Connect with us


      
ದೇಶ

ಮಹಾರಾಷ್ಟ್ರದಲ್ಲಿ ಮತ್ತೆ 2 ಒಮೈಕ್ರಾನ್ ಪ್ರಕರಣ ಪತ್ತೆ

Vanitha Jain

Published

on

ಮುಂಬೈ, ಡಿಸೆಂಬರ್ 7, (ಯು.ಎನ್.ಐ): ಜಗತ್ತಿನಾದ್ಯಂತ ಎಲ್ಲೆಡೆ ಕೋವಿಡ್-19 ಹೊಸ ರೂಪಾಂತರ ತಳಿ ಒಮೈಕ್ರಾನ್ ಭೀತಿ ಶುರುವಾಗಿದ್ದು, ಭಾರತಕ್ಕೂ ಒಮೈಕ್ರಾನ್ ಹೆಜ್ಜೆ ಇಟ್ಟಿದೆ. ಇದರಲ್ಲಿ ಮಹಾರಾಷ್ಟ್ರದ ಮುಂಬೈನ ಇಬ್ಬರು ವ್ಯಕ್ತಿಗಳಲ್ಲಿ ಒಮೈಕ್ರಾನ್ ದೃಢಪಟ್ಟಿದ್ದು, ಈ ಮೂಲಕ ಭಾರತದಲ್ಲಿ ಒಟ್ಟು 23 ಒಮೈಕ್ರಾನ್ ಪ್ರಕರಣಗಳು ಪತ್ತೆಯಾಗಿದೆ.

ಇವರಿಬ್ಬರಲ್ಲಿ 35 ವರ್ಷದ ಒಬ್ಬರು ದಕ್ಷಿಣ ಆಫ್ರಿಕಾದ ಜೋಹನ್ಸ್‍ಬರ್ಗ್‍ನಿಂದ ನವೆಂಬರ್ 25ರಂದು ಭಾರತಕ್ಕೆ ಬಂದಿದ್ದರು. ಇನ್ನು ಅದೇ ದಿನ ಅವರ ಸ್ನೇಹಿತರಾದ 36 ವರ್ಷದವರಾದ ಅವರು ಅಮೆರಿಕಾದಿಂದ ಆಗಮಿಸಿದ್ದರು. ಇದೀಗ ಇವರಿಬ್ಬರಲ್ಲೂ ಓಮಿಕ್ರಾನ್ ಕಾಣಿಸಿಕೊಂಡಿದೆ ಎಂದು ಸಾರ್ವಜನಿಕ ಆರೋಗ್ಯ ಇಲಾಖೆ ತಿಳಿಸಿದೆ.

ಒಮೈಕ್ರಾನ್ ಪತ್ತೆಯಾದ ಇವರಿಬ್ಬರಲ್ಲಿ ರೋಗ ಲಕ್ಷಣಗಳಿಲ್ಲ. ಆದರೂ ಮುಂಬೈನ ಸೆವೆನ್ ಹಿಲ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಸಂಪರ್ಕಕ್ಕಿದ್ದ ವ್ಯಕ್ತಿಗಳ ಪತ್ತೆ ಕಾರ್ಯ ಮುಂದುವರೆದಿದೆ

ಈಗಾಗಲೇ ಅಪಾಯದಲ್ಲಿರುವ ದೇಶಗಳ 6263 ಅಂತರಾಷ್ಟ್ರೀಯ ಪ್ರಯಾಣಿಕರು ಮತ್ತು ಮುಂಬೈ, ಪುಣೆ ಮತ್ತು ನಾಗ್ಪುರ ವಿಮಾನ ನಿಲ್ದಾಣಕ್ಕೆ ಇತರ ದೇಶಗಳಿಂದ ಆಗಮಿಸಿದ 28,437 ರಲ್ಲಿ 635 ಪ್ರಯಾಣಿಕರಿಗೆ ಆರ್‍ಟಿ-ಪಿಸಿಆರ್ ಪರೀಕ್ಷೆ ನಡೆಸಲಾಗಿದೆ. ಅಪಾಯದಲ್ಲಿರುವ ದೇಶಗಳಿಂದ ಕೇವಲ 11 ಜನರು ಕೋವಿಡ್-19 ದೃಢಪಟ್ಟಿದೆ.

ಭಾರತದಲ್ಲಿ ಎಷ್ಟಿದೆ ಒಮೈಕ್ರಾನ್ ಪ್ರಕರಣಗಳು?
ಮಹಾರಾಷ್ಟ್ರದಲ್ಲಿ-9, ರಾಜಸ್ಥಾನದ ಜೈಪುರದಲ್ಲಿ -9, ದೆಹಲಿಯಲ್ಲಿ ಒಬ್ಬರಿಗೆ ಈಗಾಗಲೇ ಒಮೈಕ್ರಾನ್ ಕಾಣಿಸಿಕೊಂಡಿದೆ. ಈ ಮೂಲಕ ಭಾರತದಲ್ಲಿ ಒಮೈಕ್ರಾನ್ ಪ್ರಕರಣಗಳ ಸಂಖ್ಯೆ 23ಕ್ಕೆ ಏರಿಕೆಯಾದಂತಾಗಿದೆ.

Share