾಯಭಾರಿ ಕಚೇರಿ ಸಿಬ್ಬಂದಿ ಮೇಲೆ ದಾಳಿ!

Iranna Anchatageri

Published

on

ಅಂಕಾರಾ: ಮೇ 13 (ಯು.ಎನ್‌.ಐ./ಸ್ಪುಟ್ನಿಕ್) ಪ್ಯಾರಿಸ್‌ನಲ್ಲಿರುವ ಟರ್ಕಿಶ್ ಕಾನ್ಸುಲೇಟ್ ಜನರಲ್ ಮೇಲೆ ಸುಧಾರಿತ ಸ್ಫೋಟಕ ಸಾಧನದಿಂದ ದಾಳಿ ನಡೆಸಲಾಗಿದೆ. ಈ ದಾಳಿಯ ಪರಿಣಾಮವಾಗಿ ಗೋಡೆಗಳು ಮತ್ತು ಕಿಟಕಿಗಳಿಗೆ ಹಾನಿಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಸನ್ ಡಾಕಿಕಾ ನ್ಯೂಸ್ ಪೋರ್ಟಲ್ ಗುರುವಾರ ತಡರಾತ್ರಿ ವರದಿ ಮಾಡಿದೆ. ಘಟನೆಯ ಕುರಿತು ಪ್ಯಾರಿಸ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಾಳಿಯ ನಂತರ ಕಾನ್ಸುಲೇಟ್ ಜನರಲ್ ಪ್ರದೇಶದಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ.

Share