Connect with us


      
ವಿದೇಶ

ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಅವಳಿ ಭೂಕಂಪ; 22 ಸಾವು

Vanitha Jain

Published

on

ತುರ್ಕಮೆನಿಸ್ತಾನ: ಜನೆವರಿ ೧೮ (ಯು.ಎನ್.ಐ.) ತುರ್ಕಮೆನಿಸ್ತಾನದ ಗಡಿಯಲ್ಲಿ ಅಫ್ಘಾನಿಸ್ತಾನದ ಪಶ್ಚಿಮ ಬದ್ಘಿಸ್ ಪ್ರಾಂತ್ಯದಲ್ಲಿ ಎರಡು ಭೂಕಂಪಗಳು ಸಂಭವಿಸಿದ್ದು, ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭೂಕಂಪದಲ್ಲಿ ಹಲವಾರು ಮನೆಗಳು ನಾಶವಾಗಿವೆ ಎಂದು ಪ್ರಾಂತ್ಯದ ಸಂಸ್ಕೃತಿ ಮತ್ತು ಮಾಹಿತಿ ಇಲಾಖೆಯ ಮುಖ್ಯಸ್ಥ ಬಾಸ್ ಮೊಹಮ್ಮದ್ ಸರ್ವಾರಿ ಹೇಳಿದ್ದಾರೆ.

ಯುಎಸ್ ಜಿಯೋಲಾಜಿಕಲ್ ಸರ್ವೇ ಪ್ರಕಾರ ಮಧ್ಯಾಹ್ನ 2 ಗಂಟೆಗೆ 5.3 ತೀವ್ರತೆಯ ಭೂಕಂಪ ಉಂಟಾಗಿದೆ ಮತ್ತು ಸ್ಥಳೀಯ ಸಮಯ ಸಂಜೆ 4 ಗಂಟೆಗೆ 4.9 ರ ತೀವ್ರತೆಯ ಎರಡನೇ ಭೂಕಂಪವಾಗಿದೆ. ಪ್ರಾಂತೀಯ ರಾಜಧಾನಿ ಕ್ವಾಲಾ-ಇ-ನಾವ್ ನ ಪೂರ್ವಕ್ಕೆ 41 ಕಿಲೋಮೀಟರ್ (25 ಮೈಲಿ) ಮತ್ತು ಆಗ್ನೇಯಕ್ಕೆ 50 ಕಿಲೋಮೀಟರ್ (31 ಮೈಲುಗಳು) ಆಳದಲ್ಲಿ ಸಂಭವಿಸಿದೆ ಎಂದು ಹೇಳಿದೆ.

ಸರ್ವಾರಿ ಪ್ರಕಾರ, ಹೆಚ್ಚು ಪ್ರಬಲವಾದ ಕಂಪನಗಳು ಪ್ರಾಂತ್ಯದ ದಕ್ಷಿಣ ತುದಿಯಲ್ಲಿರುವ ಖಾದಿಸ್ ಜಿಲ್ಲೆಗೆ ಅಪ್ಪಳಿಸಿವೆ. ಅಲ್ಲಿ ಹೆಚ್ಚಿನ ಹಾನಿ ಮತ್ತು ಸಾವುಗಳು ಸಂಭವಿಸಿವೆ. ಅಧಿಕಾರಿಗಳು ಇನ್ನೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಮೊದಲ 4.9 ಭೂಕಂಪವು ಮುಕುರ್ ಜಿಲ್ಲೆಯಲ್ಲಿ ಸಂಭವಿಸಿತ್ತು ಎಂದು ಹೇಳಿದರು.

ಪ್ರಾಂತ್ಯದಾದ್ಯಂತ ಕಂಪನದ ಅನುಭವವಾಗಿದೆ. ಪ್ರಾಂತೀಯ ರಾಜಧಾನಿ ಕ್ವಾಲಾ-ಎ-ನಾವ್ ನಲ್ಲಿ ಕೆಲವು ಮನೆಗಳು ಬಿರುಕು ಬಿಟ್ಟಿವೆ ಆದರೆ ಯಾವುದೇ ದೊಡ್ಡ ಹಾನಿಯಾಗಿಲ್ಲ ಎಂದು ಎಂದು ಸರ್ವಾರಿ ಹೇಳಿದರು.

Share